ಸೋಮವಾರ, ಏಪ್ರಿಲ್ 28, 2025
HomeCinemaಅನಿತಾ ಭಟ್‌ ಇಂದಿರಾಗೆ ಜೊತೆಯಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌

ಅನಿತಾ ಭಟ್‌ ಇಂದಿರಾಗೆ ಜೊತೆಯಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌

- Advertisement -

ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿ ಅನಿತಾ ಭಟ್‌ ಸದ್ಯ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಮೂಲಕ ಕನ್ನಡಿಗರ ಮನಗೆದ್ದಿರುವ ಮಲೆನಾಡ ಬೆಡಗಿ, ಇದೀಗ ಎರಡನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಮುದ್ರಂ ಸಿನಿಮಾ ನಿರ್ಮಾಣದ ಬೆನ್ನಲ್ಲೇ ಇಂದಿರಾ ಆಗಿ ಚಂದನವನಕ್ಕೆ ಎಂಟ್ರಿ ಕೊಡಲು ಅನಿತಾ ಭಟ್‌ ರೆಡಿಯಾಗಿದ್ದಾರೆ.

ಇಂದಿರಾ.. ನಿಜಕ್ಕೂ ಹೆಸರಿನಲ್ಲೇ ಕುತೂಹಲ ಸೃಷ್ಟಿಸುತ್ತಿರುವ ಸಿನಿಮಾ. ಇದೊಂದು ಪಕ್ಕಾ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಚಿತ್ರದ ಟೈಟಲ್‌ ಪೋಸ್ಟರ್ ಅನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಬಿಡುಗಡೆ ಮಾಡಿದ್ದು, ನಟಿ ಅನಿತಾ ಭಟ್‌ ತಂಡಕ್ಕೆ ಶುಭ ಹಾರೈಸಿದ್ದಾರೆ.

ಬಿಗ್‌ ಬಾಸ್‌ ಖ್ಯಾತಿಯ ರೆಹಮಾನ್‌ ಹಾಸನ್‌, ಚಕ್ರವರ್ತಿ ಚಂದ್ರಚೂಡ್‌, ನೀತು ಹಾಗೂ ಶಫಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವ ಅನಿತಾ ಭಟ್‌ ಇಂದಿರಾ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಹಳ್ಳಿ ಹುಡುಗಿಯಿಂದ ಹಿಡಿದು ಗ್ಲಾಮರಸ್‌ ಪಾತ್ರದ ವರೆಗೆ ಸೈ ಎನಿಸಿಕೊಂಡಿರುವ ಅನಿತಾ ಭಟ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಅಪಘಾತದಲ್ಲಿ ಕಣ್ಣು ಕಳೆದುಕೊಂಡ ಅಂಧೆಯ ಬದಕನ್ನು ಸಿನಿಮಾದ ಮೂಲಕ ಹೇಳ ಹೊರಟಿದ್ದಾರೆ. ಖುದ್ದು ಇಂದಿರಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಇಂದಿರಾ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಿಷಿಕೇಶ್ ಸಿನಿಮಾದ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಲೋಹಿತ್‌ ಎಲ್.ನಾಯಕ್‌ ಸಂಗೀತದ ಜೊತೆಗೆ ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ನಟಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್‌ ನಿರ್ಮಾಣದಲ್ಲಿ ಎರಡನೇ ಸಿನಿಮಾ ಸಿದ್ದವಾಗುತ್ತಿದೆ. ಮಾತ್ರವಲ್ಲ ಅನಿತಾ ಭಟ್‌ ನಟನೆಯ ಕನ್ನೇರಿ, ಬೆಂಗಳೂರು 69, ಬಳೆಪೇಟೆ, ಜೂಟಾಟ, ಸಮುದ್ರಂ, ಇಂದಿರಾ ಸೇರಿದಂತೆ ಒಟ್ಟು 7 ಸಿನಿಮಾಗಳು ಬಿಡುಗಡೆ ಕಾಯುತ್ತಿವೆ.

ನಟನೆಯ ಜೊತೆಗೆ ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟಿರುವ ಅನಿತಾ ಭಟ್‌ ತಮ್ಮದೇ ಕ್ರಿಯೇಷನ್ಸ್‌ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಚಂದನವನಕ್ಕೆ ವಿಭಿನ್ನ ಸಿನಿಮಾಗಳನ್ನು ನೀಡಬೇಕು ಅನ್ನೋ ಹಂಬಲ ಹೊಂದಿರುವ ನಟಿ ಅನಿತಾ ಭಟ್‌ ಅವರ ಕನಸು ಇದೀಗ ಸಮುದ್ರಂ ಹಾಗೂ ಇಂದಿರಾ ಮೂಲಕ ನನಸಾಗುತ್ತಿದೆ. ಎರಡೂ ಸಿನಿಮಾಗಳು ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಾಗಿ ಗುರುತಿಸಿಕೊಂಡಿದೆ. ಚಿತ್ರಪ್ರೇಮಿಗಳು ಸಿನಿಮಾವನ್ನು ಗೆಲ್ಲಿಸಿದ್ರೆ ಇನ್ನಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸು ಹೊತ್ತಿದ್ದಾರೆ ಅನಿತಾ ಭಟ್.‌‌

ಇದನ್ನೂ ಓದಿ : ನಿರ್ಮಾಪಕಿಯಾದ್ರು ನಟಿ ಅನಿತಾ ಭಟ್‌ : ‘ಸಮುದ್ರಂ’ ಗೆ ಸಾಥ್‌ ಕೊಟ್ಟ ಶ್ರೀ ಮುರುಳಿ

ಇದನ್ನೂ ಓದಿ : ಕೃಷ್ಣಲಂಕೆಗೆ ಸೈಕೋ ಸುಂದರಿ…! ಟಾಲಿವುಡ್ ಗೆ ಹಾರಿದ ಸ್ಯಾಂಡಲ್ ವುಡ್ ಬೆಡಗಿ…!!

( Power Star Puneet Raj Kumar Release Actress Anita Bhatt Indira Movie )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular