ಬೆಂಗಳೂರು CD Lady Audio Leak : ರಾಸಲೀಲೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಯುವತಿ ತನ್ನ ಸಹೋದರನ ಜೊತೆಗೆ ಮಾತನಾಡಿರುವ ಆಡಿಯೋ ಬಯಲಾಗಿದೆ. ಆಡಿಯೋದಲ್ಲಿ ತಾನು ಡಿಕೆಶಿ ಮನೆಯ ಬಳಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ.
ರಾಸಲೀಲೆ ಸಿಡಿಯಲ್ಲಿರುವ ವಿಡಿಯೋದಲ್ಲಿರುವ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಯುವತಿ ತನ್ನ ಸಹೋದರನ ಜೊತೆಗೆ ಮಾತನಾಡಿರುವ ಸುಮಾರು 6.57 ನಿಮಿಷದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಯುವತಿ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದಾಳೆ. ಅಲ್ಲದೇ ಯುವತಿಯ ಸಹೋದರ ರಾಜಕೀಯದ ಸಹವಾಸವೇ ಬೇಡ ಎಂದು ಬುದ್ದಿ ಮಾತು ಹೇಳಿದ್ದಾನೆ. ಆದರೆ ವಿಡಿಯೋವನ್ನು ಗ್ರಾಫಿಕ್ಸ್ ಮಾಡಲಾಗಿದೆ. ಅದರಲ್ಲಿ ಇರೋದು ನಾನಲ್ಲ, ನನ್ನ ಧ್ವನಿಯನ್ನು ಮಾಡ್ಯುಲೇಷನ್ ಮಾಡಲಾಗಿದೆ ಎಂದು ಹೇಳಿದ್ದಾಳೆ.
ಸಂತ್ರಸ್ತ ಯುವತಿ ಮಾತನಾಡಿರೋ ಆಡಿಯೋ ಇದೀಗ ಇಡೀ ಪ್ರಕರಣಕ್ಕೆ ಸ್ಪೋಟಕ ತಿರುವು ನೀಡಿದೆ. ಪ್ರಕರಣದಲ್ಲಿ ತನ್ನ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಅದ್ರಲ್ಲೂ ಪ್ರಕರಣದಲ್ಲಿ ಮಹಾನಾಯಕನಿದ್ದಾನೆ ಅಂತಾನೂ ಹೇಳಿದ್ದರು. ಹಾಗಾದ್ರೆ ಆ ಮಹಾನಾಯಕನಾರು ಅನ್ನೋ ಕುತೂಹಲಕ್ಕೆ ಯುವತಿಯ ಆಡಿಯೋ ಟ್ವಿಸ್ಟ್ ಕೊಟ್ಟಿದೆ.
Comments are closed.