Dasara 2022 : ಕರಾವಳಿಯಲ್ಲಿ ನವರಾತ್ರಿಯಂದು ನಡೆಯುತ್ತೆ ತೆನೆಪೂಜೆ : ಈ ಆಚರಣೆಯ ಬಗ್ಗೆ ನಿಮಗೆ ಗೊತ್ತಾ ?

ಮೈಸೂರು :(Dasara 2022)ನಾಡಿನಾದ್ಯಂತ ನಾಡಹಬ್ಬ ದಸರಾ ಸಂಭ್ರಮ. ನಾಳೆಯಿಂದ ಅಕ್ಟೋಬರ್‌ 4 ವರೆಗೆ ದೇಶದಾದ್ಯಂತ ನವರಾತ್ರಿ ಉತ್ಸವ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ದೇವಿಯನ್ನು ಆರಾಧಿಸುವ ಹಬ್ಬವನ್ನು ನವರಾತ್ರಿ ಎಂದು ಕರೆಯುತ್ತಾರೆ. ನಮ್ಮ ಕರ್ನಾಟಕದಲ್ಲಿ ಆಚರಿಸುವ ನವರಾತ್ರಿಯನ್ನು ನಾಡಹಬ್ಬ “ದಸರಾ” ಎಂದು ಕರೆಯುತ್ತೇವೆ. ಹೀಗೆ ದೇಶದೆಲ್ಲಡೆ ನವರಾತ್ರಿಯಂದು ದೇವಿಯನ್ನು ವಿವಿಧ ರೀತಿಯಲ್ಲಿ ಆರಾಧಿಸುತ್ತಾರೆ.

ನವರಾತ್ರಿಯ ಬಗ್ಗೆ ಪುರಾಣಗಳಲ್ಲಿ ಬಹಳಷ್ಟು ಉಲ್ಲೇಖಗಳಿವೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳ ಸಮೂಹವಾಗಿದೆ. ಈ ಹಿಂದೆಲ್ಲಾ ಐದು ದಿನದ ನವರಾತ್ರಿ ಆಚರಣೆಯು ಬಹಳ ವಿಶೇಷವಾಗಿತ್ತು. ಆದರೆ ಈಗ ಎರಡು ನವರಾತ್ರಿಗಳು ವಿಶೇಷವಾಗಿದ್ದು, ಎರಡು ಕೂಡ ಆಚರಣೆಯಲ್ಲಿದೆ. ಅದರಲ್ಲಿ ಒಂದು ಶರನ್ನವರಾತ್ರಿಯಾದರೆ ಇನ್ನೊಂದು ಚೈತ್ರ ನವರಾತ್ರಿಯನ್ನಾಗಿ ಆಚರಿಸುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ ನವರಾತ್ರಿಯನ್ನು ಹೆಚ್ಚಾಗಿ ಎಲ್ಲರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬವಾಗಿದೆ. ನವರಾತ್ರಿಯ ವಿಶಿಷ್ಟತೆ ಎಂದರೆ ಶಕ್ತಿಯ ಆರಾಧನೆಯಾಗಿರುತ್ತದೆ.

ಪುರಾಣಗಳ ಪ್ರಕಾರ ಜಗನ್ಮಾತೆಯು ದುಷ್ಟರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರ ಎತ್ತಿ ಲೋಕ ಕಲ್ಯಾಣಕ್ಕಾಗಿ ರಾಕ್ಷಸರನ್ನು ಸಂಹಾರ ಮಾಡಿ ಲೋಕವನ್ನು ಕಾಪಾಡುತ್ತಾಳೆ. ಇದ್ದರಿಂದಾಗಿ ನವರಾತ್ರಿಯ ಒಂಭತ್ತು ದಿನವು ಬಹಳ ವಿಶೇಷವಾಗಿರುತ್ತದೆ. ನವರಾತ್ರಿಯಂದು ಆದಿಶಕ್ತಿಯನ್ನು ಒಂಭತ್ತು ದಿನಗಳ ಕಾಲ ನವ ವಿಧದಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ಒಂಭತ್ತು ದಿನಗಳ ಕಾಲ ದೇವಿಯನ್ನು ಒಂಭತ್ತು ರೂಪದಲ್ಲಿ ಆರಾಧಿಸುತ್ತಾರೆ. ದೇವಿಯ ಒಂಭತ್ತು ಅವತಾರಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತೆ, ಕಾತ್ಯಾಯನಿ, ಮಹಾಕಾಳಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ರೂಪದಲ್ಲಿ ಆರಾಧಿಸುತ್ತಾರೆ.

ಇದನ್ನೂ ಓದಿ : ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ ನಟ ಕಿಚ್ಚ ಸುದೀಪ್

ಇದನ್ನೂ ಓದಿ : ನವರಾತ್ರಿಯ ಒಂಬತ್ತು ಬಣ್ಣಗಳ ವಿಶೇಷತೆ ನಿಮಗೆ ಗೊತ್ತಾ

ಇದನ್ನೂ ಓದಿ : ದೇಶದ ಯಾವ್ಯಾವ ಭಾಗದಲ್ಲಿ ನವರಾತ್ರಿ ಆಚರಣೆ ಹೇಗಿರುತ್ತೆ : ಇಲ್ಲಿದೆ ಮಾಹಿತಿ

ನವರಾತ್ರಿ ದಿನಗಳಲ್ಲಿ ಮನೆಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿರುತ್ತದೆ. ಇನ್ನೂ ನಮ್ಮ ಕರಾವಳಿ ತೀರದಲ್ಲಿ ನವರಾತ್ರಿ ಒಂಭತ್ತು ದಿನಗಳಲ್ಲಿ ಒಂದು ದಿನ ತಾವು ಮಳೆಗಾಲದಲ್ಲಿ ಗದ್ದೆಗಳಲ್ಲಿ ಬಿತ್ತಿದ ಭತ್ತದ ತೆನೆಗಳನ್ನು ಕೊಯ್ದು ತಂದು ಅದನ್ನು ಮೊದಲಿಗೆ ತುಳಸಿಕಟ್ಟೆಯ ಮುಂದೆ ಇಟ್ಟು ಪೂಜಿಸಿ ನಂತರ ಮನೆಯ ಒಳಗೆಡೆ ತಂದು ಪೂಜಿಸಿ ಮಾವಿನಕುಡಿ, ಹಲಸಿನ ಎಲೆ ಹಾಗೂ ಭತ್ತದ ಪೈರನ್ನು ಒಟ್ಟು ಸೇರಿಸಿ ಮನೆಯ ಪ್ರವೇಶದ್ವಾರಕ್ಕೆ ಕಟ್ಟುತ್ತಾರೆ. ಹಾಗೆ ಮನೆಯಲ್ಲಿ ಹಬ್ಬದ ಅಡುಗೆ ಮಾಡುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟಂತೆ ಈ ಹಬ್ಬದ ಸ್ವರೂಪವನ್ನು ಕಾಣಬಹುದಾಗಿದೆ.

Tenepuja takes place on Navratri in the coast: Do you know about this ritual?

Comments are closed.