ಸೋಮವಾರ, ಏಪ್ರಿಲ್ 28, 2025
HomeCinemaActor Diganth serious injury : ನಟ ದಿಗಂತ್ ಗೆ ಗಂಭೀರ ಗಾಯ : ಚಿಕಿತ್ಸೆಗಾಗಿ...

Actor Diganth serious injury : ನಟ ದಿಗಂತ್ ಗೆ ಗಂಭೀರ ಗಾಯ : ಚಿಕಿತ್ಸೆಗಾಗಿ ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್

- Advertisement -

ಬೆಂಗಳೂರು : ಪುನೀತ್ ದುರಂತ ಮರೆಯುವ ಮುನ್ನವೇ ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತಕಾರಿ ಶಾಕ್ ಎದುರಾಗಿದ್ದು, ಫ್ಯಾಮಿಲಿ ಜೊತೆ ಟ್ರಿಪ್ ಹೋಗಿದ್ದ ಬಹುಭಾಷಾ ನಟ ದಿಗಂತ್ (Actor Diganth serious injury ) ಸಮುದ್ರದಲ್ಲಿ ಆಟವಾಡುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸಮ್ಮಸ್ ಶಾಟ್ ಹೊಡೆಯುವ ವೇಳೆ ನಟ ದಿಗಂತ್ ನೀರಿನಲ್ಲೇ ತೀವ್ರ ಗಾಯಗೊಂಡಿದ್ದು, ಅವರ ಕುತ್ತಿಗೆಗೆ ಗಂಭೀರವಾದ ಏಟಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಸದ್ಯ ಗೋವಾದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಆದರೆ ಅವರ ಸ್ಥಿತಿ ಗಂಭೀರವಾಗಿರೋದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ.

ನಟ ದಿಗಂತ್ ಗೆ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರೋದರಿಂದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಘಟನೆ ವೇಳೆ ದಿಗಂತ್ ಪತ್ನಿ ಹಾಗೂ ನಟಿ ಐಂದ್ರಿತಾ ಕೂಡ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ. ಇತ್ತೀಚಿಗಷ್ಟೇ ನಟ ದಿಗಂತ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ನಟ ದಿಗಂತ್ ಕುಟುಂಬಸ್ಥರ ಜೊತೆ ಟ್ರಿಪ್ ಗೆ ತೆರಳಿದ್ದರು ಎನ್ನಲಾಗಿದೆ.

ಇಂದು ಸಂಜೆ 4.30 ಕ್ಕೆ ನಟ ದಿಗಂತ್‌ ಅವರನ್ನು ಏರ್‌ ಲಿಫ್ಟ್‌ ಮೂಲಕ ಜಕ್ಕೂರು ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಅಲ್ಲಿಂದ ಆಸ್ಪತ್ರೆಗೆ ರಸ್ತೆಯ ಮೂಲಕ ಸಾಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ…..

ಇದನ್ನೂ ಓದಿ : Rashmika Mandanna : ಪುಷ್ಪ ಸಿನಿಮಾದಿಂದ ರಶ್ಮಿಕಾ ಔಟ್ : ಹರಿದಾಡ್ತಿರೋ ಸುದ್ದಿ ಅಸಲಿಯತ್ತೇನು ಗೊತ್ತಾ?

ಇದನ್ನೂ ಓದಿ : Shabaash Mithu Trailer: ಮಿಥಾಲಿ ರಾಜ್ ಕುರಿತಾದ ಸಿನೆಮಾ “ಶಭಾಷ್ ಮಿಥು” ಟ್ರೈಲರ್ ರಿಲೀಸ್ ; ವೀಕ್ಷಕರಿಂದ ಭೇಷ್ ಎನಿಸಿಕೊಂಡ ತಾಪ್ಸಿ

Actor Diganth serious injury: Air lift to Bangalore for further treatment

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular