ರಾಜ್ಯದ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ : ರೇಷನ್ ಕಾರ್ಡ್ ಸಮಸ್ಯೆ ನಿವಾರಣೆಗೆ ಬರ್ತಿದೆ ಸ್ಮಾರ್ಟ್ ಅನ್ನವಾಣಿ
ರಾಜ್ಯದ ಕೋಟ್ಯಂತರ ಪಡಿತರ ಚೀಟಿದಾರರ ಅಲೆದಾಟಕ್ಕೆ ಬ್ರೇಕ್ ಹಾಕಲು ಆಹಾರ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹಾಗೂ ನ್ಯಾಯಬೆಲೆ ಅಂಗಡಿಗಳ ಲೋಪದೋಷಗಳ ಕುರಿತು ಸಾರ್ವಜನಿಕರು ನೀಡುವ ದೂರುಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸಲು ಕೃತಕ ಬುದ್ಧಿಮತ್ತೆ ಆಧಾರಿತ 'ಸ್ಮಾರ್ಟ್ ಅನ್ನವಾಣಿ' ಎಂಬ ಡಿಜಿಟಲ್ ಯೋಜನೆಯನ್ನು ಜಾರಿಗೆ ತರಲು ಇಲಾಖೆ ಸಂಪೂರ್ಣ ಸಜ್ಜಾಗಿದೆ.
ರಾಜ್ಯದ ಕೋಟ್ಯಂತರ ಪಡಿತರ ಚೀಟಿದಾರರ ಅಲೆದಾಟಕ್ಕೆ ಬ್ರೇಕ್ ಹಾಕಲು ಆಹಾರ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹಾಗೂ ನ್ಯಾಯಬೆಲೆ ಅಂಗಡಿಗಳ ಲೋಪದೋಷಗಳ ಕುರಿತು ಸಾರ್ವಜನಿಕರು ನೀಡುವ ದೂರುಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸಲು ಕೃತಕ ಬುದ್ಧಿಮತ್ತೆ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ ಎಂಬ ಡಿಜಿಟಲ್ ಯೋಜನೆಯನ್ನು ಜಾರಿಗೆ ತರಲು ಇಲಾಖೆ ಸಂಪೂರ್ಣ ಸಜ್ಜಾಗಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ‘1967’ ಮ್ಯಾನುಯಲ್ ಸಹಾಯವಾಣಿಗೆ ನಿತ್ಯ ನೂರಾರು ದೂರುಗಳು ಬರುತ್ತಿದ್ದು, ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆಯನ್ನು ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಪರಿವರ್ತಿಸಲಾಗುತ್ತಿದೆ. ಮುಂದಿನ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಈ ಹೊಸ ಸೇವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಈ ಯೋಜನೆಯ ಪ್ರಮುಖ ಆಕರ್ಷಣೆ ‘ಧ್ವನಿ ಚಾಟ್ಬಾಟ್’ . ಸಾರ್ವಜನಿಕರು ತಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಸಾಕು, ಅವರ ವಾಟ್ಸಾಪ್ ಸಂಖ್ಯೆಗೆ ಇ-ಕೆವೈಸಿ ವಿವರಗಳು, ಕಳೆದ 6 ತಿಂಗಳ ಪಡಿತರ ಪ್ರಮಾಣ ಹಾಗೂ ತಮ್ಮ ನ್ಯಾಯಬೆಲೆ ಅಂಗಡಿಯ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.
Also Read: ರಾಜ್ಯ ಸರ್ಕಾರಿ ನೌಕರರಿಗೆ ಕಚೇರಿಗೆ ಹಾಜರಾಗುವ ಸಮಯದ ಬಗ್ಗೆ ಸರ್ಕಾರದ ಮಹತ್ವದ ಆದೇಶ
ಒಂದು ವೇಳೆ ಚಾಟ್ಬಾಟ್‌ನಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದಿದ್ದರೆ, ಕರೆ ತಕ್ಷಣವೇ ಉನ್ನತ ಅಧಿಕಾರಿಗಳ ಲೈವ್ ಕಾಲ್‌ಗೆ ವರ್ಗಾವಣೆಯಾಗಲಿದೆ. ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು ‘ಮೇರಾ ರೇಷನ್ ಆಪ್’ ಬಳಸಲು ಕೂಡ ಇಲಾಖೆ ಉತ್ತೇಜನ ನೀಡುತ್ತಿದೆ. ಈ ಡಿಜಿಟಲ್ ಕ್ರಾಂತಿಯಿಂದಾಗಿ ಸಾರ್ವಜನಿಕರು ಇನ್ಮುಂದೆ ಕಚೇರಿಗಳ ಮುಂದೆ ಸಾಲು ನಿಲ್ಲುವುದು ತಪ್ಪಲಿದೆ.
Good news for state ration card holders Smart Annavani is coming to solve the ration card problem



