ಮಂಗಳವಾರ, ಏಪ್ರಿಲ್ 29, 2025
HomeSportsCricketFull domestic season 2022-23 : ದೇಶೀಯ ಕ್ರಿಕೆಟಿಗರಿಗೆ ಶುಭಸುದ್ದಿ.. ಈ ವರ್ಷದಿಂದ ಫುಲ್...

Full domestic season 2022-23 : ದೇಶೀಯ ಕ್ರಿಕೆಟಿಗರಿಗೆ ಶುಭಸುದ್ದಿ.. ಈ ವರ್ಷದಿಂದ ಫುಲ್ ಡೊಮೆಸ್ಟಿಕ್ ಸೀಸನ್.. ಯಾವಾಗ ಯಾವ ಟೂರ್ನಿ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

- Advertisement -

ಬೆಂಗಳೂರು: ಐಪಿಎಲ್’ನಲ್ಲಿ ಆಡಲು ಅವಕಾಶ ಸಿಗದ, ಭಾರತ ಪರ ಆಡುವ ಚಾನ್ಸ್ ಸಿಗಲು ಸಾಧ್ಯವೇ ಇರದ ಆಟಗಾರರಿಗೆ ಆಧಾರಸ್ಥಂಭವೇ ದೇಶೀಯ ಕ್ರಿಕೆಟ್. ಆದರೆ ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಆಧಾರಸ್ಥಂಭವೇ ಕುಸಿದು ಬಿದ್ದಿತ್ತು. ಆದರೆ ದೇಶೀಯ ಕ್ರಿಕೆಟಿಗರಿಗೆ ಮತ್ತೆ ಶುಭ ಸುದ್ದಿ ಸಿಕ್ಕಿದೆ. ಈ ವರ್ಷದಿಂದ ಫುಲ್ ಡೊಮೆಸ್ಟಿಕ್ ಸೀಸನ್ (Full domestic season 2022-23) ಆಡಿಸಲು ಬಿಸಿಸಿಐ ನಿರ್ಧರಿಸಿದೆ.

ರಣಜಿ ಟ್ರೋಫಿ (Ranji Trophy), ಇರಾನಿ ಕಪ್ (Irani Cup), ದುಲೀಪ್ ಟ್ರೋಫಿ (Duleep Trophy), ಸೈಯಯ್ ಮುಷ್ತಾಕ್ ಅಲಿ ಟಿ20 ಟೂರ್ನಿ (Syed Mushtaq Ali T20), ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿ.. ಹೀಗೆ 2022-23ನೇ ಸಾಲಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಫುಲ್ ಸೀಸನ್ ಪಕ್ಕಾ. ಬಿಸಿಸಿಐ ಸಭೆಯಲ್ಲೇ ಈ ಬಗ್ಗೆ ನಿರ್ಧಾರ ವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ. ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಈ ಸಾಲಿನ ದೇಶೀಯ ಕ್ರಿಕೆಟ್ ಸೀನಿಯರ್ ಕ್ರಿಕೆಟ್ ಆರಂಭವಾಗಲಿದ್ದು, ಈ ಟೂರ್ನಿ ಸೆಪ್ಟೆಂಬರ್ 8ರಿಂದ ಆರಂಭವಾಗುವ ಸಾಧ್ಯತೆಯಿದೆ.

ದುಲೀಪ್ ಟ್ರೋಫಿ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಈ ಸಾಲಿನ ರಣಜಿ ಚಾಂಪಿಯನ್ ಮಧ್ಯಪ್ರದೇಶ ಮತ್ತು ರೆಸ್ಟ್ ಆಫ್ ಇಂಡಿಯಾ ತಂಡಗಳ ಮಧ್ಯೆ ಇರಾನಿ ಕಪ್ ಪಂದ್ಯ ಅಕ್ಟೋಬರ್ 1ರಿಂದ 5ರವರೆಗೆ ನಡೆಯಲಿದೆ. ಇರಾನಿ ಕಪ್ ಮುಗಿದ ನಂತರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಅಕ್ಟೋಬರ್ 11ರಂದು ಆರಂಭವಾಗುವ ನಿರೀಕ್ಷೆಯಿದೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನವೆಂಬರ್ 12ರಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ದೇಶೀಯ ಕ್ರಿಕೆಟ್’ನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾಗಿರುವ ರಣಜಿ ಟ್ರೋಫಿ ಡಿಸೆಂಬರ್ 13ರಿಂದ ಆರಂಭವಾಗಲಿದೆ. ರಣಜಿ ಟ್ರೋಫಿ ನಾಕೌಟ್ ಪಂದ್ಯಗಳು ಫೆಬ್ರವರಿ 1ರಿಂದ ಆರಂಭವಾಗಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

2022-23ನೇ ಸಾಲಿನ ದೇಶೀಯ ಕ್ರಿಕೆಟ್ ಟೂರ್ನಿ (ಸಂಭಾವ್ಯ ವೇಳಾಪಟ್ಟಿ)
ದುಲೀಪ್ ಟ್ರೋಫಿ: ಸೆಪ್ಟೆಂಬರ್ 8ರಿಂದ
ಇರಾನಿ ಕಪ್: ಅಕ್ಟೋಬರ್ 1ರಿಂದ 5ರವರೆಗೆ
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಅಕ್ಟೋಬರ್ 11ರಿಂದ
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ: ನವೆಂಬರ್ 12ರಿಂದ
ರಣಜಿ ಟ್ರೋಫಿ ಲೀಗ್ ಪಂದ್ಯಗಳು: ಡಿಸೆಂಬರ್ 13ರಿಂದ
ರಣಜಿ ಟ್ರೋಫಿ ನಾಕೌಟ್ ಪಂದ್ಯಗಳು: ಫೆಬ್ರವರಿ 1ರಿಂದ

ಇದನ್ನೂ ಓದಿ : KL Rahul tested Covid-19 positive : ಇದೆಂಥಾ ಬ್ಯಾಡ್ ಲಕ್..? ಕೆ.ಎಲ್ ರಾಹುಲ್’ಗೆ ಕೋವಿಡ್ ಪಾಸಿಟಿವ್, ಗಾಯದ ಮೇಲೆ ಮತ್ತೊಂದು ಬರೆ

ಇದನ್ನೂ ಓದಿ : Team India’s flight to West Indies : ಲಂಡನ್ To ವೆಸ್ಟ್ ಇಂಡೀಸ್, ಟೀಮ್ ಇಂಡಿಯಾ ಆಟಗಾರರ ಫ್ಲೈಟ್ ಚಾರ್ಜ್ ₹3.5 ಕೋಟಿ

Full domestic season 2022-23 Ranji Trophy Duleep Trophy Syed Mushtaq Ali T20 Vijay Hazare Trophy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular