ಸೋಮವಾರ, ಏಪ್ರಿಲ್ 28, 2025
HomeCinemaಪತಿ ಜೈಲಿನಲ್ಲಿ ಪತ್ನಿ ಶೂಟಿಂಗ್ ನಲ್ಲಿ! ಬಹುದಿನಗಳ ಬಳಿಕ ತಮ್ಮ ಕೆಲಸಕ್ಕೆ ಮರಳಿದ ನಟಿ ಶಿಲ್ಪಾಶೆಟ್ಟಿ!

ಪತಿ ಜೈಲಿನಲ್ಲಿ ಪತ್ನಿ ಶೂಟಿಂಗ್ ನಲ್ಲಿ! ಬಹುದಿನಗಳ ಬಳಿಕ ತಮ್ಮ ಕೆಲಸಕ್ಕೆ ಮರಳಿದ ನಟಿ ಶಿಲ್ಪಾಶೆಟ್ಟಿ!

- Advertisement -

ಅಶ್ಲೀಲ ಚಿತ್ರ ತಯಾರಿಕೆ ಮತ್ತು ಪ್ರಸಾರದ ಆರೋಪದಡಿಯಲ್ಲಿ ಉದ್ಯಮಿ ರಾಜ್ ಕುಂದ್ರಾ ಜೈಲು ಸೇರಿ ತಿಂಗಳ ಕಳೆಯುತ್ತಿದೆ.  ಪತಿ ಬಂಧನಕ್ಕೊಳಗಾದಾಗಿನಿಂದ ಶೂಟಿಂಗ್ ದೂರವುಳಿದು ರಿಯಾಲಿಟಿಶೋಗೆ ಗೈರಾಗಿದ್ದ ಶಿಲ್ಪಾ ಶೆಟ್ಟಿ ಕೊನೆಗೂ ಡ್ಯಾನ್ಸ್ ಶೋ ಜಡ್ಜ್ ಸ್ಥಾನಕ್ಕೆ ಮರಳಿದ್ದಾರೆ.

ಸೂಪರ್ ಡ್ಯಾನ್ಸರ್ ಶೋದ ನಿರ್ಣಾಯಕಿಯಾಗಿದ್ದ ಶಿಲ್ಪಾ ಶೆಟ್ಟಿ ಪತಿಯ ಬಂಧನದ ಬಳಿಕ ಸತತ ಕೆಲವು ವಾರಗಳ ಕಾಲ ಶೋಗೆ ಗೈರಾಗಿದ್ದರು. ಈ ವೇಳೆ ಶಿಲ್ಪಾ ಶೆಟ್ಟಿ ಶೋದಿಂದ ದೂರ ಉಳಿಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಶಿಲ್ಪಾ ಶೆಟ್ಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮತ್ತೆ ಶಿಲ್ಪಾ ಶೆಟ್ಟಿ ಶೋ ಜಡ್ಜ್ ಸ್ಥಾನಕ್ಕೆ ಮರಳಿದ್ದಾರೆ. ಅವರು ತಮ್ಮ ಕ್ಯಾರಾವ್ಯಾನ್ ನಿಂದ ಇಳಿದು ಶೂಟಿಂಗ್ ಸೆಟ್ ಗೆ ತೆರಳುತ್ತಿರುವ ದೃಶ್ಯ ವೈರಲ್ ಆಗಿದೆ.

https://www.instagram.com/p/CStWn_pK3ma/?utm_source=ig_web_copy_link

ಶೂಟಿಂಗ್ ಗೆ ಮರಳಿದ ಶಿಲ್ಪಾ ಶೆಟ್ಟಿಯನ್ನು ಸೂಪರ್ ಡ್ಯಾನ್ಸರ್ ತಂಡವೂ ಆತ್ಮೀಯವಾಗಿ ಸ್ವಾಗತಿಸಿದ್ದು,  ಈ ವೇಳೆ ಶಿಲ್ಪಾ ಶೆಟ್ಟಿ ಭಾವುಕರಾದ್ರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜುಲೈ 19 ರಂದು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ರಾಜ್ ಕುಂದ್ರಾರನ್ನು ಬಂಧಿಸಿದ್ದು, ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಕೈವಾಡವಿರುವ ಬಗ್ಗೆ ಎಲ್ಲಿಯೂ ಮಾಹಿತಿ, ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Most Popular