ಈ ಬಾರಿಯೂ ಕಪ್ ಗೆಲ್ಲುತ್ತಾ ಆರ್ಸಿಬಿ? ಮುಂದಿನ ವರ್ಷ ಕೆ.ಎಲ್. ರಾಹುಲ್ ಬೆಂಗಳೂರು ತಂಡಕ್ಕೆ ನಾಯಕ
ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಸಮರ್ಥ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಆರ್ಸಿಬಿ ತಂಡಕ್ಕೆ ಸದ್ಯ ದೀರ್ಘಕಾಳದ ವರೆಗೆ ತಂಡವನ್ನು ಮುನ್ನೆಡೆಸಬಲ್ಲ ಬಲಿಷ್ಠ ಭಾರತೀಯ ನಾಯಕನ ಅಗತ್ಯವಿದೆ.

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳು ಈ ಬಾರಿಯೂ ಕಪ್ ನಮ್ದೆ ಅಂತಿದ್ದಾರೆ. ಪ್ರತಿ ಸೀಸನ್ನಲ್ಲೂ ಆರ್ಸಿಬಿ ಕಪ್ ಗೆಲ್ಲುತ್ತಾ ಎಂಬ ಚರ್ಚೆ ಜೋರಾಗಿದೆ. ಈ ನಡುವಲ್ಲೇ ಐಪಿಎಲ್ ವಲಯದಲ್ಲಿ ಸಾಕಷ್ಟು ಚರ್ಚೆ ಆಗ್ತಾ ಇರೋದು ಕೆಎಲ್ ರಾಹುಲ್ (KL Rahul) ಆರ್ಸಿಬಿ ಸೇರುವ ವಿಚಾರ. ರಾಹುಲ್ ಆರ್ಸಿಬಿ ತಂಡಕ್ಕೆ ನಾಯಕನಾಗೋದಕ್ಕೆ ಸಾಧ್ಯನಾ ? ಅದು ನಿಜ ಅಂತಾದ್ರೆ ಹೇಗೆ ಅನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಬಾರಿಯೂ ಕಪ್ ಗೆಲ್ಲುತ್ತಾ ಆರ್ಸಿಬಿ ?
ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಸದ್ಯ ಬಲಿಷ್ಠವಾಘಿದೆ. ವಿರಾಟ್ ಕೊಹ್ಲಿ ಕೂಡ ಸದ್ಯ ಅದ್ಬುತ ಫಾರ್ಮ್ನಲ್ಲಿದ್ದಾರೆ. ಆರ್ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ಕೂಡ ಬಲಿಷ್ಠವಾಗಿದೆ. ಸತತ ಗೆಲುವುಗಳಿಂದ ಗೆದ್ದು ಬೀಗುತ್ತಿರುವ ಆರ್ಸಿಬಿಗೆ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬಲ ಹೆಚ್ಚು ಶಕ್ತಿಯನ್ನು ತಂದುಕೊಟ್ಟಿದೆ. ಈ ಬಾರಿಯೂ ಪ್ಲೇ ಆಫ್ ಹಂತ ಪ್ರವೇಶಿಸಿರುವ ಆರ್ಸಿಬಿ ಈ ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
ಐಪಿಎಲ್ 2027 : ಆರ್ಸಿಬಿ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಐಪಿಎಲ್ 2027ಕ್ಕೆ ಆರ್ಸಿಬಿ ತಂಡ ಇನ್ನಷ್ಟು ಬಲಿಷ್ಠವಾಗಲಿದೆ. ಆರ್ಸಿಬಿ ತಂಡವನ್ನು ಮುಂದಿನ ಬಾರಿ ಕೆಎಲ್ ರಾಹುಲ್ ನಾಯಕನಾಗಿ ಪ್ರತಿನಿಧಿಸುವುದು ಖಚಿತ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಅದ್ಬುತವಾಗಿ ಆಡುತ್ತಿದ್ದಾರೆ. ರಾಹುಲ್ ಆಟಕ್ಕೆ ಮನಸೋತಿರುವ ಕನ್ನಡಿಗರು ಕೆಎಲ್ ರಾಹುಲ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿ ಅನ್ನೋ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
Also Read : RCB vs PBKS: ಕಿಂಗ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಸೋಶಿಯಲ್ ಮೀಡಿಯಾ ಶೇಕ್ !
ಕೆಎಲ್ ರಾಹುಲ್ ಟ್ರೇಡ್ ಮಾಡುತ್ತಾ ಆರ್ಸಿಬಿ ?
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್ ಮುಗಿದ ಬೆನ್ನಲ್ಲೇ ಫ್ರಾಂಚೈಸಿಗಳ ನಡುವೆ ಆಟಗಾರರನ್ನು ಅದಲು-ಬದಲು ಮಾಡಿಕೊಳ್ಳಲು (Trade) ಅವಕಾಶ ಇರುತ್ತದೆ. ಆರ್ಸಿಬಿ ಮ್ಯಾನೇಜ್ಮೆಂಟ್ ದೆಹಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ನಡೆಸಿ, ದೊಡ್ಡ ಮೊತ್ತಕ್ಕೆ ಅಥವಾ ಆಟಗಾರರ ವಿನಿಮಯದ ಮೂಲಕ ರಾಹುಲ್ ಅವರನ್ನು ತಂಡಕ್ಕೆ ಕರೆ ತರಲು ಅವಕಾಶವಿದೆ.
