ಎಸ್ಎಸ್ಸಿ ಸಿಜಿಎಲ್ 12,256 ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಾರಂಭ : ಪದವೀಧರರು ಇದರ ಲಾಭ ಪಡೆದುಕೊಳ್ಳಿ
ಎಸ್ಎಸ್ಸಿ ಖಾಲಿ ಇರುವ ಒಟ್ಟು 12,256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ ssc.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಸ್ಟಾಫ್ ಸೆಲಕ್ಷನ್ ಕಮೀಷನ್, ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ನೇಮಕಾತಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಎಸ್ಎಸ್ಸಿ ಖಾಲಿ ಇರುವ ಒಟ್ಟು 12,256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಪದವೀಧರರಿಗೆ ಸುವರ್ಣಾವಕಾಶವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ ssc.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಫಾರ್ಮ್ ಭರ್ತಿ ಮಾಡಲು ಜೂನ್ 22, 2026 ಕೊನೆಯ ದಿನವಾಗಿದ್ದರೆ ಅರ್ಜಿ ಶುಲ್ಕವನ್ನು ಠೇವಣಿ ಇಡಲು ಕೊನೆಯ ದಿನಾಂಕ ಜೂನ್ 22 ಆಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಿಳಿಯಬೇಕಾದ ಅರ್ಹತಾ ಮಾನದಂಡಗಳೇನು? ಇಲ್ಲಿದೆ ಓದಿ.
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ : ಮೇ 21, 2026
ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ : ಜೂನ್ 22, 2026
ಅರ್ಜಿ ಶುಲ್ಕ ಪಾವತಿಸಲು ಅಂತಿಮ ದಿನಾಂಕ : ಜೂನ್ 23, 2026
ಅರ್ಜಿ ತಿದ್ದುಪಡಿಗಳನ್ನು ಮಾಡಲು ದಿನಾಂಕ : ಜೂನ್ 29 ರಿಂದ ಜುಲೈ 1, 2026 ರವರೆಗೆ
ಪರೀಕ್ಷೆ ದಿನಾಂಕ (ಸಂಭಾವ್ಯ) : ಆಗಸ್ಟ್ ನಿಂದ ಡಿಸೆಂಬರ್ 2026 ರ ನಡುವೆ
ವಿದ್ಯಾರ್ಹತೆ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಸ್ಟ್ರೀಮ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಕೆಲವು ಹುದ್ದೆಗಳ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಲಾಗಿದೆ.
ಇದನ್ನೂ ಓದಿ : ಪರೀಕ್ಷೆಯಿಲ್ಲದೇ ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ನಲ್ಲಿ ಅಪ್ರೆಂಟಿಸ್ಶಿಪ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ
ವಯೋಮಿತಿ
ಹುದ್ದೆಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. 18 ವರ್ಷದಿಂದ 32 ವರ್ಷಗಳ ಒಳಗೆ ವಯೋಮಿತಿಯನ್ನು ಎಸ್ಎಸ್ಸಿ ನೀಡಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ
ಅರ್ಜಿ ನಮೂನೆಯನ್ನು ಭರ್ತಿ ಮಾಡುವುದರ ಜೊತೆಗೆ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ₹100 ಶುಲ್ಕವನ್ನು ಪಾವತಿಸಬೇಕು, ಇದನ್ನು ಆನ್ಲೈನ್ನಲ್ಲಿ ಪಾವತಿಸಬಹುದು. SC/ST/PH ವರ್ಗದ ಅಭ್ಯರ್ಥಿಗಳು ನೇಮಕಾತಿಯಲ್ಲಿ ಭಾಗವಹಿಸಲು ಉಚಿತವಾಗಿ ಫಾರ್ಮ್ ಅನ್ನು ಭರ್ತಿ ಮಾಡಬಹುದು.
ಅರ್ಜಿ ಸಲ್ಲಿಕೆ ಹೇಗೆ?
- ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಮೊದಲುssc.gov.in ಹೋಗಿ.
- ಅಲ್ಲಿ ಮುಖಪುಟದಲ್ಲಿ ಹೊಸ ನೋಂದಣಿಗಾಗಿ ಎಂಬ ಟ್ಯಾಬ್ ಕ್ಲಿಕ್ ಮಾಡಿ.
- ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.
- ನಂತರ ಇನ್ನೊಮ್ಮೆ ಲಾಗಿನ್ ಆಗಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಭರ್ತಿ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
- ಅಂತಿಮವಾಗಿ, ಫಾರ್ಮ್ ಅನ್ನು ಇನ್ನೊಮ್ಮೆ ಪರಿಶೀಲಿಸಿ ಸಲ್ಲಿಸಿ. ನಂತರ ಅದರ ಮುದ್ರಣವನ್ನು ತೆಗೆದುಕೊಳ್ಳಿ.



