6 ರಿಂದ 8ನೇ ತರಗತಿ ಶಾಲಾರಂಭ : ಕರ್ನಾಟಕ ಸರಕಾರದ ಮಾರ್ಗಸೂಚಿಯಲ್ಲೇನಿದೆ ?

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ಶಾಲೆಗಳನ್ನು ಆರಂಭಿಸಿರುವ ರಾಜ್ಯ ಸರಕಾರ ಇದೀಗ 6 ರಿಂದ 8ನೇ ತರಗತಿಗಳನ್ನು ತೆರೆಯಲು ಕೂಡ ಸಜ್ಜಾಗಿದೆ. ಸಪ್ಟೆಂಬರ್‌ 6ರಿಂದ ತರಗತಿಗಳು ಆರಂಭಗೊಳ್ಳುತ್ತಿದ್ದು, ಈ ಕುರಿತು ಸರಕಾರ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.

ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ಮುಂದಾಗಿದೆ. ಅದ್ರಲ್ಲೂ ಶೇ.2ಕ್ಕಿಂತ ಕಡಿಮೆ ಕೊರೊನಾ ಸೋಂಕು ಹೊಂದಿರುವ ತಾಲೂಕುಗಳಲ್ಲಿ 6 ರಿಂದ 8ನೇ ತರಗತಿಗಳು ಆರಂಭಗೊಳ್ಳಲಿದೆ. ಕೋವಿಡ್‌ ತಾಂತ್ರಿಕ ಸಮಿತಿ ಶಾಲಾರಂಭದ ಕುರಿತು ಈಗಾಗಲೇ ಸರಕಾರಕ್ಕೆ ವಿಸ್ತ್ರತವಾದ ವರದಿಯನ್ನು ಸಲ್ಲಿಕೆ ಮಾಡಿದೆ. ಒಂದೊಮ್ಮೆ ಮೂರನೇ ಅಲೆ ರಾಜ್ಯದಲ್ಲಿ ಕಾಣಿಸಿಕೊಂಡ್ರೆ ಶಾಲೆಗಳನ್ನು ಬಂದ್‌ ಮಾಡುವ ನಿಟ್ಟಿನಲ್ಲಿಯೂ ಸರಕಾರ ಚಿಂತನೆಯನ್ನು ನಡೆಸಿದೆ. ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಪರ್ಯಾಯ ಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆಯನ್ನು ನಡೆಸಲು ಸೂಚಿಸಲಾಗಿದೆ. ಹಾಗಾದ್ರೆ ಸರಕಾರ ಹೊರಡಿಸಿರುವ ಆದೇಶದಲ್ಲಿ ಏನಿದೆ ಗೊತ್ತಾ?

ಈಗಾಗಲೇ ಶಾಲಾರಂಭದ ಕುರಿತು ಹೊರಡಿಸಲಾಗಿರುವ ಮಾರ್ಗಸೂಚಿಯಲ್ಲಿನ ಅಂಶಗಳನ್ನೇ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿಯಿಂದ ವಿನಾಯಿತಿಯನ್ನು ನೀಡಲಾಗಿದ್ದು, ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಅನುಮತಿ ಪತ್ರವನ್ನು ತರಲು ಸೂಚಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗೆ ಕೊರೊನಾ ಸೋಂಕು ಇಲ್ಲ ಅನ್ನುವ ಕುರಿತು ಪೋಷಕರು ಸ್ವಯಂ ದೃಢೀಕರಣ ನೀಡಬೇಕು. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾನ್‌ ಹಾಗೂ ಮಾಸ್ಕ್‌ ಬಳಕೆಯನ್ನು ಕಡ್ಡಾಯ ಗೊಳಿಸಲಾಗಿದೆ.

ಇನ್ನು ವಿದ್ಯಾರ್ಥಿಗಳು ತಮಗೆ ಅಗತ್ಯವಿರುವ ನೀರು, ಉಪಹಾರವನ್ನು ಮನೆಯಿಂದಲೇ ತರುವಂತೆ ಸೂಚಿಸಲಾಗಿದೆ. ಅಲ್ಲದೇ ಶಾಲೆಯಲ್ಲಿಯೂ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳನ್ನು ಪಾಳಿ ಪದ್ದತಿಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಶಾಲೆಗಳನ್ನು ಕಡ್ಡಾಯವಾಗಿ ಸ್ಥಳೀಯಾಡಳಿತದ ಸಹಕಾರ ದೊಂದಿಗೆ ಸ್ಯಾನಿಟೈಸ್‌ ಮಾಡಿಸಬೇಕು.

ಶಾಲೆಯಲ್ಲಿ ಕಡ್ಡಾಯವಾಗಿ ಮಕ್ಕಳ ಸಂಖ್ಯೆ, ಶಿಕ್ಷಕರು ಹಾಗೂ ಕೊಠಡಿಯ ಲಭ್ಯತೆಯ ಆಧಾರ ಮೇಲೆ 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು ಪಾಠ ಬೋಧನೆಯನ್ನು ಮಾಡಬೇಕು. ಆದರೆ ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ತಪ್ಪಿದ್ರೆ ಅಂತಹ ಶಾಲೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ :  ಶೀಘ್ರದಲ್ಲಿಯೇ 17 ಸಾವಿರ ಅತಿಥಿ ಉಪನ್ಯಾಸಕರ ನೇಮಕ : ಸಚಿವ ಅಶ್ವಥ್ ನಾರಾಯಣ

ಇದನ್ನೂ ಓದಿ : School Reopen : ಸಪ್ಟೆಂಬರ್‌ 6 ರಿಂದ 6 – 8 ತರಗತಿಗಳು ಆರಂಭ

(Karnataka: 6 to 8 class school reopen guidelines release )

Comments are closed.