ಹೀರೋ, ಟಿವಿಎಸ್ ಮತ್ತು ಓಲಾ : ಇವುಗಳಲ್ಲಿ ಯಾವುದು ಅಗ್ಗದ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ?
ನೀವು ಕಡಿಮೆ ಬೆಲೆಗೆ ಉತ್ತಮ ಬ್ಯಾಟರಿ ಬಾಳಿಕೆಯ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಅಂತಹ ಟಾಪ್ 5 ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ.
ಪಶ್ಚಿಮ ಏಷ್ಯಾದ ಯುದ್ಧ ಬಿಕ್ಕಟ್ಟಿನ ಈ ಸಮಯದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೇರಿದೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಪೆಟ್ರೋಲ್, ಡೀಸಲ್ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅದೇ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆಯೂ ಕರೆ ನೀಡಿದ್ದಾರೆ. ಭಾರತದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳು ಲಭ್ಯವಿದೆ. ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸ್ಕೂಟರ್ ಅಗತ್ಯವಾಗಿ ಬೇಕು. ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕು, ಆದರೆ ಬೆಲೆ ಹೆಚ್ಚು ಎಂದು ಯೋಚಿಸಿ ಹಿಂದೇಟಾಕುವ ಅಗತ್ಯವಿಲ್ಲ. ಉತ್ತಮ ಬ್ಯಾಟರಿ ಬಾಳಿಕೆ, ಹೆಚ್ಚು ಮೈಲೇಜ್ ನೀಡುವ ಜೊತೆಗೆ 60,000 ರೂ. ಒಳಗಿನ ಎಲೆಕ್ಟ್ರಿಕ್ ಸ್ಕೂಟರ್ಗಳು ಭಾರತದ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ನಗರ ಸಂಚಾರಕ್ಕೆ ಬೆಸ್ಟ್ ಎನಿಸುವ 5 ಅಗ್ಗದ ಬೆಲೆಯ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ಗಳು ಇಲ್ಲಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇವುಗಳಲ್ಲಿ ಒಂದನ್ನು ಆಯ್ದು ಕೊಳ್ಳಬಹುದು.
ವಿಡಾ ವಿಎಕ್ಸ್2 ಗೋ
ಹೀರೋದ ವಿಡಾ ಬ್ರಾಂಡ್ ಸ್ಕೂಟರ್ಗಳು ದಿನೇ ದಿನೇ ಜನಪ್ರಿಯತೆಯನ್ನು ಗಳಿಸುತ್ತಿವೆ. BaaS ಯೋಜನೆಯಿಂದಾಗಿ, ಈ ಸ್ಕೂಟರ್ಗಳು ಗಮನಾರ್ಹವಾಗಿ ಕಡಿಮೆ ಬೆಲೆಗೆ ದೊರೆಯುತ್ತಿವೆ. ಈ ಯೋಜನೆಯೊಂದಿಗೆ, ವಿಡಾ VX2 Go ಮಾದರಿಯು ಕೇವಲ ₹44,990 (ಎಕ್ಸ್-ಶೋರೂಂ) ಗೆ ಲಭ್ಯವಿರುತ್ತದೆ. ಈ ಸ್ಕೂಟರ್ ಸಿಂಗಲ್ ಚಾರ್ಜ್ನಲ್ಲಿ 92 ಕಿ.ಮೀ ವರೆಗೆ ಪ್ರಯಾಣಿಸಬಹುದು ಮತ್ತು ಗಂಟೆಗೆ 70 ಕಿ.ಮೀ. ಗರಿಷ್ಠ ವೇಗವನ್ನು ನೀಡುತ್ತದೆ.
ಟಿವಿಎಸ್ ಆರ್ಬಿಟರ್ ವಿ1
ಇದು ಟಿವಿಎಸ್ ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಬ್ಯಾಟರಿ ಚಂದಾದಾರಿಕೆ ಯೋಜನೆ (BaaS) ನೊಂದಿಗೆ ಇದರ ಎಕ್ಸ್ ಶೋ ರೂಂ ಬೆಲೆ ₹49,999. ಇದಕ್ಕೆ ತಿಂಗಳಿಗೆ ಕನಿಷ್ಠ ₹862 ವೆಚ್ಚವಾಗುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 86 ಕಿ.ಮೀ ಓಡಿಸಬಹುದು. ಇದು ಪ್ರತಿ ಗಂಟೆಗೆ 68 ಕಿ.ಮೀ ಗರಿಷ್ಠ ವೇಗ ನೀಡುತ್ತದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಆಟೋಗೆ ಮಾತ್ರ ಅನುಮತಿ! ಪೆಟ್ರೋಲ್, ಡೀಸೆಲ್, CNG ಆಟೋ ರಿಜಿಸ್ಟ್ರೇಷನ್ಗೆ ಬ್ರೇಕ್
ಓಲಾ S1X
ಓಲಾ ಎಲೆಕ್ಟ್ರಿಕ್ ತನ್ನ ಅಗ್ಗದ ಮಾದರಿಯಾದ S1X (2kWh) ಬೆಲೆಯನ್ನು ಹಲವಾರು ಬಾರಿ ಕಡಿಮೆ ಮಾಡಿದೆ. ಈಗ ಅದರ ಬೆಲೆ 50,000 ರೂಪಾಯಿಗಳನ್ನು ತಲುಪಿದೆ. ಈ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 49,999 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಇದು 108 ಕಿಲೋಮೀಟರ್ ವ್ಯಾಪ್ತಿ ನೀಡುತ್ತದೆ. ಇದರ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಗರಿಷ್ಠ ವೇಗ, ಒಂದು ಗಂಟೆಗೆ 90 ಕಿಲೋಮೀಟರ್ ಆಗಿದೆ.
ಬೌನ್ಸ್ ಇನ್ಫಿನಿಟಿ E1
ಟಿವಿಎಸ್, ವಿಡಾ ಮತ್ತು ಓಲಾ ಜೊತೆಗೆ, ಬೌನ್ಸ್ ಇನ್ಫಿನಿಟಿ E1 ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಸ್ಕೂಟರ್ ಬೆಲೆ ₹55,000 (ಎಕ್ಸ್-ಶೋರೂಂ). ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 70 ಕಿ.ಮೀ ವರೆಗೆ ಚಲಿಸಬಲ್ಲದು. ಜೊತಗೆ ಗಂಟೆಗೆ 65 ಕಿ.ಮೀ ಗರಿಷ್ಠ ವೇಗವನ್ನು ನೀಡುತ್ತದೆ.
ಝೆಲಿಯೊ ಗ್ರೇಸಿ I
ಭಾರತದ ಆಟೋ ಮಾರುಕಟ್ಟೆಯಲ್ಲಿ ಬಜೆಟ್ನಲ್ಲಿ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕೆಂದಿದ್ದರೆ ಝೆಲಿಯೊ ಗ್ರೇಸಿ I ಉತ್ತಮ ಆಯ್ಕೆಯಾಗಿದೆ. ಈ ಸ್ಕೂಟರ್ ನ ಬೆಲೆ ₹54,000 (ಎಕ್ಸ್-ಶೋರೂಂ). ಇದನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 70 ಕಿ.ಮೀ.ವರೆಗೆ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ.



