ಸುದೀಪ್ ಬರ್ತಡೇ ಗೆ ಸ್ಪೆಶಲ್ ಗಿಫ್ಟ್: ಆಡಿಯೋ ರೂಪದಲ್ಲಿ ಬರ್ತಿದೆ ಕಿಚ್ಚನ ಬಯೋಗ್ರಫಿ

ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಬರ್ತಡೆಗೇ ಸ್ಪೆಶಲ್ ಗಿಫ್ಟ್ ಸಿದ್ಧವಾಗಿದ್ದು, ಸಪ್ಟೆಂಬರ್ 2 ಅಂದ್ರೆ ನಾಳೆ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಈ ಸ್ಪೆಶಲ್ ಸಪ್ರೈಸ್ ಸಿಗಲಿದೆ.

ಸುದೀಪ್ ಹುಟ್ಟುಹಬ್ಬ ಕ್ಕಾಗಿ ಸುದೀಪ್ ಬಯೋಗ್ರಫಿ ಆಡಿಯೋ ಮತ್ತು ಇ-ಬುಕ್ ಆಗಿ ರಿಲೀಸ್ ಆಗಲಿದೆ. ಕಳೆದ ವರ್ಷ ಸುದೀಪ್ ಹುಟ್ಟುಹಬ್ಬದಂದು ಪತ್ರಕರ್ತ ಶರಣ ಹುಲ್ಲೂರ ಬರೆದ ಸುದೀಪ್ ಬಯೋಗ್ರಫಿ ರಿಲೀಸ್ ಆಗಿತ್ತು.

ಇದೇ ಪುಸ್ತಕವನ್ನು ಮೈ ಲ್ಯಾಂಗ್ ಆ್ಯಪ್ ಮೂಲಕ ಆಡಿಯೋ ಬಯೋಗ್ರಫಿ ಹಾಗೂ ಇ ಬುಕ್ ರೂಪದಲ್ಲಿ ತೆರೆಗೆ ತರಲಾಗುತ್ತಿದೆ. ಆಡಿಯೋ ಬಯೋಗ್ರಫಿಗೆ ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಧ್ವನಿ ನೀಡಿದ್ದಾರೆ.

ಪತ್ರಕರ್ತ ಶರಣ ಹುಲ್ಲೂರ ರಚಿಸಿದ ಸುದೀಪ್ ಬಯೋಗ್ರಫಿಯನ್ನು ಬೆಂಗಳೂರಿನ ಕಾಯಕ ಪ್ರಕಾಶನ ಪ್ರಕಟಿಸಿದ್ದು, ಪುಸ್ತಕ ಬಿಡುಗಡೆಯಾದ ಮರುದಿನವೇ ಮರುಮುದ್ರಣ ಕಂಡಿತ್ತು. 2020 ರ ಸಪ್ಟೆಂಬರ್ 2 ರಂದು ರಿಲೀಸ್ ಆಗಿರೋ ಪುಸ್ತಕವನ್ನು ಈಗ ಆಡಿಯೋ ರೂಪದಲ್ಲಿ ಅಭಿಮಾನಿಗಳಿಗೆ ನೀಡ್ತಿದೆ ಮೈ ಲ್ಯಾಂಗ್ ಆ್ಯಪ್.

ಸುದೀಪ್ ಅಭಿಮಾನಿಗಳು ಇ-ಬುಕ್ ಹಾಗೂ ಆಡಿಯೋ ಗಾಗಿ www.mylang.in ಗೆ ಭೇಟಿ ಕೊಡಬಹುದಾಗಿದೆ. ಪತ್ರಕರ್ತ ಶರಣ ಹುಲ್ಲೂರ ಬರೆದ ಈ ಪುಸ್ತಕ ಸುದೀಪ್ ಬಗ್ಗೆ ಅಭಿಮಾನಿ ಗಳಿಗೆ ಗೊತ್ತಿಲ್ಲದ ಹಲವು ಸಂಗತಿ ದಾಖಲಿಸಿದ್ದು, ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಬಿಡುಗಡೆ ಮಾಡಿದ್ದರು.

ಪತ್ರಕರ್ತ ಶರಣ ಹುಲ್ಲೂರ ಸುದೀಪ್ ಪುಸ್ತಕ ಬರೆಯುವ ಮುನ್ನ ಅಂಬರೀಶ್ ಕುರಿತು ಕೂಡ ಬುಕ್ ಬರೆದಿದ್ದು ಅಂಬರೀಶ್ ನಿಧನದ ಬಳಿಕ ಈ ಪುಸ್ತಕವನ್ನು ಸುಮಲತಾ ಅಂಬರೀಶ್ ಹಾಗೂ ದರ್ಶನ್ ಬಿಡುಗಡೆ ಗೊಳಿಸಿದ್ದು, ಈ ಪುಸ್ತಕ ರಾಜ್ಯ ಸಿನಿಸಾಹಿತ್ಯ ಗೌರವಕ್ಕೂ ಪಾತ್ರವಾಗಿದೆ.

ಇದನ್ನೂ ಓದಿ : ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸ್ಪೆಶಲ್ ಧಮಾಕಾ: ವಿಕ್ರಾಂತ್ ರೋಣ ಅಡ್ಡಾದಿಂದ ಸಿಗಲಿದೆ ಭರ್ಜರಿ ಗಿಫ್ಟ್

ಇದನ್ನೂ ಓದಿ : ವಿಕ್ರಾಂತ್ ರೋಣ ಅಡ್ಡಾದಿಂದ ಸ್ಪೆಶಲ್ ಅಪ್ಡೇಟ್: ಸುದೀಪ್ ಹೇಳಿದ್ದೇನು ಗೊತ್ತಾ!

(Special gift for Sudeep’s birthday‌ : Sudeep Biography is in audio format)

Comments are closed.