ಭಾನುವಾರ, ಜೂನ್ 15, 2025
HomeSportsCricketT20 World Cup 2022 : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮಳೆಯಿಂದ ರದ್ದಾದರೆ ಭಾರತ ಫೈನಲ್‌ಗೆ

T20 World Cup 2022 : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮಳೆಯಿಂದ ರದ್ದಾದರೆ ಭಾರತ ಫೈನಲ್‌ಗೆ

- Advertisement -

ಅಡಿಲೇಡ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್ (IND vs ENG semi final ) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ರೋಚಕ ಸೆಮಿಫೈನಲ್ ಸಮರ ಗುರುವಾರ ಮಧ್ಯಾಹ್ನ 1.30ಕ್ಕೆ ಅಡಿಲೇಡ್ ಓವಲ್ ಮೈದಾನದಲ್ಲಿ ಶುರುವಾಗಲಿದೆ. 2007ರ ಚಾಂಪಿಯನ್ ಭಾರತ ತಂಡ, 2010ರ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿ ಟಿ20 ವಿಶ್ವಕಪ್’ನಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ. 2007ರ ಫೈನಲ್’ನಲ್ಲಿ ಪಾಕಿಸ್ತಾನವನ್ನು 5 ರನ್’ಗಳಿಂದ ಮಣಿಸಿ ಚಾಂಪಿಯನ್ ಆಗಿದ್ದ ಭಾರತ 2014ರ ಫೈನಲ್’ನಲ್ಲಿ ಶ್ರೀಲಂಕಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. 2016ರಲ್ಲಿ ಭಾರತದಲ್ಲೇ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸೆಮಿಫೈನಲ್’ನಲ್ಲಿ ಸೋಲು ಕಂಡಿತ್ತು. 2021ರ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಸೋಲು ಕಂಡು ನಿರ್ಗಮಿಸಿತ್ತು.ಇದೀಗ ಮತ್ತೆ ಸೆಮಿಫೈನಲ್ ತಲುಪಿರುವ ರೋಹಿತ್ ಶರ್ಮಾ ಬಳಗ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ತಲುಪುವ ನೆಚ್ಚಿನ ತಂಡವಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನ ಸಾಕಷ್ಟು ಪಂದ್ಯಗಳು ಈಗಾಗಲೇ ಮಳೆಯಿಂದ ರದ್ದಾಗಿವೆ. ಕೆಲ ಪಂದ್ಯಗಳಿಗೆ ಮಳೆ ಅಡ್ಡಿಯಾಗಿದ್ದು, ಫಲಿತಾಂಶಕ್ಕಾಗಿ ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಗಿತ್ತು. ಒಂದು ವೇಳೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವೂ ಮಳೆಗೆ ಬಲಿಯಾದ್ರೆ, ಫೈನಲ್ ಪ್ರವೇಶಿಸುವವರು ಯಾರು? ಈ ಪ್ರಶ್ನೆಗೆ ಉತ್ತರ ಭಾರತ.ಸೂಪರ್-12 ಹಂತದಲ್ಲಿ ಭಾರತ ಆಡಿದ 5 ಲೀಗ್ ಪಂದ್ಯಗಳಿಂದ 8 ಅಂಕ ಗಳಿಸಿ ಗ್ರೂಪ್-2ರಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಇಂಗ್ಲೆಂಡ್ ಗ್ರೂಪ್-1ರಲ್ಲಿ 4 ಪಂದ್ಯಗಳಿಂದ 7 ಅಂಕ ಗಳಿಸಿ ಸೆಮಿಫೈನಲ್’ನಲ್ಲಿ ಕಾಣಿಸಿಕೊಂಡಿದೆ.

ಒಂದು ವೇಳೆ ನಡೆಯುವ ಭಾರತ Vs ಇಂಗ್ಲೆಂಡ್ ಸೆಮಿಫೈನಲ್’ಗೆ ಮಳೆ ಅಡ್ಡಿ ಪಡಿಸಿ ಗುರುವಾರ ಪಂದ್ಯ ನಡೆಯದಿದ್ದರೆ, ಮೀಸಲು ದಿನವಾದ ಶುಕ್ರವಾರ ಪಂದ್ಯ ನಡೆಯಲಿದೆ. ಒಂದು ವೇಳೆ ಶುಕ್ರವಾರವೂ ಮಳೆ ಬಂದು ಪಂದ್ಯ ರದ್ದಾದರೆ ಲೀಗ್ ಹಂತದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಭಾರತ ಫೈನಲ್ ಪ್ರವೇಶಿಸಲಿದೆ (If the Semi-final is abandoned due to rain, Then India will qualify into the final)

IND vs ENG semi final : ಟಿ20 ವಿಶ್ವಕಪ್-2022 :ಭಾರತದ ಸೆಮಿಫೈನಲ್ ಹಾದಿ

Vs ಪಾಕಿಸ್ತಾನ, 4 ವಿಕೆಟ್ ಗೆಲುವು
Vs ನೆದರ್ಲೆಂಡ್ಸ್, 56 ವಿಕೆಟ್ ಗೆಲುವು
Vs ದಕ್ಷಿಣ ಆಫ್ರಿಕಾ, 5 ವಿಕೆಟ್ ಸೋಲು
Vs ಬಾಂಗ್ಲಾದೇಶ, 5 ರನ್ ಗೆಲುವು
Vs ಜಿಂಬಾಬ್ವೆ, 71 ರನ್ ಗೆಲುವು

ಟಿ20 ವಿಶ್ವಕಪ್-2022: ಇಂಗ್ಲೆಂಡ್’ನ ಸೆಮಿಫೈನಲ್ ಹಾದಿ

Vs ಅಫ್ಘಾನಿಸ್ತಾನ, 5 ವಿಕೆಟ್ ಗೆಲುವು
Vs ಐರ್ಲೆಂಡ್, 5 ರನ್ ಗೆಲುವು
Vs ಆಸ್ಟ್ರೇಲಿಯಾ, ಮಳೆಯಿಂದ ಪಂದ್ಯ ರದ್ದು
Vs ನ್ಯೂಜಿಲೆಂಡ್, 20 ರನ್ ಗೆಲುವು
Vs ಶ್ರೀಲಂಕಾ , 4 ವಿಕೆಟ್ ಗೆಲುವು

ಇದನ್ನೂ ಓದಿ : Richard Kettleborough : ಅಬ್ಬಾ.. ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಿಲ್ಲ ಅಪಶಕುನದ ಅಂಪೈರ್

ಇದನ್ನೂ ಓದಿ : Sachin Tendulkar in Goa: ಗೋವಾ ಕಡಲ ಕಿನಾರೆಯಲ್ಲಿ ಬೆಳ್ಳಂ ಬೆಳಗ್ಗೆ ಮೀನು ಹಿಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್

IND vs ENG if the semi-final against England is canceled due to rain India will enter the T20 World Cup 2022 final

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular