ಅಧಿಕ ಮಾಸದ ಮೊದಲ ಗುರು ಪ್ರದೋಷ ವ್ರತ 2026 : ಪೂಜಾ ಸಮಯ, ವ್ರತಾಚರಣೆ ತಿಳಿಯಿರಿ

ಪ್ರತಿ ಮಾಸದಲ್ಲಿ ಬರುವ ಎರಡು ಪಕ್ಷಗಳಾದ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಹದಿಮೂರನೇ ದಿನದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿದೆ. ಆದ್ದರಿಂದ ಭಕ್ತರು ಎರಡು ಪ್ರದೋಷ ಉಪವಾಸದ ಬದಲಿಗೆ ನಾಲ್ಕು ಪ್ರದೋಷ ಉಪವಾಸವನ್ನು ಆಚರಿಸಿ ಪುಣ್ಯ ಗಳಿಸುವ ಭಾಗ್ಯವನ್ನು ಪಡೆದಿರುತ್ತಾರೆ.

ಶಿವ ಮತ್ತು ಪಾರ್ವತಿ ದೇವಿಗೆ ಅರ್ಪಿತವಾದ ಪ್ರದೋಷ ವ್ರತಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಈ ಪ್ಸದೋಷದ ಹೆಸರನ್ನು ತ್ರಯೋದಶಿ ತಿಥಿ ಬರುವ ದಿನಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಪ್ರತಿ ಮಾಸದಲ್ಲಿ ಬರುವ ಎರಡು ಪಕ್ಷಗಳಾದ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಹದಿಮೂರನೇ ದಿನದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿದೆ. ಆದ್ದರಿಂದ ಭಕ್ತರು ಎರಡು ಪ್ರದೇಷ ಉಪವಾಸದ ಬದಲಿಗೆ ನಾಲ್ಕು ಪ್ರದೋಷ ಉಪವಾಸವನ್ನು ಆಚರಿಸಿ ಪುಣ್ಯ ಗಳಿಸುವ ಭಾಗ್ಯವನ್ನು ಪಡೆದಿರುತ್ತಾರೆ. ಈ ವರ್ಷ ಅಧಿಕ ಜ್ಯೇಷ್ಠ ಮಾಸವು ಮೇ17 ರಿಂದ ಪ್ರಾರಂಭವಾಗಿದ್ದು ಜೂನ್‌ 15 ರವರೆಗೆ ಇರಲಿದೆ. ಈ ಅಧಿಕ ಮಾಸದ ಮೊದಲ ಪ್ರದೋಷ ಉಪವಾಸವನ್ನು ಗುರುವಾರ ಮೇ 28, ರಂದು ಆಚರಿಸಲಾಗುತ್ತದೆ. ಈ ಉಪವಾಸವು ಗುರುವಾರ ಬಂದಿರುವುದರಿಂದ ಇದನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಪುರುಷೋತ್ತಮ ಮಾಸದಲ್ಲಿನ ಪ್ರದೋಷ ಉಪವಾಸಗಳು ಇತರ ತಿಂಗಳುಗಳಿಗಿಂತ ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗಿದೆ.

ಅಧಿಕ ಮಾಸ ಪ್ರದೋಷ ಉಪವಾಸ ದಿನಾಂಕ ಮತ್ತು ವ್ರತ ಸಮಯ

ತ್ರಯೋದಶಿ ತಿಥಿ ಆರಂಭ: ಮೇ 28, 2026, ಬೆಳಗ್ಗೆ 07:56ಕ್ಕೆ

ತ್ರಯೋದಶಿ ತಿಥಿಯ ಅಂತ್ಯ: ಮೇ 29, 2026 ಬೆಳಿಗ್ಗೆ 09:50 ಕ್ಕೆ

ಉದಯತಿಥಿ ಮತ್ತು ಉಪವಾಸ ದಿನಾಂಕ: 28 ಮೇ 2026 (ಗುರುವಾರ)

ಪ್ರದೋಷ ಕಾಲ ಪೂಜೆ ಮುಹೂರ್ತ: ಸಂಜೆ ಗುರುವಾರ 07:12 ರಿಂದ 09:15 (ಕಾಲ: 2 ಗಂಟೆ 2 ನಿಮಿಷಗಳು)

ಇದನ್ನೂ ಓದಿ: ಸ್ವರಾಶಿ ಮಿಥುನಕ್ಕೆ ಬುಧ ಗ್ರಹದ ಸಂಚಾರ : ಭದ್ರ ರಾಜಯೋಗ ಸೃಷ್ಟಿಯಿಂದ ಈ 5 ರಾಶಿಯವರ ಬಾಳಲ್ಲಿ ಬೆಳಕು

ಜ್ಯೇಷ್ಠ ಅಧಿಕ ಮಾಸ ಪ್ರದೋಷ ವ್ರತ ಪರಿಹಾರ

ಅಧಿಕ ಮಾಸದ ಈ ಮೊದಲ ಪ್ರದೋಷ ಉಪವಾಸದಂದು ಶಿವನಿಗೆ ವಿಶೇಷ ಪೂಜೆ ಮಾಡುವುದರಿಂದ ಅನೇಕ ರೀತಿಯ ಗ್ರಹ ದೋಷಗಳಿಂದ ಪರಿಹಾರ ಸಿಗುತ್ತದೆ.

  • ಚಂದ್ರ ದೋಷಕ್ಕೆ ಪರಿಹಾರ

ಪ್ರದೋಷದ ಸಮಯದಲ್ಲಿ ಸಂಜೆ, ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ.

  • ಶನಿ ದೋಷದಿಂದ ಮುಕ್ತಿಗೆ

ಶಿವನನ್ನು ಪೂಜಿಸುವಾಗ, ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.

  • ಸಂತೋಷ ಮತ್ತು ಸಮೃದ್ಧಿಗಾಗಿ

ಗುರು ಪ್ರದೋಷವಾದ್ದರಿಂದ, ಈ ದಿನದಂದು ಶಿವ ಪಂಚಾಕ್ಷರಿ ಮಂತ್ರ (ಓಂ ನಮಃ ಶಿವಾಯ) ಅಥವಾ ರುದ್ರ ಮಂತ್ರವನ್ನು ಪಠಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ.

ಜ್ಯೇಷ್ಠ ಅಧಿಕ ಮಾಸ ಪ್ರದೋಷ ವ್ರತದ ಮಹತ್ವ

  • ಗುರು ಪ್ರದೋಷ ವ್ರತವನ್ನು ಆಚರಿಸುವುದರಿಂದ ಶಿವ ಮತ್ತು ವಿಷ್ಣು ಇಬ್ಬರ ಆಶೀರ್ವಾದವೂ ದೊರಕುತ್ತದೆ.
  • ಉಪವಾಸ ಆಚರಿಸುವುದರಿಂದ ಜ್ಞಾನ, ಶಿಕ್ಷಣ, ಸಂಪತ್ತು, ಧರ್ಮ ಮತ್ತು ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ.
  • ‌ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಆಧ್ಯಾತ್ಮಿಕ ಪ್ರಗತಿ ನಡೆಯುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories