ಭಾನುವಾರ, ಏಪ್ರಿಲ್ 27, 2025
HomeBreakingಚುನಾವಣೆಗೆ ಸಜ್ಜಾದ್ರು ಕಮಲ್ ಹಾಸನ್…..! ಅಭ್ಯರ್ಥಿಗಳ ಆಯ್ಕೆಗೆ ಆನ್ ಲೈನ್ ಅರ್ಜಿ, 25 ಸಾವಿರ ಫೀಸ್….!!

ಚುನಾವಣೆಗೆ ಸಜ್ಜಾದ್ರು ಕಮಲ್ ಹಾಸನ್…..! ಅಭ್ಯರ್ಥಿಗಳ ಆಯ್ಕೆಗೆ ಆನ್ ಲೈನ್ ಅರ್ಜಿ, 25 ಸಾವಿರ ಫೀಸ್….!!

- Advertisement -

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ರಾಜಕೀಯ ಮೇಲಾಟಗಳು ಚುರುಕುಗೊಂಡಿವೆ. ಈ ಮಧ್ಯೆ ಬಹುಭಾಷಾ ನಟ ಕಮಲ್ ಹಾಸನ್ ಕೂಡ ತಮ್ಮ ಪಕ್ಷದ ಚುನಾವಣಾ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಆರಂಭಿಸಿದ್ದು, ಆಯ್ಕೆಗೆ ಅಭ್ಯರ್ಥಿಗಳು 25 ಸಾವಿರ ಶುಲ್ಕ ಪಾವತಿಸಬೇಕು.

ನಟ  ಹಾಗೂ ರಾಜಕಾರಣಿಯಾಗಿ ಇನ್ನಿಂಗ್ಸ್ ಆರಂಭಿಸಿರುವ ಕಮಲ್ ಹಾಸನ್ ತಮಿಳುನಾಡಿನ ವಿಧಾನಸಭೆಯ 234 ಕ್ಷೇತ್ರಗಳಲ್ಲೂ ತಮ್ಮ ಮಕ್ಕಳ ನೀಧಿ ಮಯಂ ಪಕ್ಷ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಫೆ.21 ರಂದು ತಮಿಳುನಾಡು-ಪುದುಚೆರಿ ಚುನಾವಣೆಗೆ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ನೀಡಿದೆ.

ಮಕ್ಕಳ್ ನಿಧಿ ಮಯಂ  ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಇದರೊಂದಿಗೆ 25 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು. ಪಕ್ಷದಿಂದ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಕ್ಷದ ಚಿಹ್ನೆ ಟಾರ್ಚ್ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗಲಿದೆ ಎಂದು ಪಕ್ಷ ಹೇಳಿದೆ.

2019 ರ ಚುನಾವಣೆಯಲ್ಲೂ ಕಮಲ್ ಹಾಸನ್ ಪಕ್ಷವೂ ಇದೇ ಚಿಹ್ನೆಯಡಿ ಹಲವೆಡೆ ಚುನಾವಣೆಗೆ ಸ್ಪರ್ಧಿಸಿದ್ದು, ಶೇಕಡಾ 3.7 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಈಗಾಗಲೇ ಚುನಾವಣೆಗೆ ಅಗತ್ಯ ಹ್ಯಾಂಡ್ ಬಿಲ್ ಗಳನ್ನು ಮುದ್ರಿಸಿರುವ ಕಮಲ್ ಹಾಸನ್ ತಮ್ಮ ಪಕ್ಷದ ಅಭ್ಯರ್ಥಿಗಳು 234 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಮಲ್ ಹಾಸನ್ ಸಧ್ಯ ವಿಶ್ರಾಂತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಪಕ್ಷದ ಪ್ರಚಾರ ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸಲು ಸಕ್ರಿಯ ರಾಜಕಾರಣಕ್ಕೆ ಇಳಿಯಲಿದ್ದಾರೆ.

RELATED ARTICLES

Most Popular