ಮಂಗಳವಾರ, ಜೂನ್ 17, 2025
HomeBreakingಮೇಘನಾ ಭೇಟಿಗೆ ಬಂದ ಮಲೆಯಾಳಂ ನಟ...! ಪೋಟೋ ಹಂಚಿಕೊಂಡ್ರು ಮೇಘನಾ ರಾಜ್...!!

ಮೇಘನಾ ಭೇಟಿಗೆ ಬಂದ ಮಲೆಯಾಳಂ ನಟ…! ಪೋಟೋ ಹಂಚಿಕೊಂಡ್ರು ಮೇಘನಾ ರಾಜ್…!!

- Advertisement -

ನಟಿ ಮೇಘನಾ ಕನ್ನಡದವರಾದರೂ ಅವರ ಹೆಚ್ಚಿನ ನಂಟು ಇರೋದು‌ ಮಲೆಯಾಳಂ ಜೊತೆ. ತಾಯ್ನೆಲದಂತೆ ಇರೋ ಮಲೆಯಾಳಂನಿಂದ ನಟರೊಬ್ಬರು ಮೇಘನಾ ಭೇಟಿ ಮಾಡಿದ್ದಾರೆ.

IMG 20210314 WA0120

ಸಾಕಷ್ಟು ಮಲೆಯಾಳಂ‌ ಚಿತ್ರದಲ್ಲಿ‌ ನಟಿಸಿರೋ ಮೇಘನಾರನ್ನು ಅಲ್ಲಿನ ಚಿತ್ರರಂಗ ಮನೆಮಗಳಂತೆ ನೋಡಿಕೊಳ್ತಿದೆ. ಮೊನ್ನೆ ಮಲೆಯಾಳಂನ ಇಂದ್ರಜಿತ್ ಸುಕುಮಾರನ್ ಮೇಘನಾರನ್ನು ಭೇಟಿ ಮಾಡಿ ಜ್ಯೂನಿಯರ್ ಚಿರು ಜೊತೆ ಕಾಲ ಕಳೆದಿದ್ದಾರೆ.

Meghanaraj 1

ಮೇಘನಾ ಹಾಗೂ ಇಂದ್ರಜೀತ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು ಮೇಘನಾ ಅವರನ್ನು ಇಂದ್ರು ಎಂದು ಕರೆಯುತ್ತಾರೆ. ಮೇಘನಾರ ಮನೆಗೆ ಇಂದ್ರಜಿತ್ ಭೇಟಿ ನೀಡಿದ ವಿಷಯವನ್ನು ಮೇಘನಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

MeghanaRaj

ಇಂದ್ರಜಿತ್ ಸುಕುಮಾರ್ ಮೇಘನಾ ರಾಜ್ ಕುಟುಂಬದ ಜೊತೆ ಕಾಲಕಳೆದು ಜ್ಯೂನಿಯರ್ ಚಿರುವನ್ನು ಎತ್ತಿಕೊಂಡು ಆಟ ಆಡಿಸಿ ಎಂಜಾಯ್ ಮಾಡಿದ್ದಾರೆ. ಬಿರಿಯಾನಿ ಕೂಡ ಸವಿದಿದ್ದಾರೆ.

Meghana W 1 E1606542673808

ಸಂಗತಿಯನ್ನು ಮೇಘನಾ ಉಲ್ಲೇಖಿಸಿದ್ದು, ಬಹಳ ವರ್ಷಗಳ ನಂತರ ನಾವು ಭೇಟಿಯಾದೆವು. ಪೂರ್ಣಿಮರನ್ನು ಕೂಡ ನಾನು ಸಧ್ಯದಲ್ಲೇ ಕಾಣುತ್ತೇನೆಂದು ಭಾವಿಸುತ್ತೇನೆ. ಬಿರಿಯಾನಿಯನ್ನು ಇಷ್ಟಪಟ್ಟಿದ್ದೀರಿ ಎಂದು ಭಾವಿಸಿದ್ದೇನೆ. ಜ್ಯೂನಿಯರ್ ಚಿರು ನಿಮ್ಮ‌ಕಂಪನಿಯನ್ನು ಎಂಜಾಯ್ ಮಾಡಿದ್ದಾನೆ ಎಂದಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular