ಮದ್ವೆಯಾಗಿ ತಿಂಗಳು ಕಳೆಯುತ್ತಲೇ ಅಭಿಮಾನಿಗಳೊಂದಿಗೆ ಸಿಹಿಸುದ್ದಿ ಹಂಚಿಕೊಂಡ ಖ್ಯಾತ ಗಾಯಕಿ

  • ಭಾಗ್ಯ ದಿವಾಣ

ಬಾಲಿವುಡ್ ನ ಬಹು ಬೇಡಿಕೆಯ ಗಾಯಕಿಯರ ಪೈಕಿ ನೇಹಾ ಕಕ್ಕರ್ ಕೂಡ ಒಬ್ಬರು. ತಮ್ಮ ವಿಭಿನ್ನ ಕಂಠಸಿರಿಯ ಮೂಲಕವೇ ಗುರುತಿಸಿಕೊಂಡಿರುವ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವಾಕೆ. ಈಗ್ಯಾಕೆ ನೇಹಾ ವಿಚಾರ ಬಂತು ಅಂತ ಯೋಚಿಸ್ತಾ ಇದ್ದೀರಾ..?

ಹೌದು. ನೇಹಾ, ಗಾಯಕ ರೋಹನ್ಪ್ರೀತ್ ಸಿಂಗ್ ಜೊತೆಗೆ ಮದ್ವೆಯಾಗಿ ತಿಂಗಳು ಕಳೆದಿದೆಯಷ್ಟೇ. ಅದಾಗಲೇ ನೇಹಾ ಭಾರಿ ಸುದ್ದಿಯಲ್ಲಿದ್ದಾರೆ. ನೇಹಾ ಕಕ್ಕರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ಸುದ್ದಿಯಲ್ಲಿದೆ.

ಈ ಪೋಸ್ಟ್’ನಲ್ಲಿ, ನೇಹಾ ಅವರು ಗರ್ಭಿಣಿಯಂತೆ ಕಾಣುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ನೇಹಾ ಕಕ್ಕರ್ ಈ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ನೇಹಾ ಕಕ್ಕರ್, ಅವರು ಮತ್ತು ರೋಹನ್ಪ್ರೀತ್ ಸಿಂಗ್ ಜೊತೆಗಿರುವ ಫೋಟೋವನ್ನು ಈ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರೋಹನ್, ಡಂಗ್ರಿ ಧರಿಸಿರುವ ನೇಹಾ ಕಕ್ಕರ್ ಅವರನ್ನು ಹಿಂದಿನಿಂದ ತಬ್ಬಿಕೊಂಡಿದ್ದಾರೆ.

ಈ ಫೋಟೋದಲ್ಲಿ ನೇಹಾ ಬೇಬಿ ಬಂಪ್ ತೋರಿಸಿದ್ದಾರೆ. ಫೋಟೋದ ಶೀರ್ಷಿಕೆಯಲ್ಲಿ, ನೇಹಾ ಕಕ್ಕರ್, ‘Take care #KhyaalRakhyaKar’ ಎಂದು ಬರೆದಿದ್ದಾರೆ. ಜೊತೆಗೆ ಎರಡು ಸಂತೋಷದ ಇಮೋಜಿಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

ನೇಹಾ ಕಕ್ಕರ್ ಅವರ ಈ ಪೋಸ್ಟ್’ಗೆ ರೋಹನ್ ಪ್ರೀತ್ ಸಿಂಗ್ ಕಾಮೆಂಟ್ ಮಾಡಿದ್ದು, ‘ಈಗ ನೀವು ತುಂಬಾ ಕಾಳಜಿ ವಹಿಸಬೇಕು ’ ಎಂದು ಹೇಳಿದ್ದಾರೆ. ನೇಹಾ ಕಕ್ಕರ್ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್ , ರೋಹನ್ ಪ್ರೀತ್ ಸಿಂಗ್ ಕಾಮೆಂಟ್ ನೋಡಿದಾಗ ಅವರು ಗರ್ಭಿಣಿ ಎಂದು ತೋರುತ್ತದೆ. ಅವರು ಈಗಾಗಲೇ ತಮ್ಮ ಆತ್ಮೀಯರಿಂದ, ಅಭಿಮಾನಿಗಳಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ.

https://www.instagram.com/p/CI7E-TWDDbA/?igshid=29wz1lws0sb3

ನೇಹಾ ಅವರ ಸಹೋದರ ಕೂಡ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಹೊಸ ಫೋಟೋದೊಂದಿಗೆ ನೇಹಾ ತಮ್ಮ ಅಭಿಮಾನಿ ಗಳನ್ನು ಅಚ್ಚರಿಗೊಳಿಸಿದ್ದಾರೆ. ಆದರೆ ಕೆಲವು ಬಳಕೆದಾರರು ಮುಂಬರುವ ಹಾಡು ಖ್ಯಾಲ್ ರಾಖ್ಯಾ ಕಾರ್’ನ ಪ್ರಚಾರದ ಗಿಮಿಕ್ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.