ಮಂಗಳವಾರ, ಏಪ್ರಿಲ್ 29, 2025
Homeಮಿಸ್ ಮಾಡಬೇಡಿಹೆಲಿಕ್ಯಾಪ್ಟರ್ ನಲ್ಲಿ ಬಂದ್ಲು ಮನೆಮಗಳು...!ನವಜಾತ ಶಿಶುವಿಗೆ ಸಿಕ್ತು ಅದ್ದೂರಿ ಸ್ವಾಗತ...!!

ಹೆಲಿಕ್ಯಾಪ್ಟರ್ ನಲ್ಲಿ ಬಂದ್ಲು ಮನೆಮಗಳು…!ನವಜಾತ ಶಿಶುವಿಗೆ ಸಿಕ್ತು ಅದ್ದೂರಿ ಸ್ವಾಗತ…!!

- Advertisement -

ರಾಜಸ್ಥಾನ :  ಬರೋಬ್ಬರಿ 35 ವರ್ಷಗಳ ಬಳಿಕ‌ ಆ ಮನೆಯಲ್ಲಿ ಹೆಣ್ಣು ಮಗುವಿನ ಜನನವಾಗಿತ್ತು. ಈ‌ ಸಂಭ್ರಮವನ್ನು ಅಚರಿಸೋಕೆ ಅಜ್ಜ ಹೆಲಿಕ್ಯಾಪ್ಟರ್ ನ್ನೆ ಬುಕ್ ಮಾಡುವ ಮೂಲಕ ಮೊಮ್ಮಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ನಾಗೂರು ಜಿಲ್ಲೆಯ ನಿಂಬ್ಡಿ ಚಂಡವಾತ ಗ್ರಾಮದ ಮದನ್ ಲಾಲ್ ಎಂಬುವವರ ಮೊಮ್ಮಗಳು ರಿಯಾ ಇಂತಹದೊಂದು ಸ್ಪೆಶಲ್ ವೆಲ್ ಕಂ ಸ್ವೀಕರಿಸಿದ ಮಗು.

ಕಳೆದ 35 ವರ್ಷದಿಂದ ಮದನ್ ಲಾಲ್ ಕುಟುಂಬದಲ್ಲಿ ಹಲವು ಮಕ್ಕಳು ಜನಿಸಿದ್ದಾರೆ. ಆದರೇ ಒಂದು ಹೆಣ್ಣು ಮಗು ಹುಟ್ಟಿರಲಿಲ್ಲ. ಈಗ ಮಗ ಹನುಮಾನ ರಾಮ್‌ಪ್ರಜಾಪತ್ ದಂಪತಿಗೆ ಹೆಣ್ಣು ಮಗು ಜನಿಸಿದೆ.

ಹೀಗಾಗಿ‌ ಮೊಮ್ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ನಿರ್ಧರಿಸಿದ ಅಜ್ಜ ಮದನ್ ಲಾಲ್ ತವರಿನಲ್ಲಿದ್ದ ಸೊಸೆ ಹಾಗೂ ಮಗುವನ್ನು ಅಂದಾಜು 5 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಗೆ ಹೆಲಿಕ್ಯಾಪ್ಟರ್ ನಲ್ಲಿ ಕರೆತರಲು‌ ನಿರ್ಧರಿಸಿದ್ದಾರೆ.

ಇದರಂತೆ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಎರಡು ಊರಿನಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಮೊಮ್ಮಗಳನ್ನು ಹೆಲಿಕ್ಯಾಪ್ಟರ್ ನಲ್ಲಿ ಕರೆತಂದಿದ್ದಾರೆ. ಮದನ್ ಲಾಲ್ ಊರಿಗೂ ಸೊಸೆ ಊರಿಗೂ 30 ಕಿಲೋಮೀಟರ್ ಅಂತರವಿದೆ. 20 ನಿಮಿಷ ಹೆಲಿಕ್ಯಾಪ್ಟರ್ ಪ್ರಯಾಣದ ಬಳಿಕ ಮನೆಗೆ ಬಂದ ಮೊಮ್ಮಗುವಿಗೆ ಮದನ್ ಲಾಲ್ ಅದ್ದೂರಿ ಮೆರವಣಿಗೆ ಹಾಗೂ ಪುಷ್ಪವೃಷ್ಠಿಯ ಮೂಲಕ ಸ್ವಾಗತ ಕೋರಿದ್ದಾರೆ.

ಸಾಮಾನ್ಯವಾಗಿ ರಾಜಸ್ಥಾನ ಭಾಗದಲ್ಲಿ ಹೆಣ್ಣು ಮಗುವಿನ ಜನನಕ್ಕೆ ಮರುಕ ಪಡುವ ಮನಸ್ಥಿತಿ ಹಾಗೂ ಹೆಣ್ಣು ಶಿಶು ಹತ್ಯೆ ವ್ಯಾಪಕವಾಗಿದೆ‌. ಆದರೆ ಮದನ್ ಲಾಲ್ ಕುಟುಂಬದ ಈ ಮನಸ್ಥಿತಿ ಎಲ್ಲರಿಗೂ ಮಾದರಿಯಾಗಿದೆ. ಅಷ್ಟೇ ಅಲ್ಲ ಸಾಮಾಜಿಕ ಸುಧಾರಣೆಯ ಉದಾಹರಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.

RELATED ARTICLES

Most Popular