5g spectrum : ದೇಶದಲ್ಲಿ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ : ವೇಗದ ಇಂಟರ್ನೆಟ್​ನತ್ತ ಜನತೆಯ ಚಿತ್ತ

5g spectrum : 4ಜಿ ಗಿಂತ 10 ಪಟ್ಟು ಹೆಚ್ಚಿನ ವೇಗವನ್ನು ಹೊಂದಿರುವ 5ಜಿ ಸ್ಪೆಕ್ಟ್ರಂ ಹರಾಜು ನಡೆಯುತ್ತಿದ್ದು ಸಂಪೂರ್ಣ ದೇಶದ ಚಿತ್ತ ಈ ಹರಾಜು ಪ್ರಕ್ರಿಯೆ ಮೇಲೆ ನೆಟ್ಟಿದೆ. ಬರೋಬ್ಬರಿ 4.3 ಲಕ್ಷ ಕೋಟಿ ರೂಪಾಯಿ ಮೌಲ್ಯದ 72 ಗಿಗಾಹರ್ಟ್ಸ್​​ ರೇಡಿಯೋ ತರಂಗಗಳ ಹಕ್ಕನ್ನು ಯಾರು ಗೆಲ್ತಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ. 5 ಜಿ ಸ್ಪೆಕ್ಟ್ರಂ ಬಳಿಕ ಭಾರೀ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟಾಗಲಿದೆ ಎಂದು ನಿರೀಕ್ಷಿಸಬಹುದಾಗಿದೆ.


ಕೇಂದ್ರ ಸರ್ಕಾರ ಈ ಹಿಂದೆ ದೇಶದಲ್ಲಿ ಶೀಘ್ರದಲ್ಲಿಯೇ 5ಜಿ ಸೇವೆಗಳು ಬರಲಿವೆ ಎಂದು ಹೇಳಿಕೆ ನೀಡಿತ್ತು. ಇದಾದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ತಿಂಗಳಿನಲ್ಲಿ 5 ಜಿ ತರಂಗಾತರಗಳ ಹರಾಜಿಗೆ ಅನುಮತಿ ಕೂಡ ನೀಡಲಾಗಿದೆ. ವರದಿಗಳ ಪ್ರಕಾರ ಮುಂದಿನ ಆರರಿಂದ ಹನ್ನೆರಡು ತಿಂಗಳ ಅವಧಿಯಲ್ಲಿ ದೇಶದಲ್ಲಿ 5ಜಿ ಸೇವೆ ಸೌಕರ್ಯ ಸಿಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಹರಾಜು ಪ್ರಕ್ರಿಯೆಯಲ್ಲಿ 72 ಗಿಗಾಹರ್ಟ್ಸ್​ ಪ್ರಮಾಣದ ಸ್ಪೆಕ್ಟ್ರಂನ್ನು ಸುಮಾರು 20 ವರ್ಷಗಳ ಮಾನ್ಯತೆಯ ಅಡಿಯಲ್ಲಿ ಹರಾಜಿಗೆ ಇಡಲಾಗುತ್ತದೆ.


ರಿಲಾಯನ್ಸ್​ ಜಿಯೋ , ವೋಡಾಫೋನ್​, ಏರ್​ಟೆಲ್​ ಭಾರ್ತಿ ಹಾಗೂ ಅದಾನಿ ಡೇಟಾ ನೆಟ್​ವರ್ಕ್ಸ್​ ಈ ಸ್ಪೆಕ್ಟ್ರಂನ್ನು ಖರೀದಿ ಮಾಡಲಿವೆ . ಪ್ರಸ್ತುತ ಇರುವ 4ಜಿ ನೆಟ್​ವರ್ಕ್​ಗಿಂತ 5ಜಿ ಸ್ಪೆಕ್ಟ್ರಂಗಳು 10 ಪಟ್ಟು ಹೆಚ್ಚಿನ ವೇಗವನ್ನು ಹೊಂದಿವೆ. ಬೆಳಗ್ಗೆ 10 ಗಂಟೆಯಿಂದಲೇ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಇಂದು ಸಂಜೆ ಆರು ಗಂಟೆಯವರೆಗೂ ಈ ಹರಾಜು ಪ್ರಕ್ರಿಯೆ ಮುಂದುವರಿಯಲಿದೆ ಎನ್ನಲಾಗಿದೆ.


ದೂರಸಂಪರ್ಕ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ 5ಜಿ ಸೇವೆಯನ್ನು ನೀಡಲಾಗುತ್ತದೆ. ಮೊದಲ ಹಂತದಲ್ಲಿ 5ಜಿ ನೆಟ್​ವರ್ಕ್​ ಪಡೆಯುವ ದೇಶದ ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್​, ಜಾಮ್​ನಗರ,ಹೈದರಾಬಾದ್​, ಲಕ್ನೋ, ಚೆನ್ನೈ, ಪುಣೆ, ಗಾಂಧಿ ನಗರ,ಸ್ಥಾನ ಪಡೆದಿವೆ .

ಇದನ್ನು ಓದಿ : Train Update: ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದ 148 ರೈಲು ಸಂಪೂರ್ಣವಾಗಿ ರದ್ದು

ಇದನ್ನೂ ಓದಿ : Afghanistan : ಹಿಂದೂ ಹಾಗೂ ಸಿಖ್ಖರಿಗೆ ಅಪ್ಘಾನಿಸ್ತಾನಕ್ಕೆ ಮರಳಿ ಬನ್ನಿ ಎಂದು ಮನವಿ ಮಾಡಿದ ತಾಲಿಬಾನ್​ ಸರ್ಕಾರ

5g spectrum auction begins in india

Comments are closed.