ಕಾಲಿವುಡ್ ಗೆ ಬೆಲ್ ಬಾಟಂ ಹುಡುಗಿ: 9 ವರ್ಷಗಳ ಬಳಿಕ ತಮಿಳು ಸಿನಿಮಾ ಒಪ್ಪಿಕೊಂಡ ನಟಿ ಹರಿಪ್ರಿಯಾ!

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಹರಿಪ್ರಿಯಾ. ವಿಭಿನ್ನ ರೋಲ್ ಗಳ ಮೂಲಕ  ಕನ್ನಡಿಗರ ಮನಗೆದ್ದ ಬೆಲ್ ಬಾಟಂ ಬೆಡಗಿ 9 ವರ್ಷಗಳ ಬಳಿಕ ಮತ್ತೊಮ್ಮೆ ತಮಿಳು ಸಿನಿಮಾರಂಗಕ್ಕೆ ಮರಳಿದ್ದು, ಸತ್ಯಶಿವ ನಿರ್ದೇಶನದಲ್ಲಿ ನಟಿಸಲಿದ್ದಾರೆ.

ಹರಿಪ್ರಿಯಾ ಸಿನಿಮಾಗಳ ಪೈಕಿ ಅವರ ಅಭಿನಯವನ್ನು ಮತ್ತಷ್ಟು ಹೈಲೈಟ್ ಮಾಡಿದ್ದು ಬೆಲ್ ಬಾಟಂ ಸಿನಿಮಾ. ಇದೇ ಸಿನಿಮಾದ ಕಾರಣಕ್ಕೆ ಹರಿಪ್ರಿಯಾ ಮತ್ತೊಮ್ಮೆ ಕಾಲಿವುಡ್ ಗೆ ಕಾಲಿಟ್ಟಿದ್ದು, ಫೇಮಸ್ ನಿರ್ದೇಶಕ ಸತ್ಯಶಿವ ನಿರ್ದೇಶನದಲ್ಲಿ ನಟ ಶಶಿಕುಮಾರ್ ಗೆ ನಾಯಕಿಯಾಗುತ್ತಿದ್ದಾರೆ.

ಬೆಲ್ ಬಾಟಂ ಸಿನಿಮಾದ ತಮಿಳು ರಿಮೇಕ್ ಮಾಡಲಿರುವ ನಿರ್ದೇಶಕ ಸತ್ಯಶಿವ ತಮ್ಮ ಚಿತ್ರಕ್ಕಾಗಿ ಹರಿಪ್ರಿಯಾರನ್ನು ಆಯ್ಕೆ ಮಾಡಿದ್ದಾರಂತೆ. ಕೊರೋನಾ ಭಯವಿದ್ದರೂ ಸಿನಿಮಾದ ಸ್ಕ್ರಿಪ್ಟ್ ಆಗಿರೋ ಕಾರಣಕ್ಕೆ ಹರಿಪ್ರಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ.

ಈಗಾಗಲೇ ಅರ್ಧ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಹಾಡುಗಳ ಶೂಟಿಂಗ್ ಆರಂಭಿಸಲಿದೆ. ಸ್ಕ್ರಿಪ್ಟ್ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡರೂ ಫ್ಲೈಟ್ ನಲ್ಲಿ ಚೈನೈಗೆ ಓಡಾಡುವಾಗ ಕೊರೋನಾ ಭಯ ಕಾಡುತ್ತಿತ್ತು ಅಂತ ನಟಿ ಹರಿಪ್ರಿಯಾ ಹೇಳಿಕೊಂಡಿದ್ದಾರೆ. ಈಗಾಗಲೇ ಒಂದು ಡೋಸ್ ವಾಕ್ಸಿನ್ ಪಡೆದಿರೋ ಹರಿಪ್ರಿಯಾ ಶೂಟಿಂಗ್ ನಡುವೆಯೂ ಕೊರೋನಾ ಬಗ್ಗೆ ಕಾಳಜಿ ವಹಿಸಿದ್ದರಂತೆ.

ಕಣಗವೇಲ್ ಕಾಕಾ, ವಲ್ಲಕೊಟ್ರೈ ಹಾಗೂ ಮುರನ್ ಗಳಂತಹ ಸಿನಿಮಾದಲ್ಲಿ ನಟಿಸಿರುವ ಹರಿಪ್ರಿಯಾಗೆ ತಮಿಳು ಮಾತನಾಡಲು ಬರುತ್ತೆ. ತಮಿಳು ಸಿನಿಮಾದ ಜೊತೆಗೆ ಹರಿಪ್ರಿಯಾದ ಕನ್ನಡದಲ್ಲಿ ಪೆಟ್ರೋಮ್ಯಾಕ್ಸ, ತಾಯಿ ಕಸ್ತೂರಿಬಾ,ಲಗಾಮ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Comments are closed.