ಸೋಮವಾರ, ಏಪ್ರಿಲ್ 28, 2025
HomeSportsCricketVirat Kohli Shuts RCB Chants: ಭಾರತ Vs ಆಸೀಸ್ ಟಿ20 ಪಂದ್ಯದಲ್ಲಿ "ಆರ್‌ಸಿಬಿ, ಆರ್‌ಸಿಬಿ"...

Virat Kohli Shuts RCB Chants: ಭಾರತ Vs ಆಸೀಸ್ ಟಿ20 ಪಂದ್ಯದಲ್ಲಿ “ಆರ್‌ಸಿಬಿ, ಆರ್‌ಸಿಬಿ” ಎಂದು ಕೂಗಿದವರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

- Advertisement -

ನಾಗ್ಪುರ: (Virat Kohli RCB) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ. 2008ರಿಂದಲೂ RCB ಪರ ಆಡುತ್ತಿರುವ ವಿರಾಟ್ ಕೊಹ್ಲಿಯವರನ್ನು RCB ಅಭಿಮಾನಿಗಳು ಪ್ರೀತಿಸುತ್ತಾರೆ, ಇಷ್ಟ ಪಡುತ್ತಾರೆ. ಕೊಹ್ಲಿ ಎಲ್ಲೇ ಹೋದರೂ ಅವರನ್ನು ಬೆಂಬಲಿಸುತ್ತಾರೆ. ಆದರೆ ಅದೇ ವಿರಾಟ್ ಕೊಹ್ಲಿ RCB ಅಭಿಮಾನಿಗಳ ವಿರುದ್ಧವೇ ಗರಂ ಆದ ಘಟನೆ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದ ವೇಳೆ ನಡೆದಿದೆ.

ಭಾರತ ಮತ್ತು ಆಸೀಸ್ ನಡುವಿನ 2ನೇ ಟಿ20 ಪಂದ್ಯ (India Vs Australia T20 series) ನಾಗ್ಪುರದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದಿತ್ತು. ಭಾರತದ ಪಾಲಿಗೆ ಮಾಡು ಇಲ್ಲ ಮಡಿ ಎಂಬಂತಾಗಿದ್ದ ಪಂದ್ಯವನ್ನು ರೋಹಿತ್ ಶರ್ಮಾ ಬಳಗ 6 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು. ಮಳೆಯ ಕಾರಣ 8 ಓವರ್’ಗಳಿಗೆ ಸೀಮಿತಗೊಂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ 8 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಭಾರತ 7.2 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತ್ತು.

ಪಂದ್ಯ ಮುಗಿದ ಬೆನ್ನಲ್ಲೇ ಪೆವಿಲಿಯನ್’ನಲ್ಲಿದ್ದ ವಿರಾಟ್ ಕೊಹ್ಲಿ ಅವರನ್ನು ನೋಡಿದ ಕೆಲ ಅಭಿಮಾನಿಗಳು “ಆರ್’ಸಿಬಿ, ಆರ್’ಸಿಬಿ” ಎಂದು ಕೂಗಲಾರಂಭಿಸಿದರು. ಇದರಿಂದ ಅಸಮಾಧಾನಗೊಂಡ ವಿರಾಟ್ ಕೊಹ್ಲಿ, ತಾವು ಧರಿಸಿದ್ದ ಜರ್ಸಿಯಲ್ಲಿದ್ದ ಬಿಸಿಸಿಐನ ಲಾಂಛನವನ್ನು ತೋರಿಸುತ್ತಾ ಭಾರತ ಪರ ಘೋಷಣೆ ಕೂಗಿ ಎಂದು ಅಭಿಮಾನಿಗಳಿಗೆ ಸೂಚಿಸಿದರು. ಆ ದೃಶ್ಯ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ವೇಲೆ ಕೆಲ ರಾಯಲ್ ಚಾಲೆಂಜರ್ಸ್ ತಂಡದ ಅಭಿಮಾನಿಗಳು “ಆರ್’ಸಿಬಿ, ಆರ್’ಸಿಬಿ” ಎಂದು ಕೂಗುವುದು ಸಾಮಾನ್ಯವಾಗಿ ಬಿಟ್ಟಿದೆ. ಕರ್ನಾಟಕ ತಂಡದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಪಂದ್ಯಗಳನ್ನಾಡುತ್ತಿದ್ದ ವೇಳೆಯೂ ಇಂತಹ ಘಟನೆಗಳು ನಡೆದಿವೆ. ಈಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಸರದಿ. RCB ಅಭಿಮಾನಿಗಳ ಈ ನಡೆಗೆ ಗರಂ ಆಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾವು ದೇಶ ಪರ ಆಡುತ್ತಿರುವ ಸಂದರ್ಭದಲ್ಲಿ “ಇಂಡಿಯಾ” ಎಂದು ಘೋಷಣೆ ಕೂಗಬೇಕೇ ವಿನಃ “ಆರ್’ಸಿಬಿ, ಆರ್’ಸಿಬಿ” ಎಂಬುದಾಗಿ ಕೂಗುವುದು ತಪ್ಪು ಎಂದು RCB ಅಭಿಮಾನಿಗಳಿಗೆ ಕೈಸನ್ನೆ ಮೂಲಕವೇ ಹೇಳಿದ್ದಾರೆ.

ಇದನ್ನೂ ಓದಿ : Rahul Dravid : ಹೃದಯವಂತ ರಾಹುಲ್ ದ್ರಾವಿಡ್.. “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಇಷ್ಟವಾಗೋದು ಇದೇ ಕಾರಣಕ್ಕೆ

ಇದನ್ನೂ ಓದಿ : BCCI: ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇದೆಂಥಾ ದುರ್ಗತಿ..?

RCB Audience silences Virat Kohli India vs Australia T20 match

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular