Spinach Green Dal Recipe : ಪಾಲಕ್‌ ಸೊಪ್ಪಿನ ದಾಲ್‌ ಪ್ರೈ ತಿಂದಿದ್ರಾ ?

ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹಕ್ಕೆ ಉತ್ತಮ ಪೌಷ್ಟಿಕಾಂಶಗಳು ಸಿಗುತ್ತದೆ. ಮಾರುಕಟ್ಟೆಯಲ್ಲಿ ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬಸಗಿ ಸೊಪ್ಪು ಹಾಗೂ ಇನ್ನಿತರ ಸೊಪ್ಪುಗಳನ್ನು ಹೆಚ್ಚಾಗಿ ಲಭ್ಯವಿರುತ್ತದೆ.ಈ ಸೊಪ್ಪುಗಳಿಂದ ಸಾರು, ಪಲ್ಯ, ಬಜ್ಜಿ ಹಾಗೂ ಖಾದ್ಯಗಳನ್ನು ಮಾಡಬಹುದಾಗಿದೆ. ಅದರಲ್ಲಿ ಪಾಲಕ್‌ ಸೊಪ್ಪಿನ ದಾಲ್‌ ಪ್ರೈ(Spinach Green Dal Recipe) ತುಂಬಾ ರುಚಿಯಾಗಿರುತ್ತದೆ. ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಪಾಲಕ್‌ ಸೊಪ್ಪು
  • ತೊಗರಿಬೇಳೆ
  • ಟೊಮೊಟೊ
  • ಈರುಳ್ಳಿ
  • ಜೀರಿಗೆ
  • ಶುಂಠಿ
  • ಬೆಳ್ಳುಳ್ಳಿ
  • ತುಪ್ಪ/ಎಣ್ಣೆ

ತಯಾರಿಸುವ ವಿಧಾನ :


ಮೊದಲಿಗೆ ಒಂದು ಕುಕ್ಕರಿಗೆ ಒಂದು ಕಪ್‌ ತೊಗರಿಬೇಳೆ ಹಾಗೂ ಬೇಯಸಲು ಬೇಕಾದಷ್ಟು ನೀರು ಮತ್ತು ಚಿಟಿಕೆಯಷ್ಟು ಉಪ್ಪುನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಬೇಯಿಸಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಎರಡು ಟೇಬಲ್‌ ಸ್ಪೂನ್‌ನಷ್ಟು ತುಪ್ಪವನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ ಒಂದು ಚಮಚ ಜೀರಿಗೆ, ಐದರಿಂದ ಏಳು ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿಯನ್ನು ಹಾಕಿ ಸೌಟನ್ನು ಆಡಿಸಬೇಕು. ಸಣ್ಣಕ್ಕೆ ಹಚ್ಚಿದ ಒಂದು ಈರುಳ್ಳಿ, ಸ್ವಲ್ಪ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಪ್ರೈ ಮಾಡಿಕೊಳ್ಳಬೇಕು. ಇದಕ್ಕೆ ನಾಲ್ಕು ಹಸಿಮೆಣಸನ್ನು ಹಾಕಿ ಹುರಿದುಕೊಳ್ಳಬೇಕು. ನಂತರ 3 ಟೊಮೊಟೊ ಮತ್ತು ಅರ್ಧ ಟೀ ಸ್ಪೂನ್‌ನಷ್ಟು ಅರಶಿನವನ್ನು ಸೇರಿಸಿಕೊಂಡು ಬೇಯಿಸಿಕೊಳ್ಳಬೇಕು. ಆಮೇಲೆ ಇದಕ್ಕೆ ಸಣ್ಣಕ್ಕೆ ಹಚ್ಚಿದ ಪಾಲಕ್‌ ಸೊಪ್ಪುನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಬೇಯಿಸಿಕೊಳ್ಳಬೇಕು. ನಂತರ ಕುಕ್ಕರ್‌ನಲ್ಲಿ ಬೆಂದಿರುವ ಬೇಳೆಯನ್ನು ಸ್ಮ್ಯಾಶ್‌ ಮಾಡಿಕೊಂಡು ಇದಕ್ಕೆ ಸೇರಿಸಿಕೊಂಡರೆ ಬಿಸಿಬಿಸಿ ಪಾಲಕ್‌ ದಾಲ್‌ ಪ್ರೈ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ವೈಟ್‌ ರೈಸ್‌, ರೊಟ್ಟಿ, ಚಪಾತಿ ಮತ್ತು ಇಡ್ಲಿ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

ಇದನ್ನೂ ಓದಿ : Squid fish:ಬೊಂಡಾಸ್ ಪ್ರಿಯರಿಗಾಗಿ ಬೊಂಡಾಸ್‌ ಸುಕ್ಕ ರೆಸಿಪಿ

ಇದನ್ನೂ ಓದಿ : Rava Rotti Recipe : ರವೆ ಉಪ್ಪಿಟ್ಟು ಬದಲು ರವೆ ರೊಟ್ಟಿ ಟೇಸ್ಟ್ ಮಾಡಿ

ಇದನ್ನೂ ಓದಿ : Egg New Recipe : ಬಹುಬೇಗನೆ ತಯಾರಿಸಬಹುದು ಮೊಟ್ಟೆಯ ಹೊಸ ರೆಸಿಪಿ

ಪಾಲಕ್‌ ಸೊಪ್ಪಿನ ಉಪಯೋಗ:

ಹಾಗೆ ಪಾಲಕ್‌ ಸೊಪ್ಪಿನಲ್ಲಿರುವ ವಿಟಮಿನ್‌ಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದರಲ್ಲಿ ಹೆಚ್ಚಿನ ಕಬ್ಬಿನಾಂಶವಿರುವುದರಿಂದ ಇದು ರಕ್ತವನ್ನು ಶುದ್ಧಿಗೊಳಿಸುತ್ತದೆ ಮತ್ತು ರಕ್ತ ಚಲನೆಯನ್ನು ಸರಾಗಗೊಳಿಸುತ್ತದೆ.ಅಷ್ಟೇ ಅಲ್ಲದೇ ಎಲುಬು ಮತ್ತು ಕೀಲುಗಳನ್ನು ಗಟ್ಟಿಗೊಳಿಸುತ್ತದೆ.ಮೂಳೆ ಸಂಬಂಧಿತ ರೋಗಳಿಂದ ದೂರವಿರಿಸುತ್ತದೆ. ಚರ್ಮದ ಸಮಸ್ಯೆ ಇರುವವರು ಸೇವಿಸುವುದರಿಂದ ಚರ್ಮದ ಸೊಂಕಿನಿಂದ ಮುಕ್ತಗೊಳಿಸುತ್ತದೆ. ಇನ್ನೂ ಈ ಸೊಪ್ಪಿನ ಸೇವನೆಯಿಂದ ಕೂದಲು ಉದುರುವಿಕೆಯನ್ನು ಕಡಿಮೆಗೊಳಿಸುತ್ತದೆ.

Spinach Green Dal Recipe and Health benefits

Comments are closed.