ಸೋಮವಾರ, ಏಪ್ರಿಲ್ 28, 2025
HomeBreakingಪ್ರಕೃತಿಯ ಮಡಿಲಲ್ಲಿದೆ 'ನೋನಿ'ಯೆಂಬ ಸಂಜೀವಿನಿ

ಪ್ರಕೃತಿಯ ಮಡಿಲಲ್ಲಿದೆ ‘ನೋನಿ’ಯೆಂಬ ಸಂಜೀವಿನಿ

- Advertisement -
  • ರಾಜೇಶ.ಎಂ.ಕಾನರ್ಪ

ನಮ್ಮ ಪರಿಸರದಲ್ಲಿ ಅದೆಷ್ಟು ಔಷಧೀಯ ಗುಣಗಳಿರುವ ಸಸ್ಯ ಪ್ರಭೇದಗಳಿವೆ. ಪ್ರಭೇದಗಳನ್ನು ಗುರುತಿಸಿ ಅವುಗಳಲ್ಲಿ  ಔಷಧೀಯ ಗುಣಗಳಿವೆ ಎಂಬುದನ್ನು ನಾವು ತಿಳಿದುಕೊಂಡಿರುವುದಿಲ್ಲ. ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಸಹ ಮುಖ್ಯ ಪಾತ್ರವಹಿಸಿವೆ. ಕೆಲವೊಂದು ಹಣ್ಣುಗಳನ್ನು ತಿಂದರೆ ಕೆಲವೊಂದು ಕಾಯಿಲೆಗಳು ದೂರವಾಗುತ್ತದೆ. ಇದರಂತೆ ನೋನಿ ಹಣ್ಣು ಸೇವಿಸಿದರೆ ಆರೋಗ್ಯ ವೃದ್ಧಿಸುವುದು ಖಂಡಿತ.

ನೋನಿ ಗಿಡವು ಸುಮಾರು 12 ಅಡಿ ಎತ್ತರ ಬೆಳೆಯುತ್ತದೆ. ಇದರ ಗಾತ್ರ 25 ರಿಂದ 45 ಸೆಂಟಿಮೀಟರ್ ಉದ್ದ ಹಾಗೂ 8 ರಿಂದ 25 ಸೆಂಟಿಮೀಟರ್ ಅಗಲವಿರುವ ಗಿಡದ ಎಲೆಯು ಹೊಳೆಯುವಂತಿದ್ದು ಆಕರ್ಷಣೀಯವಾಗಿರುತ್ತದೆ. ವರ್ಷದಲ್ಲಿ ಎರಡು ಮೂರು ಬಾರಿ ಹಣ್ಣು ಬಿಡುವ ಈ ಸಸ್ಯದ ಕಾಯಿಗಳು ತಿಳಿ ಹಸಿರು ಬಣ್ಣವನ್ನು ಹೊಂದಿರುತ್ತದೆ. ಬೆಳೆಯುತ್ತಾ ಹೋದಂತೆ ಕಾಯಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಕಾಯಿ ಸುಮಾರು 50 ಗ್ರಾಂನಷ್ಟು ತೂಕವನ್ನು ಹೊಂದಿದ್ದು ಬಹಳಷ್ಟು ಔಷಧಿಯ ಗುಣವನ್ನು ಹೊಂದಿದೆ.

ನೋನಿ ಹಣ್ಣು ಮೂಲತಃ ಭಾರತದ ಔಷಧೀಯ ಹಣ್ಣುಗಳಲ್ಲಿ ಒಂದು. ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ಹಾಗೂ ರೋಗನಿರೋಧಕ ಹಣ್ಣು ಇದಾಗಿದ್ದು  ಈ ಹಣ್ಣು ಮೋರಿಂಡ ಸಿಕ್ರೆ ಪೋಲಿಯ ಎಂಬ ಸಸ್ಯ ಪ್ರಭೇದಕ್ಕೆ ಸೇರಿದೆ.

