ಬುಧವಾರ, ಏಪ್ರಿಲ್ 30, 2025
HomeCrimePune Bengaluru ಹೆದ್ದಾರಿಯಲ್ಲಿ ಭೀಕರ ಅಪಘಾತ : 48 ವಾಹನಗಳು ಜಖಂ

Pune Bengaluru ಹೆದ್ದಾರಿಯಲ್ಲಿ ಭೀಕರ ಅಪಘಾತ : 48 ವಾಹನಗಳು ಜಖಂ

- Advertisement -

ಮುಂಬೈ: ಪುಣೆ ಹಾಗೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Pune Bengaluru highway accident) ನಡೆದ ಭೀಕರ ರಸ್ತೆ ಅಪಘಾತದಲ್ಲಿ 48 ವಾಹನಗಳು ಜಖಂ ಆಗಿವೆ. ರಾಷ್ಟ್ರೀಯ ಹೆದ್ದಾರಿಯ ನವಲೆ ಸೇತುವೆಯಲ್ಲಿ ಟ್ಯಾಂಕರ್ ಬ್ರೇಕ್ ಫೇಲ್ ಆಗಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (PMRDA) ರಕ್ಷಣಾ ತಂಡಗಳು ನವಲೆ ಸೇತುವೆಗೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿವೆ. ಸ್ಥಳದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಅಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಎಷ್ಟು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯದ ಸ್ವರೂಪ ಯಾವ ಮಾದರಿಯಲ್ಲಿದೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ.

ಪಿಎಂಆರ್‌ಡಿಎ (PMRDA) ಅಗ್ನಿಶಾಮಕ ದಳದ ಅಧಿಕಾರಿ ಸುಜಿತ್ ಪಾಟೀಲ್ ಮಾತನಾಡಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಟ್ಯಾಂಕರ್ ಬ್ರೇಕ್ ವೈಫಲ್ಯದ ನಂತರ ಕನಿಷ್ಠ 48 ವಾಹನಗಳು ಅಪಘಾತಕ್ಕೀಡಾಗಿವೆ. ಸದ್ಯಕ್ಕೆ ಗಾಯಗೊಂಡವರ ಸಂಖ್ಯೆ ಮತ್ತು ಅವರ ಗಾಯಗಳ ಸ್ವರೂಪದ ನಮಗೆ ತಿಳಿದಿಲ್ಲ. ಅಗ್ನಿಶಾಮಕ ದಳದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಶೃದ್ಧಾ ಕೇಸ್ ನಂತೆ ಮತ್ತೊಂದು ಹೇಯ ಕೃತ್ಯ: ಗೆಳತಿಯನ್ನು ಕೊಂದು 4 ದಿನ ಮೆಡಿಕಲ್ ಶಾಪ್ ನಲ್ಲಿಟ್ಟ ಕ್ರೂರಿ

ಛತ್ತೀಸ್ ಗಢ: ದೆಹಲಿಯಲ್ಲಿ ಅಪ್ತಾಬ್ ಎಂಬಾತ ತನ್ನ ಗೆಳತಿ ಶೃದ್ಧಾ ವಾಲ್ಕರ್ ಎಂಬ ಯುವತಿಯನ್ನು ಭೀಕರವಾಗಿ ಕೊಂದು ವಿಕೃತಿ ಮೆರೆದಿದ್ದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಬೆನ್ನಲ್ಲೇ ಛತ್ತೀಸಗಢದ ಬಿಲಾಸ್ ಪುರದಲ್ಲೂ ಇಂಥದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಹಣದ ವ್ಯಾಮೋಹದಿಂದ ಪ್ರೀತಿಸಿದವಳನ್ನೇ ಕೊಂದ ಪ್ರೇಮಿಯೊಬ್ಬ ಆಕೆಯ ಮೃತದೇಹವನ್ನು 4 ದಿನಗಳ ಕಾಲ ಮೆಡಿಕಲ್ ಶಾಪ್ ನಲ್ಲಿ ಬಚ್ಚಿಟ್ಟು ದುಷ್ಕøತ್ಯ ಮೆರೆದಿದ್ದಾನೆ.

