weight gain : ಹಲವು ಮಂದಿ ದೇಹದ ತೂಕ ಹೆಚ್ಚಿಸಲು ಹರಸಾಹಸ ಪಡುತ್ತಾರೆ. ಅದಕ್ಕೆಂದೆ ದುಪ್ಪಟ್ಟು ಹಣವನ್ನು ಖರ್ಚು ಮಾಡುತ್ತಾರೆ.ಪೌಡರ್ ಮತ್ತು ಔಷಧ ಖರೀದಿಸಿ ಹಣವನ್ನು ವ್ಯಯ ಮಾಡುತ್ತಾರೆ. ಇದರ ಬದಲು ಮನೆಯಲ್ಲೇ ತೂಕವನ್ನು ಹೆಚ್ಚಿಸಲು ಮಿಲ್ಕ್ ಶೇಕ್ ಕುಡಿಯಿರಿ.
weight gain : ಬೇಕಾಗುವ ಸಾಮಗ್ರಿಗಳು:
ಬಾಳೆ ಹಣ್ಣು
ಖರ್ಜೂರ
ಬಾದಾಮಿ
ಹಾಲು
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಯಲ್ಲಿ ಬಾಳೆಹಣ್ಣು, ಖರ್ಜೂರ, ಬಾದಾಮಿ, ಹಾಲು ಹಾಕಿ ಗ್ರೈಂಡ್ ಮಾಡಿಕೊಂಡು ಒಂದು ಲೋಟದಲ್ಲಿ ಹಾಕಿ ಕುಡಿದರೆ ಆರೋಗ್ಯವಾಗಿ ತೂಕವನ್ನು ಹೆಚ್ಚಿಸಬಹುದು.
ಬಾಳೆ ಹಣ್ಣು:
ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ದಿನಕ್ಕೆ ಎರಡು ಬಾರಿ ಬಾಳೆ ಹಣ್ಣು ತಿನ್ನುವುದರಿಂದ ರಕ್ತದೊತ್ತಡ ಕಡಿಮೆ ಮಾಡಲು ಸಹಾಯವಾಗುತ್ತದೆ. ತೂಕವನ್ನು ಕಳೆದು ಕೊಳ್ಳಲು ಬಾಳೆಹಣ್ಣು ಕೂಡ ಸಹಕಾರಿಯಾಗಿದೆ.
ಖರ್ಜೂರ:
ಖರ್ಜೂರವನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ರಾತ್ರಿ ವೇಳೆ ನಿದ್ರೆ ಸರಿಯಾಗಿ ಬರೆದಿದ್ದರೆ ಖರ್ಜೂರವನ್ನು ತಿನ್ನುವುದರಿಂದ ಉತ್ತಮವಾಗಿ ನಿದ್ರಿಸಿಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಿದೆ . ಪ್ರತಿದಿನ ಒಂದು ಖರ್ಜೂರವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ:World Food Day 2022 : ಇಂದು “ವಿಶ್ವ ಆಹಾರ ದಿನ” : ಏನಿದರ ಮಹತ್ವ
ಇದನ್ನೂ ಓದಿ:Malabar Spinach:ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ
ಇದನ್ನೂ ಓದಿ:Eye Care:ಕಣ್ಣಿನ ಸಮಸ್ಯೆಗೆ ಮನೆಯಲ್ಲೇ ಆರೈಕೆ
ಬಾದಾಮಿ:
ಬಾದಾಮಿ ತಿನ್ನುವುದರಿಂದ ಮುಖದ ಕಾಂತಿ ಹೆಚ್ಚಿಸುವುದಲ್ಲದೆ ಮಧುಮೇಹಿಗಳ ಆರೋಗ್ಯಕ್ಕೂ ಉತ್ತಮ. ದಿನಕ್ಕೆ ಒಂದು ಲೋಟ ಬಾದಾಮಿ ಹಾಲನ್ನು ಕುಡಿದರೆ ಜಠರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
Want to increase body weight? So here is a healthy tip