ಬಾಲಿವುಡ್ ನಲ್ಲಿ ಮಿಂಚಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಸ್ವಂತ ವರ್ಚಸ್ಸಿನಿಂದಲೇ ಗುರುತಿಸಿಕೊಂಡವರು. ಆದರೆ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಬಂಧನದಿಂದ ಶಿಲ್ಪಾ ತೀವ್ರ ಮುಜುಗರಕ್ಕೊಳಗಾಗಿದ್ದು, ಪತಿ ಹಾಗೂ ಪತಿಯ ಆಸ್ತಿಯಿಂದ ದೂರವಾಗೋ ತೀರ್ಮಾನ ಕೈಗೊಂಡಿದ್ದಾರಂತೆ.

ಜುಲೈ ನಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಸಿನಿಮಾ ತಯಾರಿಕೆ ಆರೋಪ ಬಹುತೇಕ ಖಚಿತವಾಗಿರೋದರಿಂದ, ಆರೋಪಿ ಸ್ಥಾನದಲ್ಲಿರೋ ರಾಜ್ ಕುಂದ್ರಾ ಶಿಕ್ಷೆಯಾಗಲಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಪತಿಯ ಬಂಧನದ ಬಳಿಕ ಸಾಮಾಜಿಕ ಮಾಧ್ಯಮಗಳು, ರಿಯಾಲಿಟಿ ಶೋ ಹಾಗೂ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಶಿಲ್ಪಾ ಶೆಟ್ಟಿ ಈಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಶಿಲ್ಪಾ ಶೆಟ್ಟಿ ಆಪ್ತರ ಪ್ರಕಾರ ಪತಿಯ ಈ ವ್ಯವಹಾರದಿಂದ ತೀವ್ರ ಅವಮಾನ ಹಾಗೂ ನೋವಿಗೆ ಒಳಗಾಗಿರುವ ಶಿಲ್ಪಾ ಶೆಟ್ಟಿ ಪತಿಯಿಂದ ದೂರವಾಗಲು ನಿರ್ಧರಿಸಿ ದ್ದಾರಂತೆ.

ಕೇವಲ ಪತಿಯಿಂದ ದೂರವಾಗೋದು ಮಾತ್ರವಲ್ಲ ಪತಿಯಿಂದ ಮಕ್ಕಳನ್ನು ದೂರವಿಡಲು ನಿರ್ಧರಿಸಿದ್ದಾರಂತೆ. ಮಾತ್ರವಲ್ಲ ರಾಜ್ ಕುಂದ್ರಾ ಆಸ್ತಿಯಿಂದಲೂ ದೂರವಿರಲು ನಿರ್ಧರಿಸಿದ್ದಾರಂತೆ. ಅದಕ್ಕಾಗಿ ತಾವೇ ನಟನೆ ಹಾಗೂ ಇತರ ಚಟುವಟಿಕೆಗಳ ಮೂಲಕ ಹಣ ಸಂಪಾದನೆಗೆ ನಿರ್ಧರಿಸಿದ್ದಾರಂತೆ.
ಇದನ್ನೂ ಓದಿ : ಬಿಕನಿಯಲ್ಲಿ ಪಿಗ್ಗಿ: ಪಡ್ಡೆಗಳ ನಿದ್ದೆ ಕದ್ದ ಬಾಲಿವುಡ್-ಹಾಲಿವುಡ್ ಬೆಡಗಿ ಪ್ರಿಯಾಂಕಾ
ಇದನ್ನೂ ಓದಿ : ಓಟಿಟಿ ಬಿಗ್ ಬಾಸ್ ಗೆ ಹಾಟ್ ಬಾಂಬ್ ಎಂಟ್ರಿ: ಮಾದಕತೆ ಹೆಚ್ಚಿಸಲು ಬರ್ತಿದ್ದಾರೆ ಸನ್ನಿ ಲಿಯೋನ್
( Shilpa Shetty decision to stay away from raj Kundra)