ಭಾನುವಾರ, ಮೇ 11, 2025
HomeSportsCricketIndia vs Pakistan t20 : ಭಾರತ vs ಪಾಕಿಸ್ತಾನ: ಪಂದ್ಯ ರದ್ದು? ಏನು...

India vs Pakistan t20 : ಭಾರತ vs ಪಾಕಿಸ್ತಾನ: ಪಂದ್ಯ ರದ್ದು? ಏನು ಹೇಳುತ್ತೆ ಹವಾಮಾನ ವರದಿ ?

- Advertisement -

ಮೆಲ್ಬೋರ್ನ್ : India vs Pakistan t20: ಐಸಿಸಿ ಟಿ20 ವಿಶ್ವಕಪ್‌ನಲ್ಲಿಂದು (t20 world cup 2022) ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಬದ್ದ ವೈರಿಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಪಂದ್ಯದ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ವಿಶ್ವದ ಕ್ರಿಕೆಟ್ ಪ್ರೇಕ್ಷಕರೇ ಪಂದ್ಯದ ಆರಂಭಕ್ಕೆ ಕಾದು ಕುಳಿತಿದ್ದಾರೆ. ಆದ್ರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ಭಾರತ ಪಾಕಿಸ್ತಾನ ಪಂದ್ಯ ನಡೆಯಲಿರುವ ಮೆಲ್ಬೋರ್ನ್ ಮೈದಾನದ ಸುತ್ತಮುತ್ತಲೂ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಆಸ್ಟ್ರೇಲಿಯಾ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಜೊತೆಗೆ ಕಳೆದ ಹಲವು ದಿನಗಳಿಂದಲೂ ಸತತವಾಗಿ ಮಳೆ ಸುರಿಯುತ್ತಿದ್ದರೂ ಕೂ ಇಂದು ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಹೀಗಾಗಿ ಪಂದ್ಯ ಆರಂಭಬಹುದೆಂಬ ನಿರೀಕ್ಷೆಯಿದೆ.

ಕಳೆದ ನಾಲ್ಕು ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ 100 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮೂರು ದಿನಗಳ ಹಿಂದೆಯೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಪೆಸಿಫಿಕ್ ಸಾಗರದಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದು, ಆಸ್ಟ್ರೇಲಿಯಾದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಮುಖ್ಯವಾಗಿ ಬ್ರಿಸ್ಬೇನ್, ಸಿಡ್ನಿ ಮತ್ತು ಮೆಲ್ಬೋರ್ನ್‌ನಲ್ಲಿ ಹೆಚ್ಚಿನ ಮಳೆಯಾಗಲಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ನಲ್ಲಿ ಶೇ.80ರಷ್ಟು ಮಳೆಯಾಗಲಿದೆ. ಸ್ಕೈ ನ್ಯೂಸ್ ಹವಾಮಾನಶಾಸ್ತ್ರಜ್ಞ ರಾಬ್ ಶಾರ್ಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಎರಡು ದಿನಗಳ ಹಿಂದೆ, ಆಸ್ಟ್ರೇಲಿಯಾದ MET ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ ಘೋಷಿಸಿತ್ತು.

ಮೆಲ್ಬೋರ್ನ್‌ನಲ್ಲಿ ನಿರಂತರ ಮಳೆ ಸುರಿದರೆ ಐಸಿಸಿ ಟಿ20 ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಸದ್ಯಕ್ಕೆ ಒಳ್ಳೆಯ ಸುದ್ದಿಯೊಂದು ಲಭ್ಯವಾಗಿದೆ. ಮೆಲ್ಬೋರ್ನ್‌ನಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಶನಿವಾರ ಮಾತ್ರ ಅಲ್ಪ ಪ್ರಮಾಣದ ಮಳೆಯಾಗಿದೆ. ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನದ ವೇಳೆಗೆ ಮೆಲ್ಬೋರ್ನ್‌ನಲ್ಲಿ ಮಳೆಯ ಸುಳಿವೇ ಇಲ್ಲ. ಸಂಜೆ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗುವುದು ಖಚಿತವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಪಂದ್ಯವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.

ಒಂದು ವೇಳೆ ಪಂದ್ಯ ನಡೆಸಲು ಅವಕಾಶವಿದ್ದರೆ ಭಾರತೀಯ ಕಾಲಮಾನ ಸಂಜೆ 4.30ರವರೆಗೆ ಕಾಯಬೇಕು. ಮಧ್ಯೆ ಮಳೆ ನಿಂತರೆ ಓವರ್ ಕಟ್ ಮಾಡಿ ಪಂದ್ಯ ಆರಂಭಿಸಬಹುದು. ಪಂದ್ಯದ ಕಟ್-ಆಫ್ ಸಮಯವನ್ನು ನಿಗದಿಪಡಿಸಿದ ನಂತರ, ಮಳೆ ನಿಂತರೆ, ಎರಡೂ ತಂಡಗಳು ತಲಾ 5 ಓವರ್‌ಗಳ ಪಂದ್ಯವನ್ನು ಆಡಬಹುದು. ಒಂದು ವೇಳೆ ಪಂದ್ಯ ಕೈಬಿಟ್ಟರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

India vs Pakistan t20 : ಭಾರತದ ಸಂಭಾವ್ಯ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯ), 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ಹಾರ್ದಿಕ್ ಪಾಂಡ್ಯ, 6. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) 7.ಅಕ್ಷರ್ ಪಟೇಲ್, 8.ಆರ್.ಅಶ್ವಿನ್/ಯುಜ್ವೇಂದ್ರ ಚಹಲ್, 9.ಮೊಹಮ್ಮದ್ ಶಮಿ, 10.ಭುವನೇಶ್ವರ್ ಕುಮಾರ್, 11.ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : T20 World Cup 2022: ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ಸ್ ಆಸೀಸ್‌ಗೆ ಮೊದಲ ಪಂದ್ಯದಲ್ಲೇ ಶಾಕ್ ಕೊಟ್ಟ ಕಿವೀಸ್

ಇದನ್ನೂ ಓದಿ : Pro kabaddi league: ಫಸ್ಟ್ ಹಾಫ್ 11-24, ಸೆಕೆಂಡ್ ಹಾಫ್ 42-32; ಮುಂಬಾಗೆ ಗುದ್ದಿದ ಗೂಳಿ

India vs Pakistan t20 world cup 2022 match will be cancelled What weather report says

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular