Kannada Bigg Boss Season 9 : ಕಿರುತೆರೆಯಲ್ಲಿ ಬಿಗ್‌ಬಾಸ್‌ ಅಬ್ಬರ : ಹೊಸಬರು, ಹಳಬರ ಕಾದಾಟ

ಕನ್ನಡ ಕಿರುತೆರೆಯಲ್ಲಿ ಮತ್ತೆ ಬಿಗ್‌ಬಾಸ್‌ ಹವಾ ಶುರುವಾಗಿದೆ. (Kannada Bigg Boss Season 9)ಕನ್ನಡದ ಬಿಗ್‌ಬಾಸ್‌ ಸೀಸನ್‌ 9ರ ಆವೃತ್ತಿಗೆ ಗ್ರ್ಯಾಂಡ್‌ ಓಪನಿಂಗ್‌ ಸಿಕ್ಕಿದ್ದು, ಪ್ರೀಮಿಯರ್‌ ಸಂಚಿಕೆಗಳ ಮೂಲಕ ಶೋ ಆರಂಭವಾಗಿದೆ. ಬಹಳಷ್ಟು ನಿರೀಕ್ಷೆಗಳಿಂದ ಕೂಡಿದ ಕನ್ನಡದ ಬಿಗ್‌ಬಾಸ್‌ ನಿನ್ನೆ ಸಂಜೆ 6 ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಗ್ಯ್ರಾಂಡ್‌ ಪ್ರೀಮಿಯರ್‌ ಸಂಚಿಕೆ ಮೂಲಕ ಪ್ರಾರಂಭವಾಗಿದೆ. ಸಂಜೆ 6 ಗಂಟೆಗೆ ಪ್ರಸಾರವಾದ ಸಂಚಿಕೆ ರಾತ್ರಿ 11 ಗಂಟೆ ವರೆಗೆ ಸಾಗಿತ್ತು. ಈ ಬಾರಿ ಬಿಗ್‌ಬಾಸ್‌ ರಿಯಾಲಿಟಿ ಶೋ ನಿಜಕ್ಕೂ ಬಹಳಷ್ಟು ನಿರೀಕ್ಷೆಯಿಂದ ಕೂಡಿದೆ. ಈ ಬಾರಿ ಬಿಗ್‌ಬಾಸ್‌ನ 9ನೇ ಆವೃತ್ತಿ.

(Kannada Bigg Boss Season 9)ಈ ಬಾರಿ ಬಿಗ್‌ಬಾಸ್ ಮನೆಗೆ ಅಧಿಕೃತವಾಗಿ ಬಂದಿರುವ 18 ಸ್ಪರ್ಧಿಗಳು ಇವರೇ ಅರುಣ್‌ ಸಾಗರ್‌, ಮಯೂರಿ ಕ್ಯಾತರಿ, ದೀಪಿಕಾ ದಾಸ್‌,ನವಾಜ್‌, ದಿವ್ಯಾ ಉರುಡುಗ, ದರ್ಶ್‌ ಚಂದ್ರಪ್ಪ, ಪ್ರಶಾಂತ್‌ ಸಂಬರ್ಗಿ, ಅಮೂಲ್ಯ ಗೌಡ, ಸಾನ್ಯಾ ಅಯ್ಯರ್‌, ರೂಪೇಶ್‌ ಶೆಟ್ಟಿ, ವಿನೋದ್‌ ಗೊಬ್ಬರಗಾಲ, ನೇಹಾ ಗೌಡ, ರೂಪೇಶ್‌ ರಾಜಣ್ಣ, ಆರ್ಯವರ್ಧನ್‌, ರಾಕೇಶ್‌ ಅಡಿಗ, ಐಶ್ವರ್ಯ ಪಿಸೆ, ಕಾವ್ಯಶ್ರೀ ಗೌಡ ಹಾಗೂ ಅನುಪಮಾ ಆನಂದ್‌ ಕುಮಾರ್‌.

ಬಿಗ್‌ಬಾಸ್‌ ಮನೆ ಸೇರಿರುವ ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿದ್ದಾರೆ. ಅದ್ರಲ್ಲೂ ಈ ಬಾರಿ ಕಿರುತರೆ ಕ್ಷೇತ್ರದಿಂದಲೇ ಅತೀ ಹೆಚ್ಚು ಮಂದಿ ಬಂದಿದ್ದಾರೆ. ಹೊಸಸ್ಪರ್ಧಿಗಳ ಸಾಲಿನಲ್ಲಿ ನವಾಜ್‌ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿ ಸೆನ್ಸೇಷನ್‌ ಹುಟ್ಟು ಹಾಕಿದ್ದಾರೆ. ನವಾಜ್‌ ಸಿನಿಮಾದ ಬಗ್ಗೆ ನೀಡುವ ಮಾಹಿತಿ ವಿಭಿನ್ನವಾಗಿದೆ. ಯಾವುದೇ ಒಂದು ಸನ್ನಿವೇಶವನ್ನು ಅವರದೇ ಆದ ದಾಟಿಯಲ್ಲಿ ಹೇಳುವುದು ಬಹಳ ವಿಭಿನ್ನವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.

