Megastar Chiranjeevi : ಮಗನದ್ದು ಆಯಿತು, ಮಗಳ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ನಟನೆ!!

ಆಚಾರ್ಯ ಸಿನಿಮಾ ಏಪ್ರಿಲ್ 28ಕ್ಕೆ ತೆರೆಕಾಣಲಿದೆ. ಹಾಗೆ ನೋಡಿದರೆ, ಈ ಸಿನಿಮಾದ ನಿರ್ಮಾಪಕರು ಮತ್ಯಾರು ಅಲ್ಲ. ಚಿರಂಜೀವಿ(Megastar Chiranjeevi) ಅವರ ಮಗ ರಾಮ್ ಚರಣ್ ತೇಜ. ರಾಮ್ ಚರಣ್ ಕೂಡ ಆಚಾರ್ಯ ಸಿನಿಮಾದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರೆ. ಅಪ್ಪ-ಮಗನನ್ನು ಒಂದೇ ತೆರೆಯಲ್ಲಿ ಕಾಣಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ.

ಈ ಸಂದರ್ಭದಲ್ಲೇ ಮತ್ತೊಂದು ಸುದ್ದಿ ಹೊರಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತೊಂದು ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಟಾಲಿವುಡ್ ಮೂಲದ ಪ್ರಕಾರ ಈಗಾಗಲೇ ಈ ಹೊಸ ಸಿನಿಮಾಕ್ಕೆ ಸದ್ದಿಲ್ಲದೆ ಸಹಿ ಹಾಕಿದ್ದಾರೆ. ಆ ಸಿನಿಮಾದ ನಿರ್ಮಾಪಕರು ಬೇರಾರು ಅಲ್ಲ. ಮಗಳು ಮತ್ತು ಅಳಿಯ. ಹೌದು, ಸುಶ್ಮಿತಾ ಕೋನಿಂಡೆಲಾ ಹಾಗೂ ವಿಷ್ಣುಪ್ರಸಾದ್ ತಮ್ಮದೇ ಆದ ಹೊಸ ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ. ಅದರ ಅಡಿ ಚಿರಂಜೀವಿ ಅವರ ಹೊಸ ಸಿನಿಮಾ ನಿರ್ಮಿಸಲು ತೀರ್ಮಾನ ಕೂಡ ಮಾಡಿದ್ದಾರೆ ಎನ್ನಲಾಗಿದೆ.

ಪಾತ್ರವರ್ಗ ಹಾಗೂ ನಿರ್ದೇಶಕರು ಯಾರು ಎನ್ನುವುದು ಇನ್ನು ತೀರ್ಮಾನವಾಗಿಲ್ಲ. ಈಗಾಗಲೇ ಆ ನಿಟ್ಟಿನಲ್ಲಿ ಒಂದಷ್ಟು ಕೆಲಸಗಳು ಆಗಿವೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಸುಶ್ಮಿತಾಗೂ ಸಿನಿಮಾ ರಂಗಕ್ಕೂ ನಂಟಿದೆ. ಈಕೆ ತಂದೆ ಚಿರಂಜೀವಿ ಅವರ ಹಲವು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವಗಳಿಸಿದ್ದಾರೆ. ಈಗ ಅವರು ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಒಂದು ಕಡೆ ಮಗ ರಾಮ್ ಚರಣ್ ತೇಜ ನಿರ್ಮಿಸುತ್ತಿರುವ, ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ನಟಿಸಿದ್ದಾರೆ. ಇನ್ನೊಂದು ಕಡೆ ಮಗಳ ನಿರ್ಮಾಣದ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ನಿರ್ಮಾಪಕರು. ಇನ್ನೊಂದು ಮೂಲದ ಪ್ರಕಾರ, ಇನ್ನು ಮುಂದೆ ಚಿರಂಜೀವಿ ಸಿನಿಮಾಗಳನ್ನು ಕುಟುಂಬದವರೇ ನಿರ್ಮಿಸಲಿದ್ದಾರೆ ಎನ್ನಲಾಗುತ್ತಿದೆ. ಕಾರಣ, ಚಿರಂಜೀವಿ ಅವರ ಇತ್ತೀಚಿನ ಸಿನಿಮಾಗಳು ಸೋಲನ್ನು ಕಾಣುತ್ತಿವೆ. ಇದರಿಂದ ಹೊಸ ನಿರ್ಮಾಪಕರು ಕೋಟಿ ಕೋಟಿ ಸುರಿಯಲು ಹಿಂಜರಿಯುತ್ತಿದ್ದಾರೆ ಎನ್ನುವ ಮಾತು ಇದೆ. ಹೀಗಾಗಿ, ಚಿರಂಜೀವಿ ಸ್ವಂತ ಬ್ಯಾನರ್ ನಲ್ಲಿ ನಟಿಸಲು ತೀರ್ಮಾನಿಸಿದ್ದಾರೆ ಅನ್ನೋ ಗಾಳಿ ಸುದ್ದಿಯೂ ಇದೆ.

ಪ್ರಸ್ತುತ ಚಿರಂಜೀವಿ ಮಲೆಯಾಳಂ ಸಿನಿಮಾ ರಿಮೇಕ್ ಆದ ಗಾಡ್ ಫಾದರ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಅವರ ಪ್ರಮುಖ ಪಾತ್ರವೂ ಇದೆ. ಇದಲ್ಲದೆ, ಮೆಹ್ರ ರಮೇಶ್ ಅವರ ಬೋಲ ಶಂಕರ್ ಕೂಡ ಚಿರಂಜೀವಿ ಅವರ ಬಹುನಿರೀಕ್ಷಿತ ಸಿನಿಮಾ. ಇದೆಲ್ಲ ಮುಗಿದ ಮೇಲೆ ಮಗಳು ನಿರ್ಮಾಣದ ಸಿನಿಮಾದಲ್ಲಿ ತೊಡಗಿಕೊಳ್ಳಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ :Mahesh Baabu : ಅಯ್ಯೋ!! ದುಬೈನಲ್ಲಿ ರಾಜಮೌಳಿ ಜೊತೆ ಯಾವುದೇ ಸಿನಿಮಾ ಮಾತುಕತೆ ನಡೆಸಿಲ್ಲ!

ಇದನ್ನೂ ಓದಿ :Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

(Megastar Chiranjeevi has signed a new film in the daughter’s new banner)

Comments are closed.