ನಟ ದರ್ಶನ್‌ನಿಂದ ದೂರವಾದ್ರಾ ಧನ್ವೀರ್‌ : ಇನ್‌ಸ್ಟಾದಲ್ಲಿ ವಿಜಯಲಕ್ಷ್ಮೀ ಹೇಳಿದ್ದೇನು ?

darshan dhanveer gowda-friendship : ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಈ ಪೋಸ್ಟ್‌ ಧನ್ವೀರ್‌ ಹಾಗೂ ದರ್ಶನ್‌ ತೂಗುದೀಪ್‌ ದೂರವಾಗಿದ್ದಾರೆ ಅನ್ನೋದಕ್ಕೆ ಪುಷ್ಟಿ ನೀಡುವಂತಿದೆ.

darshan dhanveer gowda-friendship  : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್‌ ತೂಗುದೀಪ್‌ಗೆ ಸಂಕಷ್ಟಗಳ ಸರಮಾಲೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಂದೆಡೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಇನ್ನೊಂದೆಡೆಯಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಡಿಬಾಸ್‌ ಅಭಿಮಾನಿಗಳನ್ನು ಬಂಧಿಸಲಾಗಿದೆ. ಇದರ ನಡುವಲ್ಲೇ ಆಪ್ತ ಧನ್ವೀರ್‌ ಕೂಡ ದರ್ಶನ್‌ನಿಂದ ದೂರವಾಗಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿದೆ.

ನಟ ದರ್ಶನ್‌ ತೂಗುದೀಪ್‌ ಅರೆಸ್ಟ್‌ ಆದ ದಿನದಿಂದಲೇ ಜಾಮೀನು ಕೊಡಿಸುವುದಕ್ಕೆ ಪ್ರಯತ್ನಿಸುತ್ತಿದ್ದ ದರ್ಶನ್‌ ಆಪ್ತ, ನಟ ಧನ್ವೀರ್‌ ಇದೀಗ ನಾಪತ್ತೆ ಆಗಿದ್ದಾರೆ. ಇದೀಗ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಈ ಪೋಸ್ಟ್‌ ಧನ್ವೀರ್‌ ಹಾಗೂ ದರ್ಶನ್‌ ತೂಗುದೀಪ್‌ ದೂರವಾಗಿದ್ದಾರೆ ಅನ್ನೋದಕ್ಕೆ ಪುಷ್ಟಿ ನೀಡುವಂತಿದೆ.

ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಕೂಡ ಚೆನ್ನಾಗಿರಲಿ.. ಅದು ವಸ್ತುವೇ ಆಗಿರಲಿ, ಇಲ್ಲಾ ವ್ಯಕ್ತಿಯೇ ಆಗಿರಲಿ ಎಂದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ. ವಿಜಯ ಲಕ್ಷ್ಮೀ ಅವರ ಈ ಪೋಸ್ಟ್‌ ಪ್ರಕಟವಾಗುತ್ತಿದ್ದಂತೆಯೇ ಧನ್ವೀರ್‌ ಹಾಗೂ ದರ್ಶನ್‌ ದೂರವಾಗಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

ಆರಂಭದಲ್ಲಿ ದರ್ಶನ್‌ ತೂಗುದೀಪ್‌ ಅವರಿಗೆ ಜಾಮೀನು ಕೊಡಿಸಲು ಧನ್ವೀರ್‌ ಶ್ರಮಿಸಿದ್ದರು. ಆದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರೂ ಕೂಡ ಜಾಮೀನು ಸಿಗಲೇ ಇಲ್ಲ. ಅಲ್ಲದೇ ವರ್ಷದ ಒಳಗೆ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರವೇ ಜಾಮೀನು ಅರ್ಜಿ ವಿಚಾರಣೆಯ ಕುರಿತು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಇದೇ ಕಾರಣದಿಂದಲೇ ದರ್ಶನ್‌ ಜಾಮೀನು ಪಡೆಯಲು ಒಂದು ವರ್ಷ ಕಾಯಲೇ ಬೇಕು. ಆದರೆ ಧನ್ವೀರ್‌ ಮತ್ತು ದರ್ಶನ್‌ ದೂರವಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಲೇ ಇದೆ. ವಿಜಯಲ್ಷ್ಮೀ ಅವರ ಪೋಸ್ಟ್‌ ಸಾಥ್‌ ಕೊಡುವಂತಿದೆ. ಜೊತೆಗೆ ಧನ್ವೀರ್‌ ಕಾಣಿಸಿಕೊಳ್ಳದೇ ಇರುವುದು, ಇನ್ನಷ್ಟು ಅನುಮಾನವನ್ನು ಹುಟ್ಟುಹಾಕಿದೆ.

darshan dhanveer gowda-friendship over vijayalakshmi post sparks debate

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »