Hing Test tips: ಅಸಲಿ ಇಂಗು ಗುರುತಿಸುವುದು ಹೇಗೆ? FSSAI ಅನುಮೋದಿಸಿದ 4 ಸುಲಭ ಮನೆಮದ್ದು ಪರೀಕ್ಷೆಗಳು ಇಲ್ಲಿವೆ

Asafoetida test | Hing Test tips | Hing Checking Tips: ಗ್ರಾಹಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಮನೆಯಲ್ಲಿಯೇ ಇಂಗಿನ ಅಸಲಿತನವನ್ನು ಪರೀಕ್ಷಿಸಲು 4 ಸರಳ ವಿಧಾನಗಳನ್ನು ಶಿಫಾರಸು ಮಾಡಿದೆ. ಅವುಗಳ ವಿವರ ಇಲ್ಲಿದೆ:

ಭಾರತೀಯ ಅಡುಗೆ ಮನೆಯಲ್ಲಿ ಇಂಗಿಗೆ (Asafoetida) ಪ್ರಮುಖ ಸ್ಥಾನವಿದೆ. ತಿನಿಸುಗಳ ರುಚಿ ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಗೂ ಇದು ಸಹಕಾರಿ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಇಂಗುಗಳು ಅಸಲಿಯಾಗಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂಗಿಗೆ ಪಿಷ್ಟ (Starch), ಸೀಮೆಸುಣ್ಣದ ಪುಡಿ (Soapstone) ಹಾಗೂ ಇತರೆ ರಾಸಾಯನಿಕಗಳನ್ನು ಬೆರೆಸಿ (Hing Checking Tips) ಕಲಬೆರಕೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಗ್ರಾಹಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಮನೆಯಲ್ಲಿಯೇ ಇಂಗಿನ ಅಸಲಿತನವನ್ನು ಪರೀಕ್ಷಿಸಲು 4 ಸರಳ ವಿಧಾನಗಳನ್ನು ಶಿಫಾರಸು ಮಾಡಿದೆ. ಅವುಗಳ ವಿವರ ಇಲ್ಲಿದೆ:

ಇಂಗಿನ ಗುಣಮಟ್ಟ ತಿಳಿಯಲು 4 ಸುಲಭ ಪರೀಕ್ಷೆಗಳು

1.ಉರಿಯುವಿಕೆ ಪರೀಕ್ಷೆ (Burn Test):  ಬಾಹ್ಯ ರಾಸಾಯನಿಕಗಳ ಪತ್ತೆಗೆ.

ಸ್ವಲ್ಪ ಇಂಗನ್ನು ಸ್ಟೀಲ್ ಚಮಚದಲ್ಲಿ ತೆಗೆದುಕೊಂಡು ಅದಕ್ಕೆ ಬೆಂಕಿ ಹಚ್ಚಿ. ಅಸಲಿ ಇಂಗು ಕರ್ಪೂರದಂತೆ ಪ್ರಕಾಶಮಾನವಾದ ಜ್ವಾಲೆಯೊಂದಿಗೆ ಸಂಪೂರ್ಣವಾಗಿ ಉರಿಯುತ್ತದೆ. ಕಲಬೆರಕೆ ಇಂಗು ಈ ರೀತಿ ಉರಿಯುವುದಿಲ್ಲ.

2.ನೀರಿನ ಪರೀಕ್ಷೆ (Water Test):   ಶುದ್ಧತೆ ತಿಳಿಯಲು.

ಒಂದು ಗ್ರಾಂ ಇಂಗಿನ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕಲಕಿ. ಅಸಲಿ ಇಂಗು ನೀರಿನಲ್ಲಿ ಕರಗಿ ಹಾಲು ಬಿಳುಪು ಬಣ್ಣದ ದ್ರಾವಣವಾಗಿ ಬದಲಾಗುತ್ತದೆ ಮತ್ತು ಯಾವುದೇ ಕಸ ಕೆಳಗೆ ಉಳಿಯುವುದಿಲ್ಲ. ಕಲಬೆರಕೆ ಇಂಗಿನಲ್ಲಿ ಕಣಗಳು ತಳಭಾಗದಲ್ಲಿ ಉಳಿಯುತ್ತವೆ.

3.ಸೀಮೆಸುಣ್ಣ ಅಥವಾ ಮಣ್ಣಿನ ಪರೀಕ್ಷೆ: ಖನಿಜಗಳ ಕಲಬೆರಕೆ ತಡೆಯಲು.

ಸ್ವಲ್ಪ ಇಂಗನ್ನು ನೀರಿನಲ್ಲಿ ಬೆರೆಸಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಸಲಿ ಇಂಗು ಯಾವುದೇ ತ್ಯಾಜ್ಯವನ್ನು ತಳದಲ್ಲಿ ಬಿಡುವುದಿಲ್ಲ. ಒಂದು ವೇಳೆ ಪಾತ್ರೆಯ ತಳಭಾಗದಲ್ಲಿ ಸೀಮೆಸುಣ್ಣದ ಪುಡಿ (Soapstone) ಅಥವಾ ಮಣ್ಣು ಕುಳಿತುಕೊಂಡರೆ ಅದು ಕಲಬೆರಕೆ ಇಂಗು ಎಂಬುದನ್ನು ಸೂಚಿಸುತ್ತದೆ.

4.ಅಯೋಡಿನ್ ಪರೀಕ್ಷೆ (Iodine Test):   ಪಿಷ್ಟದ (Starch) ಪತ್ತೆಗೆ.

ಇಂಗಿನ ಮಾದರಿಗೆ ಕೆಲವು ಹನಿ ಅಯೋಡಿನ್ ಟಿಂಚರ್ (Tincture of Iodine) ಸೇರಿಸಿ. ಇಂಗು ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟ (Starch) ಬೆರೆಸಲಾಗಿದೆ ಎಂದರ್ಥ. ಬಣ್ಣ ಬದಲಾಗದಿದ್ದರೆ ಇಂಗು ಶುದ್ಧವಾಗಿದೆ ಎಂದು ತಿಳಿಯಬಹುದು.

35 ವರ್ಷಗಳ ಹಿಂದೆ ಪಡೆದ 1,000 ಸಾಲಕ್ಕೆ 25,000 ಮರಳಿಸಿದ ವ್ಯಕ್ತಿ!

ಗಮನಿಸಿ: ಈ ಮನೆಮದ್ದು ಪರೀಕ್ಷೆಗಳು ಪ್ರಾಥಮಿಕ ತಪಾಸಣೆಗಾಗಿ ಮಾತ್ರವೇ ಹೊರತು ಇವು ಪ್ರಯೋಗಾಲಯದ ಅಧಿಕೃತ ವರದಿಗಳಿಗೆ ಪರ್ಯಾಯವಲ್ಲ. ಆಹಾರದಲ್ಲಿ ಗಂಭೀರ ಕಲಬೆರಕೆ ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಲು FSSAI ಸೂಚಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.