ಇನ್ನು ಮಾಡೆಲಿಂಗ್‌ ಹಾಗೂ ನಟನಾ ಕ್ಷೇತ್ರದಿಂದ ಬಂದಿರುವ ದರ್ಶ್‌ ಚಂದ್ರಪ್ಪ ಎನರ್ಜಿ ಎಲ್ಲರ ಗಮನವನ್ನು ಸೆಳೆದಿದೆ. ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಅವರ ಎನರ್ಜಿಯನ್ನು ನೋಡಬೇಕಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿಯನ್ನು ನೋಡಿದ್ದವರಿಗೆ ಅಮೂಲ್ಯ ಗೌಡರವರ ಪರಿಚಯವಿರುತ್ತದೆ. ಕಮಲಿ ಧಾರಾವಾಹಿಯಲ್ಲಿ ನೋಡಿದ ಮುಗ್ಧ ಹಳ್ಳಿ ಹುಡುಗಿಯನ್ನು ಬಿಗ್‌ಬಾಸ್‌ ಮನೆಯಲ್ಲಿ ಹೇಗೆ ಇರುತ್ತಾರೆಂದು ನೋಡಲು ಅಮೂಲ್ಯ ಗೌಡ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಮಜಾಭಾರತದಿಂದ ತಮ್ಮ ವಿಭಿನ್ನ ಸ್ವರದಿಂದ ಎಲ್ಲರನ್ನೂ ನಗಿಸಿಕೊಂಡು ಬಂದ ವಿನೋದ ಗೊಬ್ಬರಗಾಲ ಅವರಿಗೆ ವಿಶೇಷ ಅಭಿಮಾನಿ ಬಳಗವಿದೆ. ಬಿಗ್‌ಬಾಸ್‌ ಮನೆಯಲ್ಲಿ ಇವರ ಹಾಸ್ಯವನ್ನು ನೋಡವುದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ : ಮೈಸೂರು ಯುವ ದಸರಾ; ಸ್ಪೂಕಿ ಕಾಲೇಜ್‌ ಟೀಸರ್‌ ಬಿಡುಗಡೆ

ಇದನ್ನೂ ಓದಿ : ಬಿಗ್‌ಬಾಸ್‌ ಕನ್ನಡದ ಸೀಸನ್‌ 9 : 18 ಬಿಗ್‌ಬಾಸ್ ಸ್ಪರ್ಧಿಗಳ ಲಿಸ್ಟ್‌

ಇದನ್ನೂ ಓದಿ :  ‘ಗಜರಾಮ’ ನಾದ ರಾಜವರ್ಧನ್ ಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಗೊಂಬೆಯಾಗಿ ಈಗಾಗಲೇ ಕನ್ನಡಿಗರ ಮನೆ ಮನಗೆದ್ದಿದ್ದಾರೆ ನೇಹಾ ಗೌಡ. ಸರಳತೆಯ ಮೂಲಕ ಖ್ಯಾತಿ ಗಳಿಸಿರುವ ನೇಹಾ ಗೌಡ ಬಿಗ್‌ ಬಾಸ್‌ ಮನೆಯಲ್ಲಿ ಹೇಗೆ ಇರ್ತಾರೆ ಅನ್ನೋ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಕನ್ನಡ ನಾಡು ಹಾಗೂ ಭಾಷೆ ಬಗ್ಗೆ ಚಳುವಳಿಯನ್ನು ಮಾಡಿಕೊಂಡು ಬರುವ ಮೂಲಕ ಜನರಲ್ಲಿ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸಿದ ರೂಪೇಶ್‌ ರಾಜಣ್ಣ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೋಟರ್‌ ಸ್ಪೋಟ್ಸ್‌ನಲ್ಲಿ ದಾಖಲೆ ಬರೆದಿರುವ ಐಶ್ವರ್ಯ ಪಿಸೆರವರು ಕೂಡ ಬಿಗ್‌ಬಾಸ್‌ ಮನೆ ಸೇರಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೆಚ್ಚಿನ ಟಿಆರ್‌ಪಿಯನ್ನು ಮಂಗಳಗೌರಿ ಮದುವೆ ಧಾರಾವಾಹಿಯ ನಟಿ ಕಾವ್ಯಶ್ರೀ ಗೌಡ ಕೂಡ ಬಿಗ್‌ಬಾಸ್‌ ಮನೆಯ ಸ್ಪರ್ಧಿಯಾಗಿದ್ದಾರೆ. ಒಟ್ಟಾರೆ ಆಗಿ ಬಿಗ್‌ಬಾಸ್‌ ಮನೆಯಲ್ಲಿ ಪ್ರವೀಣರ ಜೊತೆ ನವೀನರ ಹಣಾಹಣಿಯು ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಹಳೆ ಸ್ಪರ್ಧಿಗಳ ಆಟವನ್ನು ನೋಡಿದವರಿಗೆ ಹೊಸಬರು ಹೇಗೆ ಆಟ ಆಡುತ್ತಾರೆಂದು ನೋಡಬೇಕಾಗಿದೆ.

Kannada Bigg Boss Season 9 colors kannada small screen

Comments are closed.