Anna Rajan : ಮಲಯಾಳಂನ ಖ್ಯಾತ ನಟಿ ಅನ್ನಾ ರಾಜನ್ಗೆ ಸೈಬರ್ ಕಾಟ, ನಟಿಯ ಮಾರ್ಪ್ ಪೋಟೋ ವೈರಲ್
ಟಾಲಿವುಡ್, ಬಾಲಿವುಡ್ ಬೆನ್ನಲ್ಲೇ ಇದೀಗ ಖ್ಯಾತ ಮಲಯಾಲಂ ನಟಿಗೂ ಸೈಬರ್ ಕಾಟ ಶುರುವಾಗಿದೆ. ಮಲಯಾಲಂ ನಟಿ ಅನ್ನಾ ರಾಜನ್ ಅವರ ಅವರ ಪೋಟೋವನ್ನು ಮಾರ್ಪಿಂಗ್ ಮಾಡಿ, ಅಶ್ಲೀಲವಾಗಿ ಪೋಸ್ಟ್ ಮಾಡಲಾಗಿದೆ. ಈ ಕುರಿತು ನಟಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

ಟಾಲಿವುಡ್, ಬಾಲಿವುಡ್ ಬೆನ್ನಲ್ಲೇ ಇದೀಗ ಖ್ಯಾತ ಮಲಯಾಲಂ ನಟಿಗೂ ಸೈಬರ್ ಕಾಟ ಶುರುವಾಗಿದೆ. ಮಲಯಾಲಂ ನಟಿ ಅನ್ನಾ ರಾಜನ್ (Anna Rajan) ಅವರ ಅವರ ಪೋಟೋವನ್ನು ಮಾರ್ಪಿಂಗ್ ಮಾಡಿ, ಅಶ್ಲೀಲವಾಗಿ ಪೋಸ್ಟ್ ಮಾಡಲಾಗಿದೆ. ಈ ಕುರಿತು ನಟಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಸಿನಿಮಾ ತಾರೆಯರೇ ಎಐ ತಂತ್ರಜ್ಞಾನದಿಂದಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ಮಲಯಾಲಂನ ಖ್ಯಾತ ನಟಿ ಅನ್ನಾ ರಾಜನ್ ಅವರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ (Deepfake/Morphing) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ.
ಈ ಹಿಂದೆ ಬಾಲಿವುಡ್, ಟಾಲಿವುಡ್ನ ಖ್ಯಾತ ನಟಿಯರು ಸೈಬರ್ ದಾಳಿಗೆ ತುತ್ತಾಗಿರುವುದು ದೇಶದಾದ್ಯಂತ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಮಲಯಾಲಂ ನಟಿಯೂ ಇಂತಹದ್ದೇ ಜಾಲದ ಬಲೆಗೆ ಸಿಲುಕಿದ ಬೆನ್ನಲ್ಲೇ ಕಿಡಿಗೇಡಿಗಳ ವಿರುದ್ದ ಕಾನೂನು ಸಮರ ಸಾರಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಅನ್ನಾ ರೇಷ್ಮಾ ರಾಜನ್ ಆಕ್ರೋಶ
ಮಲಯಾಲಂನ ಜನಪ್ರಿಯ ನಟಿಯಾಗಿರುವ ಅನ್ನಾ ರೇಷ್ಮಾ ರಾಜನ್ (Anna Reshma Rajan) ಅವರ ಫೋಟೋಗಳನ್ನು ದುಷ್ಕರ್ಮಿಗಳು ಅಶ್ಲೀಲವಾಗಿ ಮಾರ್ಫ್ ಮಾಡಿದ್ದಾರೆ. ಈ ಸೈಬರ್ ದಾಳಿಯ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿರುವ ನಟಿ, ತಮ್ಮ ಒಪ್ಪಿಗೆಯಿಲ್ಲದೆ ಇನ್ಸ್ಟಾಗ್ರಾಮ್ನಲ್ಲಿ ಮಾರ್ಫ್ ಮಾಡಿದ ಅಶ್ಲೀಲ ಚಿತ್ರವನ್ನು ಹಂಚಿಕೊಂಡ ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಅನ್ನಾ ರೇಷ್ಮಾ ಅವರು ಕೇರಳ ಪೊಲೀಸರಿಗೆ ಮತ್ತು ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಅಶ್ಲೀಲ ಪೋಟೋಗಳನ್ನು ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಂ ಖಾತೆಗಳ ವಿವರಗಳನ್ನೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ.
