ಮೆಲ್ಬೋರ್ನ್: Virat Kohli Vs Pakistan : ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಕ್ರಿಕೆಟ್ ಜಗತ್ತಿನಲ್ಲಿ ರಣ ಬೇಟೆಗಾರ ಎಂದು ಕರೆಯಲಾಗುತ್ತದೆ. ಪಾಕಿಸ್ತಾನ ವಿರುದ್ಧವಂತೂ ಕಿಂಗ್ ಕೊಹ್ಲಿ ರಣ ರಣಬೇಟೆಗಾರ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್’ನ (T20 world cup 2022) ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ, ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
160 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ಮೊದಲ 10 ಓವರ್’ಗಳಲ್ಲಿ ಕೇವಲ 45 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರದ 10 ಓವರ್’ಗಳಲ್ಲಿ 115 ರನ್ ಕಲೆ ಹಾಕಿದ ಭಾರತದ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತ್ತು. ಕೊನೆಯ 2 ಓವರ್’ನಲ್ಲಿ ಗೆಲ್ಲಲು 31 ರನ್’ಗಳ ಅವಶ್ಯಕತೆಯಿದ್ದಾಗ ಹ್ಯಾರಿಸ್ ರೌಫ್ ಎಸೆದ 19ನೇ ಓವರ್’ನ ಕೊನೆಯ ಎರಡೂ ಎಸೆತಗಳನ್ನು ಸಿಕ್ಸರ್’ಗಟ್ಟಿದ ಕೊಹ್ಲಿ, ಮೊಹಮ್ಮದ್ ನವಾಜ್ ಎಸೆದ ಅಂತಿಮ ಓವರ್’ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದ್ದರು. ಅಂತಿಮವಾಗಿ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್’ಗಳೊಂದಿಗೆ ಅಬ್ಬರಿಸಿದ್ದ ಕಿಂಗ್ ಕೊಹ್ಲಿ, ಅಜೇಯ 82 ರನ್ ಬಾರಿಸಿ ಭಾರತದ ವಿಜಯಶಿಲ್ಪಿಯಾಗಿ ಮೂಡಿ ಬಂದಿದ್ದರು.
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಅತ್ಯಮೋಘ ದಾಖಲೆ ಹೊಂದಿದ್ದಾರೆ. ಪಾಕ್ ವಿರುದ್ಧ ಚುಟುಕು ವಿಶ್ವಕಪ್’ನಲ್ಲಿ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು ವಿರಾಟ್ ಕೊಹ್ಲಿ, 308ರ ಅತ್ಯುನ್ನತ ಸರಾಸರಿಯಲ್ಲಿ 308 ರನ್ ಕಲೆ ಹಾಕಿದ್ದಾರೆ. ವಿಶೇಷ ಏನಂದ್ರೆ ಐದು ಇನ್ನಿಂಗ್ಸ್’ಗಳಲ್ಲಿ ನಾಲ್ಕು ಬಾರಿಯೂ ಕೊಹ್ಲಿ ನಾಟೌಟ್ ಆಗಿ ಉಳಿದಿದ್ದಾರೆ. ಪಾಕ್ ವಿರುದ್ಧದ 5 ಇನ್ನಿಂಗ್ಸ್’ಗಳಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಆ ಐದು ಪಂದ್ಯಗಳಲ್ಲಿ ಭಾರತ ಒಮ್ಮೆ ಮಾತ್ರ ಪಾಕಿಸ್ತಾನ ವಿರುದ್ಧ ಸೋತಿದೆ. ಆ ಸೋಲು 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾಗಿತ್ತು. ಉಳಿದ ನಾಲ್ಕೂ ಬಾರಿಯೂ ಚೇಸಿಂಗ್’ನಲ್ಲಿ ಭಾರತ ಗೆದ್ದಿದ್ದು, ಆ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ.
ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಕೊಹ್ಲಿ ಸಾಧನೆ
ಇನ್ನಿಂಗ್ಸ್: 05
ರನ್: 308
ಸರಾಸರಿ: 308
ಅರ್ಧಶತಕ: 04
ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಕೊಹ್ಲಿ ಸಾಧನೆ
78* (61 ಎಸೆತ): 2012, ಕೊಲೊಂಬೋ (ಭಾರತಕ್ಕೆ 8 ವಿಕೆಟ್ ಗೆಲುವು)
36* (32 ಎಸೆತ): 2014, ಮೀರ್ಪುರ್ (ಭಾರತಕ್ಕೆ 7 ವಿಕೆಟ್ ಗೆಲುವು)
55* (37 ಎಸೆತ): 2016, ಕೋಲ್ಕತಾ (ಭಾರತಕ್ಕೆ 6 ವಿಕೆಟ್ ಗೆಲುವು)
57 (49 ಎಸೆತ): 2021, ದುಬೈ (ಪಾಕಿಸ್ತಾನಕ್ಕೆ 10 ವಿಕೆಟ್ ಗೆಲುವು)
82* (53 ಎಸೆತ): 2022, ಮೆಲ್ಬೋರ್ನ್ (ಭಾರತಕ್ಕೆ 4 ವಿಕೆಟ್ ಗೆಲುವು)
ಟಿ20 ಕ್ರಿಕೆಟ್’ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 10
ರನ್: 488
ಸರಾಸರಿ: 81:33
ಬೆಸ್ಟ್: 82*
ಇದನ್ನೂ ಓದಿ : India vs Pakistan Live : ಪಾಕಿಸ್ತಾನ ವಿರುದ್ಧ ಭಾರತಕ್ಕೆ ವಿರಾಟ ಜಯ, ಕಿಂಗ್ ಕೊಹ್ಲಿ ಆರ್ಭಟಕ್ಕೆ ಪಾಕ್ ಧೂಳೀಪಟ
ಇದನ್ನೂ ಓದಿ : Anushka Sharma Virat Kohli : ಪಾಕ್ ವಿರುದ್ದ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಭಾವುಕ ಮೆಸೇಜ್
Virat Kohli record in the World Cup 2022 against Pakistan Virat Kohli Vs Pakistan