ಬುಧವಾರ, ಜೂನ್ 18, 2025
HomeSpecial Storyಋಷಿಮುನಿ ಪೋಸಿನಲ್ಲಿ ಪೋಟೋಶೂಟ್....! ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ನೆಟ್ಟಿಗರ ಕೆಂಗಣ್ಣು...!!

ಋಷಿಮುನಿ ಪೋಸಿನಲ್ಲಿ ಪೋಟೋಶೂಟ್….! ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ನೆಟ್ಟಿಗರ ಕೆಂಗಣ್ಣು…!!

- Advertisement -

ಕೇರಳ: ಇತ್ತೀಚಿನ ಫ್ರೀ ವೆಡ್ಡಿಂಗ್ ಪೋಟೋಶೂಟ್ ಗಳು ವಧು-ವರರಿಗೆ ಖುಷಿ ಕೊಡೋ ಬದಲು ಹೊಸ ಹೊಸ ವಿವಾದ ಸೃಷ್ಟಿಸುತ್ತಿವೆ. ಇಂತಹುದೇ ಹೊಸ ವಿವಾದಕ್ಕೆ ಕಾರಣವಾಗಿದೆ ಋಷಿ ವೇಷದಲ್ಲಿ ನಡೆದ ಪೋಟೋಶೂಟ್.

A2mmml E1608389557186

ಕೆಲದಿನಗಳ‌ ಹಿಂದೆ ಕೇರಳದ ಜೋಡಿಯೊಂದು ಕಾಫಿ ತೋಟದಲ್ಲಿ ನಡೆಸಿದ್ದ ಪೋಸ್ಟ್ ವೆಡ್ಡಿಂಗ್ ಹಸಿಬಿಸಿ ಪೋಸಿನ ಪೋಟೋ ಶೂಟ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಕೇರಳದ ಮತ್ತೊಂದು ಜೋಡಿ ನಡೆಸಿದ ಫ್ರೀ ವೆಡ್ಡಿಂಗ್ ಪೋಟೊಶೂಟ್ ಹಾಗೂ ಕಾನ್ಸೆಪ್ಟ್ ಹಿಂದೂ ಧರ್ಮಿಯರ ಕಣ್ಣು ಕೆಂಪಾಗಿಸಿದೆ.

A1 E1608389618410

ಋಷಿ ಹಾಗೂ ಋಷಿಮಾತೆಯಂತೆ ವೇಷಭೂಷಣ ಧರಿಸಿದ ಜೋಡಿಯೊಂದು ನದಿತೀರ,ಕಾಡಿನಲ್ಲಿ ರೋಮ್ಯಾನ್ಸ್ ಮಾಡುತ್ತಿರುವಂತೆ ಪೋಸು ನೀಡಿ ಪೋಟೋಶೂಟ್ ಮಾಡಿಸಲಾಗಿದೆ.

Photo Shoot E1608389669639

ಆದರೇ ಈ ಪೋಟೋ ಶೂಟ್ ನಲ್ಲಿ ಹಿಂದು ಧರ್ಮಿಯರಿಗೆ ಪವಿತ್ರವಾದ ಋಷಿ ಪರಂಪರೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Photo Shoot 1

ಋಷಿಯಂತೆ ವೇಷಭೂಷಣ ಧರಿಸಿದ ಈ ಯುವ ಜೋಡಿ ತೀರಾ ಕೀಳುಮಟ್ಟದ ಭಾವಾಭಿವ್ಯಕ್ತಿ‌ ನೀಡಿದ್ದು ಪೋಟೋಸ್ ವೈರಲ್ ಆಗುತ್ತಿದ್ದಂತೆ ಜನ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

A2 E1608389887242

ಪೋಟೋಶೂಟ್ ಹೆಸರಿನಲ್ಲಿ ಹಿಂದೂ ಧರ್ಮಿಯರ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಜೋಡಿ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Pp New

ಕೇರಳದ ರಿಗ್ವೆದಾ ಬೂಟಿಕ್ ಸಹಯೋಗದಲ್ಲಿ ನಡೆದ ಈ ಪೋಟೋಶೂಟ್ ನಲ್ಲಿ 1988 ರಲ್ಲಿ ‌ಮಲೆಯಾಳಂನಲ್ಲಿ ರಿಲೀಸ್ ಆದ ವೈಶಾಲಿ ಚಿತ್ರದ ಕಾನ್ಸೆಪ್ಟ್ ಬಳಸಲಾಗಿದೆ ಎನ್ನಲಾಗಿದೆ.

Photo Shoot 4

ಈ ಪೋಟೋಶೂಟ್ ನಲ್ಲಿ ಪಾಲ್ಗೊಂಡ ಜೋಡಿ ಅಭಿಜಿತ್ ಹಾಗೂ ಜಿತು ಮಕ್ಕು ಮಾಯಾ ಎಂದು ಹೇಳಲಾಗಿದ್ದು, ಇವರು ಮದುವೆಯಾಗ ಲಿರೋ ಜೋಡಿಯೋ ಅಥವಾ ಫ್ರಿ ವೆಡ್ಡಿಂಗ್ ಶೂಟ್ ಗಾಗಿ ಪೋಸು ಕೊಟ್ಟ ಆರ್ಟಿಸ್ಟ್ ಗಳೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

Pp New 2

ಒಟ್ಟಿನಲ್ಲಿ ಮತ್ತೊಂದು ಪೋಟೋಶೂಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಆಕ್ರೋಶ ವ್ಯಕ್ತವಾಗಿದೆ.

Photo Shoot 3 E1608389947127
RELATED ARTICLES

Most Popular