Sunny Leone photo on hall ticket : ಟಿಇಟಿ ಪರೀಕ್ಷೆ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಫೋಟೊ ; ದೂರು ದಾಖಲು

ಶಿವಮೊಗ್ಗ : (Sunny Leone photo on hall ticket)ಟಿಇಟಿ ಪರೀಕ್ಷೆಯ ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಅಶ್ಲೀಲ ಫೋಟೊ ಅಪ್ಲೋಡ್‌ ಆಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಕುರಿತು ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಊಡ ತನಿಖೆ ನಡೆಸುತ್ತಿದ್ದಾರೆ.

ಕಳೆದ ಅಕ್ಟೋಬರ್‌ 6 ರ ಭಾನುವಾರದಂದು ಶಿವಮೊಗ್ಗದಲ್ಲಿ ನಡೆದ ಟಿಇಟಿ ಪರೀಕ್ಷೆಗೆ ಹಾಜರಾಗಬೇಕಿದ್ದ ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಫೋಟೊ(Sunny Leone photo on hall ticket) ಅಪ್ಲೋಡ್‌ ಆಗಿದ್ದು, ಇದು ಎಲ್ಲಡೆ ವೈರಲ್‌ ಆಗಿದೆ. ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿ ಪೇಚೆಗೆ ಸಿಲುಕುವಂತಾಗಿತ್ತು . ಅಂದೇ ಹಾಲ್‌ ಟಿಕೆಟ್‌ ನಲ್ಲಿ ಫೋಟೊ ಬದಲಾಯಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದ್ದು , ಇಂದು ಹಾಲ್‌ ಟಿಕೆಟ್‌ನಲ್ಲಿ ನಡೆದ ಅಚಾತುರ್ಯದ ಬಗ್ಗೆ ಸೂಕ್ತ ತನಿಖೆ ನಡೆಸಲು ಪ್ರಕರಣ ದಾಖಲಿಸಲಾಗಿದೆ .

ಇತ್ತೀಚೆಗೆ ನಡೆದ ಟಿಇಟಿ ಪರೀಕ್ಷೆಯ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಫೋಟೊ ಬಂದಿತ್ತು . ಅಷ್ಟೇ ಅಲ್ಲದೇ ಇದು ವೈರಲ್‌ ಕೂಡ ಆಗಿತ್ತು . ಈ ಹಿನ್ನಲೆಯಲ್ಲಿ ಶಿವಮೊಗ್ಗದ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ . ಇದೀಗ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಫೋಟೊ ಹೇಗೆ ಬಂತು? ಎನ್ನುವುದರ ಬಗ್ಗೆ ಶಿವಮೊಗ್ಗದ ಪೋಲೀಸರು ತನಿಖೆಯನ್ನು ಶುರು ಮಾಡಿದ್ದಾರೆ .

ಇದನ್ನೂ ಓದಿ : KGF-2 song copyright: ಹೈಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಗೆ ಬಿಗ್ ರಿಲೀಫ್; ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವು

ಇದನ್ನೂ ಓದಿ : Murder case : ಬಿಸಿ ನೀರು, ಮೆಣಸಿನ ಪುಡಿ ಎರಚಿ ಮಾವನನ್ನು ಕೊಂದ ಸೊಸೆ

ಇದನ್ನೂ ಓದಿ : Department of Education : ಮೌಲ್ಯಮಾಪನಕ್ಕೆ ತೆರಳೋ ಉಪನ್ಯಾಸಕರೇ ಎಚ್ಚರ: ಕೊಂಚ ಯಾಮಾರಿದ್ರೂ ಹೋಗುತ್ತೆ ಕೆಲಸ

ಹಾಲ್‌ ಟಿಕೆಟ್‌ ವೈರಲ್‌ ಆದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಶಿವಮೊಗ್ಗ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೂರು ಸಲ್ಲಿಸಿದೆ . ಪರೀಕ್ಷೆ ನಡೆಯುವ ಕೇಂದ್ರದ ಕಾಲೇಜು ಪ್ರಾಂಶುಪಾಲರಾದ ಹೆಚ್‌ .ಎಸ್‌. ರುದ್ರಪ್ಪ ಅವರ ಮೂಲಕವೇ ದೂರು ದಾಖಲಿಸಲಾಗಿದೆ .

ಈ ಪ್ರಕರಣವನ್ನು ಎಸ್.ಪಿ ಕಚೇರಿಯಿಂದ ಸಿ.ಇ.ಎನ್‌. ಪೋಲೀಸ್‌ ಠಾಣೆಗೆ ವರ್ಗಾಯಿಸಿದ್ದು , ಇದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಲು ಆದೇಶಿಸಲಾಗಿದೆ . ಈಗಾಗಲೇ ದೂರನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದ್ದು , ಅಭ್ಯರ್ಥಿಯ ಬಳಿ ಕೂಡ ಮಾಹಿತಿಯನ್ನು ಪಡೆಯಲಾಗಿದೆ . ಅರ್ಜಿ ಸಲ್ಲಿಸಲು ಬೇರೆಯವರಿಗೆ ಹೇಳಿದ್ದಾಗಿ ಅಭ್ಯರ್ಥಿ ತಿಳಿಸಿದ್ದು , ಸಂಬಂಧಪಟ್ಟ ಮೂವರನ್ನು ಪೋಲೀಸರು ವಿಚಾರಣೆಗೆ ಕರೆಸಿದ್ದಾರೆ

An incident of Sunny Leone’s obscene photo being uploaded on the hall ticket of a female candidate for the TET examination took place in Shimoga. The police have registered a case and are investigating the matter.

Comments are closed.