ನಟಿ ಅನ್ನಾ ರೇಷ್ಮಾ ರಾಜನ್ ಹೇಳಿದ್ದೇನು ?
ಘಟನೆಯ ಬೆನ್ನಲ್ಲೇ ಈ ಕುರಿತು ನಟಿ ಅನ್ನಾ ರಾಜನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂತಹ ನೀಚ ಕೃತ್ಯವು ನನ್ನ ಘನತೆ ಮತ್ತು ವೈಯಕ್ತಿತ ಗೌಪ್ಯತೆಯನ್ನು ಉಲ್ಲಂಘಿಸಿದೆ. ಇಂತಹ ಅಶ್ಲೀಲ ವಿಷಯವನ್ನು ಸೃಷ್ಟಿಸುವವರು ಅಥವಾ ಹಂಚಿಕೊಳ್ಳುವವರು ಕಾನೂನಿನ ಅಡಿಯಲ್ಲಿ ಶಿಕ್ಷೆ ಅನುಭವಿಸಲೇ ಬೇಕು.
ನಾನು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಸದ್ಯ ನಟಿ ಅನ್ನಾ ರೇಷ್ಮಾ ರಾಜನ್ ಅವರು ಹಂಚಿಕೊಂಡಿರುವ ಪೋಸ್ಟ್ ಇದೀಗ ಸಾಮಾಜಿಜ ಜಾಲತಾಣಗಳಲ್ಲಿ ಬಾರೀ ಸಂಚಲನವನ್ನೇ ಸೃಷ್ಟಿಸಿದೆ. ಸಿನಿಮಾ ರಂಗದ ಗಣ್ಯರು, ಅಭಿಮಾನಿಗಳು ಕೂಡ ನಟಿಯ ಬೆಂಬಲಕ್ಕೆ ನಿಂತಿದ್ದಾರೆ.
ನಟಿಯರಿಗೆ ಸೈಬರ್ ಕಿರುಕುಳ ಇದೇ ಮೊದಲಲ್ಲ
ಮಲಯಾಲಂ ನಟಿ ಅನ್ನಾ ರಾಜನ್ ಈ ರೀತಿಯಾಗಿ ಸೈಬರ್ ದಾಳಿ ಅಥವಾ ಆನ್ಲೈನ್ ಕಿರುಕುಳಕ್ಕೆ ಒಳಗಾಗ್ತಾ ಇರೋದು ಇದೇ ಮೊದಲೇನಲ್ಲ. ಈ ಹಿಂದೆ ಬಾಡಿ ಶೇಮಿಂಗ್ (Body-shaming)ಗೆ ತುತ್ತಾಗಿದ್ದರು. ಇದೀಗ ಮತ್ತೊಮ್ಮೆ ಅವರ ಪೋಟೋಗಳು ಮಾರ್ಪಿಂಗ್ ಆಡುವ ಮೂಲಕ ಸೈಬರ್ ಕಳ್ಳರು ವಿಕೃತಿ ಮರೆದಿದ್ದಾರೆ.
ಯಾರು ಈ ಅನ್ನಾ ರೇಷ್ಮಾ ರಾಜನ್ ?
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದಿರುವ ಅನ್ನಾ ರೇಷ್ಮಾ ರಾಜನ್ ಮಲಯಾಲಂನ ಖ್ಯಾತ ನಟಿ. ಅವರು 2017 ರಲ್ಲಿ ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ‘ಅಂಗಮಾಲಿ ಡೈರೀಸ್’ (Angamaly Diaries) ಸಿನಿಮಾದ ಮೂಲಕ ಅವರು ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದರು. ತಮ್ಮ ಮೊದಲ ಸಿನಿಮಾದಲ್ಲಿಯೇ ಅದ್ಬುತ ನಟನೆಯ ಮೂಲಕ ಗಮನ ಸೆಳೆದಿದ್ದರು. ನಂತರದಲ್ಲಿ ಅನ್ನಾ ರಾಜನ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
malayalam actress anna rajan morphed photo viral