ಇದನ್ನೂ ಓದಿ : Mangaluru blast Shariq arrested: ಅವನೇ ಇವನು: ಶಾರೀಖ್ ಬಗ್ಗೆ ಮಂಗಳೂರು ಪೊಲೀಸರ ಸ್ಪಷ್ಟನೆ

ಪ್ರಿಯಕರನೇ ತನ್ನ ಪ್ರಿಯತಮೆಯನ್ನು ತನ್ನ ಕೈಯ್ಯಾರೆ ಕೊಂದಿದ್ದಲ್ಲದೇ, ತನ್ನದೇ ಮೆಡಿಕಲ್ ಶಾಪ್ ನಲ್ಲಿ ಆಕೆಯ ಶವವನ್ನು 4 ದಿನಗಳ ಕಾಲ ಬಚ್ಚಿಟ್ಟಿದ್ದಾನೆ. ಛತ್ತೀಸಗಢದ ಬಿಲಾಸ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೆಡಿಕಲ್ ಸ್ಟೋರ್ ಮಾಲೀಕ ತನ್ನ ಪ್ರಿಯತಮೆ ಪ್ರಿಯಾಂಕಳನ್ನು ಕೊಲೆಗೈದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ದೆಹಲಿಯ ಶೃದ್ಧಾ ಕೊಲೆ ಕೇಸ್ ಮಾಸುವ ಮುನ್ನವೇ ಮತ್ತೊಂದು ಘಟನೆ ದೇಶವನ್ನೇ ನಡುಗಿಸಿದೆ.

ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಆಶಿಶ್ ಸಾಹು ಮತ್ತು ಪ್ರಿಯಾಂಕ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರಿಯಾಂಕ ಬಿಲಾಸ್ ಪುರದ ಹಾಸ್ಟೆಲ್ ನಲ್ಲಿ ಛತ್ತೀಸ್ ಗಢ್ ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಹೀಗಿರುವಾಗ ಆಶಿಶ್ ಹಾಗೂ ಪ್ರಿಯಾಂಕ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಪ್ರೇಮಿಗಳಾದರು. ಇಬ್ಬರೂ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ಈ ವ್ಯವಹಾರ ನಿಮಿತ್ತ ಆಶಿಶ್ ಸಾಹು ಪ್ರಿಯಾಂಕಾಳಿಂದ ಆಗಾಗ ಹಣದ ಸಹಾಯ ಪಡೆಯುತ್ತಿದ್ದನು. ಆದಾಗ್ಯೂ ಆಶಿಶ್ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಅಪಾರ ಪ್ರಮಾಣ ನಷ್ಟ ಅನುಭವಿಸಿದ್ದನು. ಹೀಗಾಗಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅಲ್ಲದೇ ಪ್ರಿಯಾಂಕ ತನ್ನಿಂದ ಪಡೆದ 11 ಲಕ್ಷ ರೂ. ಸಾಲ ಹಿಂದಿರುಗಿಸುವಂತೆ ಆಶಿಶ್ ನನ್ನು ಒತ್ತಾಯಿಸಿದ್ದಾಳೆ. ಇದೇ ವಿಚಾರಕ್ಕೆ ದೊಡ್ಡ ಗಲಾಟೆ ನಡೆದು ಅದು ವಿಪರೀತ ಮಟ್ಟಕ್ಕೆ ತಿರುಗಿ ಆತ ಕೋಪದ ಭರದಲ್ಲಿ ಪ್ರಿಯಾಂಕಳನ್ನು ಕೊಂದಿದ್ದಾನೆ ಎಂದು ಬಿಲಾಸ್ ಪುರದ ಹಿರಿಯ ಪೊಲೀಸ್ ಆಧೀಕ್ಷಕ ಪಾರುಲ್ ಮಾಥುರ್ ತಿಳಿಸಿದ್ದಾರೆ.

ಇದನ್ನೂ ಓದಿ : Forest Rape Case: ಅತ್ಯಾಚಾರ ಪ್ರಕರಣ: ಸ್ನೇಹಿತನ ನೆರವಿನಿಂದ ಬದುಕುಳಿದ ಯುವತಿ

accident on Pune Bengaluru highway 48 vehicles injured

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular