Neeraj Chopra : ಕಾಮನ್ವೆಲ್ತ್ ಗೇಮ್ಸ್ 2022ನಿಂದ ಹೊರಗುಳಿದ ಚಿನ್ನದ ಹುಡುಗ ನೀರಜ್ ಚೋಪ್ರಾ : ಭಾರತಕ್ಕೆ ಭಾರಿ ಆಘಾತ
ದೆಹಲಿ : Neeraj Chopra : ಕಾಮನ್ವೆಲ್ಸ್ ಗೇಮ್ಸ್ 2022ನಲ್ಲಿ ಭಾರತದ ಪದಕದ ನಿರೀಕ್ಷೆಗೆ ಭಾರಿ ದೊಡ್ಡ ಹೊಡೆತ ಬಿದ್ದಿದ್ದು ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಮನ್ವೆಲ್ತ್ ಗೇಮ್ಸ್ 2022ರಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಉಂಟಾದ ತೊಡೆಸಂದು ಗಾಯದಿಂದಾಗಿ ನೀರಜ್ ಚೋಪ್ರಾ ಮುಂಬರುವ ಕಾಮನ್ವೆಲ್ಸ್ ಗೇಮ್ಸ್ನಿಂದ (Neeraj Chopra To Miss Commonwealth Games) ಹೊರಗುಳಿಯಲಿದ್ದಾರೆ . ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಎಸೆತ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು.
ನೀರಜ್ ಚೋಪ್ರಾ ತಮ್ಮ ಗಾಯದ ಸಮಸ್ಯೆಯ ಬಗ್ಗೆ IOA ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾರಿಗೆ ಮಾಹಿತಿ ನೀಡಿದ್ದಾರೆ .ಮೆಹ್ತಾ ಹೇಳುವಂತೆ, ನೀರಜ್ ಚೋಪ್ರಾ ತೊಡೆಸಂದು ಗಾಯವನ್ನು ವೀಕ್ಷಿಸಿದ ವೈದ್ಯರು ಒಂದು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Our Olympic Champ @Neeraj_chopra1 will not be defending his title at @birminghamcg22 due to concerns regarding his fitness. We wish him a speedy recovery & are supporting him in these challenging times.#EkIndiaTeamIndia #WeareTeamIndia pic.twitter.com/pPg7SYlrSm
— Team India (@WeAreTeamIndia) July 26, 2022
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಸಂಪಾದಿಸಿದ ಮೊದಲ ಟ್ರ್ಯಾಕ್ & ಫೀಲ್ಡ್ ಅಥ್ಲೀಟ್ ಎನಿಸಿದ್ದಾರೆ. ಅಲ್ಲದೇ ಅಂಜು ಬಾಬಿ ಜಾರ್ಜ್ ಬಳಿಕ ಪೋಡಿಯಂ ಫಿನಿಶ್ ಮಾಡಿದ ಎರಡನೇ ಭಾರತೀಯ ಅಥ್ಲೀಟ್ ಎನಿಸಿದ್ದಾರೆ. ನೀರಜ್ ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88,13 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಸಾಧನೆಗೈದ ಬಳಿಕ ಮಾತನಾಡಿದ ನೀರಜ್ ಚೋಪ್ರಾ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇನೆ ಎಂದು ಹೇಳಿದ್ದರು.
ಇದನ್ನು ಓದಿ : Afghanistan : ಹಿಂದೂ ಹಾಗೂ ಸಿಖ್ಖರಿಗೆ ಅಪ್ಘಾನಿಸ್ತಾನಕ್ಕೆ ಮರಳಿ ಬನ್ನಿ ಎಂದು ಮನವಿ ಮಾಡಿದ ತಾಲಿಬಾನ್ ಸರ್ಕಾರ
ಇದನ್ನೂ ಓದಿ : Nathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್
ಇದನ್ನೂ ಓದಿ : Avesh, Axar Recreates Yuzvendra Chahal pose : ವಿಂಡೀಸ್ನಲ್ಲಿ ಚಹಾಲ್ ಪೋಸ್ ರೀಕ್ರಿಯೇಟ್ ಮಾಡಿದ ಅಕ್ಷರ್ ಪಟೇಲ್, ಆವೇಶ್ ಖಾನ್
ಇದನ್ನೂ ಓದಿ : Mithali Raj ಮಹಿಳಾ ಐಪಿಎಲ್ಗಾಗಿ ನಿವೃತ್ತಿ ಹಿಂಪಡೆಯಲಿದ್ದಾರೆ ಸ್ಟಾರ್ ಬ್ಯಾಟರ್ ಮಿಥಾಲಿ ರಾಜ್ ?
Neeraj Chopra To Miss Commonwealth Games 2022 Due to Injury
Comments are closed.