ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ ಈ ಅರಿಶಿನದ ತಂಬುಳಿ

ತಂಬುಳಿಯಲ್ಲಿ ಹಲವಾರು ವಿಧಗಳಿವೆ. ಮುಖ್ಯವಾಗಿ ಮಜ್ಜಿಗೆಯನ್ನು ಉಪಯೋಗಿಸಿ ಕೊಂಡು ತಂಬುಳಿಯನ್ನು ತಯಾರಿಸುತ್ತಾರೆ. ಆದರೆ ಆರೋಗ್ಯಕ್ಕೆ ಉತ್ತಮವಾಗಿ ಬಾಯಿಗೂ ರುಚಿ ಕೊಡುವ ತಂಬುಳಿ ಯಾವುದು ಗೊತ್ತಾ ? ಅದೇ ಅರಿಶಿನದ ತಂಬುಳಿ. ಇದನ್ನು ಸುಲಭವಾಗಿ ತಯಾರಿಸಬಹುದು.

ಅರಿಶಿನ ತಂಬುಳಿ ತಯಾರಿಸಲು ಬೇಕಾಗುವ ಪದಾರ್ಥಗಳು : ಹಸಿ ಅರಿಶಿನ ಕೊಂಬು: 1/2 ಇಂಚು, ತೆಂಗಿನ ತುರಿ: 1 ಬಟ್ಟಲು, ಬೆಲ್ಲ: 3-4 ಚಮಚ, ಮಜ್ಜಿಗೆ ಅಥವಾ ಮೊಸರು: 1/2 ಬಟ್ಟಲು, ಎಣ್ಣೆ: 1 ಚಮಚ, ಸಾಸಿವೆ 1/2 ಚಮಚ, ಒಣ ಮೆಣಸಿನಕಾಯಿ: 1/2, ಉಪ್ಪು: ರುಚಿಗೆ ತಕ್ಕಷ್ಟು

ಇದನ್ನೂ ಓದಿ : Cheese Balls Recipe : ಮನೆಯಲ್ಲೇ ಮಾಡಿ ರುಚಿ ರುಚಿ ಚೀಸ್ ಬಾಲ್

ಅರಿಶಿನ ತಂಬುಳಿ ತಯಾರಿಸುವ ವಿಧಾನ : ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ತೆಂಗಿನ ತುರಿಗೆ ಹೆಚ್ಚಿದ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮಜ್ಜಿಗೆ ಹಾಕಿಟ್ಟುಕೊಳ್ಳಬೇಕು. ಮೊಸರು ಹಾಕುವುದಾದರೆ ಸೌಟಿನಿಂದ ಗಂಟಿಲ್ಲದಂತೆ ಕಲಕಿ ಹಾಕಿ, ಅರ್ಧ ಬಟ್ಟಲು ನೀರು.

ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಒಣ ಮೆಣಸಿನಕಾಯಿ, ಸಾಸಿವೆ ಹಾಕಿ ಕೆಂಪಗೆ ಮಾಡಿಕೊಂಡು ಯಂಬುಳಿಗೆ ಹಾಕಿದರೆ, ರುಚಿಕರ ಹಾಗೂ ಆರೋಗ್ಯಕರವಾದ ಅರಿಶಿನ ತಂಬುಳಿ ಸವಿಯಲು ಸಿದ್ಧ.

ಇದನ್ನೂ ಓದಿ: Food : ಮೃದುವಾದ ಮೆಂತ್ಯೆ ದೋಸೆ ಮಾಡಿ ಸವಿಯಿರಿ

(This is a turmeric thambuli with taste and health)

Comments are closed.