ಸುಮಾರು 150ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಕಾಯಿಯು ಹಲವು ಕಾಯಿಲೆಗಳ ಶಮನಕ್ಕೆ ಉಪಯುಕ್ತವಾಗಿದೆ ಮಾನಸಿಕ ಒತ್ತಡ ಅಲರ್ಜಿ ಅಸ್ತಮಾ ಕ್ಯಾನ್ಸರ್ ಗಂಟಲು ನೋವು ಕೂದಲು ಉದರುವಿಕೆ ಸಕ್ಕರೆಕಾಯಿಲೆ ಮೂತ್ರಜನಕಾಂಗದ ಕಾಯಿಲೆ ಚರ್ಮರೋಗ ಕೆಮ್ಮು ಜ್ವರಗಳಂಥ ಕಾಯಿಲೆಗಳಿಗೂ ಕೂಡ ರಾಮಬಾಣವಾಗಿದೆ. ವಿಟಮಿನ್ ಸಿ, ಎ, ಬಿ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿರುವ ನೋನಿ ಹಣ್ಣಿನ ಬಳಕೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.

ಔಷಧೀಯ ಗುಣವನ್ನು ಹೊಂದಿರುವ ಈ ನೋನಿಯ ಜೊತೆ ನೀರು, ಬೆಲ್ಲ, ಏಲಕ್ಕಿ   ಸೇರಿಸಿ ಜ್ಯೂಸ್ ಮಾಡಿದಾಗ ಹಾಲಿನಂತೆ ನೋರೆಯು ಬರುತ್ತದೆ. ಕುಡಿಯಲು ರುಚಿಕರವಾಗಿರುವ ನೋನಿ ಹಣ್ಣುಗಳನ್ನು ನಿತ್ಯವೂ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹೊಸ ಚೈತನ್ಯವನ್ನು ಪಡೆಯಬಹುದು.

ನೋನಿ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ವಿಶ್ವವಿದ್ಯಾನಿಲಯದ ಸಂಶೋಧನೆಯಿಂದಲೂ ದೃಢಪಟ್ಟಿದೆ.  ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು, ಮಾನಸಿಕ ಒತ್ತಡದಿಂದ ಮುಕ್ತರಾಗಲು, ನಿದ್ರೆಯ ಸಮಸ್ಯೆ ಇರುವವರು, ಸುಸ್ತು ಕಾಡುತ್ತಿರುವವರು, ಉಸಿರಾಟದ ಸಮಸ್ಯೆ ಇರುವವರು, ಮಲಬದ್ಧತೆ, ರಕ್ತದೊತ್ತಡ, ಕೀಲುನೋವು, ಹೃದಯಸಂಬಂಧಿ ಕಾಯಿಲೆಗಳು, ಖಿನ್ನತೆಯಿಂದ ಬಳಲುತ್ತಿರುವವರು ಹಾಗೂ ಪಿತ್ತಜನಕಾಂಗ ಮೂತ್ರಜನಕಾಂಗದ ನಿರ್ವಹಣೆಗೆ ಸುಗಮವಾಗುವಂತೆ ನೋಡಿಕೊಳ್ಳಲು ನೋನಿ ಹಣ್ಣು ನೆರವಾಗುತ್ತದೆ.

https://kannada.newsnext.live/lakhs-of-breast-milk-earning-how-much-do-you-know-for-this-mothers-milk/

ನೋನಿಯನ್ನು ಔಷಧಿಯಾಗಿ ಸೇವಿಸುವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್  ಸೇವಿಸಬೇಕು.  ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡು ಸ್ಪೂನ್, ಮಧ್ಯಾಹ್ನ  ಊಟಕ್ಕಿಂತ ಮೊದಲು 2 ಸ್ಪೂನ್ ರಸವನ್ನು ಸೇವಿಸಬೇಕು. ಕೇವಲ ಹಣ್ಣು ಮಾತ್ರವಲ್ಲದೇ ನೋನಿಯ ಎಲೆಗಳು ಕೂಡ ಬಹಳಷ್ಟು ಉಪಯುಕ್ತವಾಗಿದ್ದು ಎಲೆಯಿಂದ ತೆಗೆದ ರಸ ಅನೇಕ ರೀತಿಯ ಚರ್ಮರೋಗಗಳನ್ನು ನಿವಾರಿಸುತ್ತದೆ. ಅದ್ರಲ್ಲೂ ನೋನಿ ಎಲೆಯ ಕಷಾಯವನ್ನು ಜ್ವರ ನಿವಾರಕವಾಗಿಯೂ ಬಳಸಬಹುದು.

https://kannada.newsnext.live/eating-chicken-attack-black-fungus-is-it-true/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular