Bride marries another man : ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಯಾಕೆಂದರೆ ಇವರೆಡೂ ಸುಲಭವಾದ ಕೆಲಸವಂತೂ ಅಲ್ಲವೇ ಅಲ್ಲ. ಎಷ್ಟೇ ತಯಾರಿ ಮಾಡಿಕೊಂಡರೂ ಸಹ ಕೊನೆಯಲ್ಲಿ ಏನಾದರೊಂದು ಸಮಸ್ಯೆ ಇದ್ದಿದ್ದೆ. ಇಲ್ಲೊಂದು ಗ್ರಾಮದಲ್ಲಿ ಮದುವೆ ಮಂಟಪದಲ್ಲಿ ಎಂತಹ ದೊಡ್ಡ ಟ್ವಿಸ್ಟ್ ಎದುರಾಗಿದೆ ಎಂದರೆ ವಧುವು ನಿಶ್ಚಿತ ವರನನ್ನು ಬಿಟ್ಟು ತನ್ನ ಸಂಬಂಧಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಳೆ. ಮಹಾರಾಷ್ಟ್ರ ಬುಲ್ಧಾನಾ ಎಂಬ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ಮುಹೂರ್ತ ಮೀರಿದರೂ ಸಹ ವರ ಕಲ್ಯಾಣ ಮಂಟಪಕ್ಕೆ ಬಾರದೇ ಇದ್ದುದನ್ನು ಗಮನಿಸಿದ ವಧುವಿನ ತಂದೆ ತನ್ನ ಸಂಬಂಧಿಯೊಂದಿಗೆ ಮಗಳ ಮದುವೆ ನೆರವೇರಿಸಿದ್ದಾನೆ.
ಬುಲ್ಧಾನ ಜಿಲ್ಲೆಯ ಮಲ್ಕಾಪುರ ಪಂಗ್ರಾ ಎಂಬ ಗ್ರಾಮದಲ್ಲಿ ಏಪ್ರಿಲ್ 22ರಂದು ಮದುವೆಯೊಂದು ನಿಶ್ಚಯವಾಗಿತ್ತು. ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳೂ ಪೂರ್ಣಗೊಂಡಿದ್ದವು.ಸಂಜೆ 4 ಗಂಟೆ ಸುಮಾರಿಗೆ ವರ ವಧುವಿನ ಕೊರಳಿಗೆ ತಾಳಿ ಕಟ್ಟುವುದೊಂದೇ ಬಾಕಿ ಉಳಿದಿತ್ತು.
ವಧುವಿನ ಕುಟುಂಬಸ್ಥರು ವರ ಬರುತ್ತಾನೆಂದು ಕಾಯುತ್ತಾ ಕುಳಿತಿದ್ದರು. ಆದರೆ ರಾತ್ರಿ 8 ಗಂಟೆ ಕಳೆದರೂ ಕೂಡ ವರನ ಸುಳಿವಿರಲಿಲ್ಲ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ವರ ಪಾನಮತ್ತನಾಗಿ ಸ್ನೇಹಿತರ ಜೊತೆಯಲ್ಲಿ ಡ್ಯಾನ್ಸ್ ಮಾಡುವುದರಲ್ಲೇ ಮಗ್ನನಾಗಿದ್ದ ಎನ್ನಲಾಗಿದೆ.
ವಧುವಿನ ತಾಯಿ ಈ ವಿಚಾರವಾಗಿ ಮಾಹಿತಿ ನೀಡಿದ್ದು. ನನ್ನ ಮಗಳನ್ನು ಮದುವೆಯಾಗಬೇಕಿದ್ದ ವ್ಯಕ್ತಿ ಚೆನ್ನಾಗಿ ಕುಡಿದು ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಲೇ ಇದ್ದ. ಆತ ಮಂಟಪಕ್ಕೆ ಬರುವ ವೇಳೆಯಲ್ಲಿ ಗಂಟೆ ಎಂಟಾಗಿತ್ತು. ಮದುವೆಯ ಮುಹೂರ್ತ ಸಂಜೆ ನಾಲ್ಕು ಗಂಟೆಗೆ ನಿಗದಿಯಾಗಿತ್ತು. ವರ ಕಲ್ಯಾಣ ಮಂಟಪಕ್ಕೆ ಬರಲು ತಡ ಮಾಡಿದ್ದಕ್ಕೆ ನಾವು ಸಂಬಂಧಿಯೊಂದಿಗೆ ಮಗಳ ಮದುವೆ ಮಾಡಿ ಮುಗಿಸಿದ್ದೇವೆ ಎಂದು ಹೇಳಿದರು.
ವರ ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದಂತೆಯೇ ಆತನೊಂದಿಗೆ ಮಗಳನ್ನು ಮದುವೆ ಮಾಡಿಕೊಡಲು ವಧುವಿನ ತಂದೆ ಸುತಾರಾಂ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಮದುವೆಗೆ ಅತಿಥಿಯಾಗಿ ಆಗಮಿಸಿದ್ದ ಸಂಬಂಧಿಯೊಬ್ಬರ ಬಳಿ ಪುತ್ರಿಯನ್ನು ಮದುವೆಯಾಗುವಂತೆ ಮನವಿ ಮಾಡಿದ ವಧುವಿನ ತಂದೆ ಶಾಸ್ತ್ರೋಸ್ತ್ರವಾಗಿ ಆತನೊಂದಿಗೆ ಮಗಳ ಮದುವೆ ಕಾರ್ಯ ಮಾಡಿ ನೆರವೇಸಿದರು.
ಇದನ್ನು ಓದಿ : Aravind Kaushik Arrest : ಸ್ಯಾಂಡಲ್ವುಡ್ ನಿರ್ದೇಶಕ ಅರವಿಂದ ಕೌಶಿಕ್ ಅರೆಸ್ಟ್
Bride marries another man at wedding venue after groom fails to reach on time