ನಾಯಕನ ಹುಡುಕಾಟದಲ್ಲಿದೆ ಆರ್ಸಿಬಿ
ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಸಮರ್ಥ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಆರ್ಸಿಬಿ ತಂಡಕ್ಕೆ ಸದ್ಯ ದೀರ್ಘಕಾಳದ ವರೆಗೆ ತಂಡವನ್ನು ಮುನ್ನೆಡೆಸಬಲ್ಲ ಬಲಿಷ್ಠ ಭಾರತೀಯ ನಾಯಕನ ಅಗತ್ಯವಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಕಾರಣದಿಂದಲೇ ಕನ್ನಡಿಗ ಕೆಎಲ್ ರಾಹುಲ್ ಅವರಂತಹ ಬಲಿಷ್ಠ ನಾಯಕನ ಅಗತ್ಯವಿದೆ. ಒಂದೊಮ್ಮೆ ಶಾಂತ ಸ್ವಭಾವದ ಕೆಎಲ್ ರಾಹುಲ್ ಆರ್ಸಿಬಿ ತಂಡಕ್ಕೆ ಸಿಕ್ರೆ ಅದು ದೊಡ್ಡ ಪ್ಲಸ್ ಪಾಯಿಂಟ್. ಅದ್ರಲ್ಲೂ ರಾಹುಲ್ ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ತಂಡಗಳನ್ನು ಮುನ್ನೆಡೆಸಿದ ಅನುಭವ ಹೊಂದಿದ್ದಾರೆ.
ALso Read : IPL 2026: ಹಾರ್ದಿಕ್ ಪಾಂಡ್ಯ ಮುಂಬೈ ತಂಡದಿಂದ ಹೊರಗುಳಿದಿದ್ದು ಯಾಕೆ ? ಅಸಲಿ ಕಥೆ ಬಿಚ್ಚಿಟ್ಟ ಮುಂಬೈ ಇಂಡಿಯನ್ಸ್
ತವರಿನ ತಂಡಕ್ಕೆ ಮರಳುವ ರಾಹುಲ್ ಆಸೆ
ಕೆ.ಎಲ್. ರಾಹುಲ್ ಮೂಲತಃ ಕರ್ನಾಟಕದವರಾಗಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಅವರ ಹೋಮ್ ಗ್ರೌಂಡ್ ಆಗಿದೆ. ಅದ್ರಲ್ಲೂ ರಾಹುಲ್ ಈ ಹಿಂದೆ ಆರ್ಸಿಬಿ ತಂಡದ ಪರವಾಗಿ ಆಡಿದ್ದರು. ಕನ್ನಡಿಗನೇ ಬೆಂಗಳೂರು ತಂಡಕ್ಕೆ ನಾಯಕನಾಗಬೇಕು ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಕನಸು. ಸ್ಥಳೀಯ ಆಟಗಾರನಿಗೆ ನಾಯಕತ್ವ ನೀಡಿದರೆ ತಂಡದ ಬ್ರ್ಯಾಂಡ್ ಮೌಲ್ಯ ಮತ್ತು ಅಭಿಮಾನಿಗಳ ಬೆಂಬಲ ದುಪ್ಪಟ್ಟಾಗಲಿದೆ.
ಗೂಗಲ್ ಟ್ರೆಂಡಿಂಗ್ನಲ್ಲಿ ರಾಹುಲ್-ಆರ್ಸಿಬಿ ಕ್ರೇಜ್
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗೂಗಲ್ ಸರ್ಚ್ನಲ್ಲಿ “KL Rahul to RCB” ಅನ್ನೋ ವಿಚಾರ ಸದ್ಯ ಸಾಕಷ್ಟು ಸರ್ಚ್ ಆಗುತ್ತಿದೆ. ಒಂದೊಮ್ಮೆ ಮುಂದಿನ ಐಪಿಎಲ್ ಸೀಸನ್ಗೂ ಮುನ್ನ ಈ ಟ್ರೇಡಿಂಗ್ ಪ್ರಕ್ರಿಯೆ ಯಶಸ್ವಿಯಾದರೆ, ಐಪಿಎಲ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಟ್ರಾನ್ಸ್ಫರ್ ಆಗಲಿದೆ. ಸದ್ಯಕ್ಕೆ ಅಭಿಮಾನಿಗಳು ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿ ಎಂದು ಪ್ರಾರ್ಥಿಸುತ್ತಾ, ಮುಂದಿನ ವರ್ಷ ಕನ್ನಡಿಗ ರಾಹುಲ್ ತಂಡ ಮುನ್ನಡೆಸಲಿ ಎಂದು ಆಶಿಸುತ್ತಿದ್ದಾರೆ.
rcb ipl trophy 2026 prediction kl Rahul captain kannada news



