ನೇಪಿಯರ್: (Sanju Samson missed opportunity) ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವಿನ 3ನೇ ಟಿ20 (India Vs New Zeeland T20) ಪಂದ್ಯ ನೇಪಿಯರ್’ನ ಮೆಕ್’ಲೀನ್ ಪಾರ್ಕ್ ಮೈದಾನದಲ್ಲಿ ಆರಂಭಗೊಂಡಿತ್ತು, ಟಾಸ್ ಗೆದ್ದ ಕಿವೀಸ್ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
3ನೇ ಟಿ20 ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಆಫ್’ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬದಲು ಬಲಗೈ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿದೆ. ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್(Sanju Samson missed opportunity) ಅವರನ್ನು ಮತ್ತೆ ಕಡೆಗಣಿಸಲಾಗಿದೆ.
ಸಂಜು ಸ್ಯಾಮ್ಸನ್(Sanju Samson missed opportunity) ಅವರಿಗೆ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡದಿರುವುದಕ್ಕೆ ಕ್ರಿಕೆಟ್ ಪ್ರಿಯರು ಭಾರೀ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ.
“ಸಂಜು ಸ್ಯಾಮ್ಸನ್ ಅವರನ್ನು ಭಾರತ ತಂಡದಲ್ಲಿ ಆಡಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, ಆತನಿಗೆ ಬಿಬಿಎಲ್ ರೀತಿಯ ವಿದೇಶೀ ಟಿ20 ಲೀಗ್’ಗಳಲ್ಲಿ ಆಡಲು ಅವಕಾಶ ನೀಡಿ. ಆತನ ಜೀವನವನ್ನು ಹಾಳು ಮಾಡಬೇಡಿ. ಆತ ಹೆಚ್ಚಿನ ಕ್ರಿಕೆಟ್ ಆಡುವುದನ್ನು ನೋಡಲು ಬಯಸುತ್ತೇವೆಯೇ ಹೊರತು ನಿಮ್ಮ ನೆಚ್ಚಿನ ರಿಷಭ್ ಪಂತ್, ಇಶಾನ್ ಕಿಶನ್, ದೀಪಕ್ ಹೂಡಾ ಆಟವನ್ನಲ್ಲ” ಎಂದು ಸಂಜು ಸ್ಯಾಮ್ಸನ್ ಫ್ಯಾನ್ ಒಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : England Cricket Team : ಪಾಕಿಸ್ತಾನಕ್ಕೆ ಅಡುಗೆ ಭಟ್ಟನನ್ನು ಕರೆದೊಯ್ಯಲಿದೆ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ಟೆಸ್ಟ್ ತಂಡ
ಜೀವನದಲ್ಲಿ ಸಂಜು ಸ್ಯಾಮ್ಸನ್ ಆಗುವುದು ತುಂಬಾ ಕಷ್ಟ ಎಂದು ಸ್ಯಾಮ್ಸನ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ.
2015ರಲ್ಲಿ ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಅವರಿಗೆ ಕಳೆದ 8 ವರ್ಷಗಳಲ್ಲಿ ಕೇವಲ 16 ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಸಿಕ್ಕಿದೆ. ಇದೇ ವೇಳೆ ರಿಷಭ್ ಪಂತ್ ತಂಡದ ಗೆಲುವಿಗೆ ಯಾವುದೇ ಕೊಡುಗೆ ನೀಡದೆ 65 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ ಎಂದು ರಶ್ಮಿ ಎಂಬವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Bengal Warriors vs Tamil Thalaivas : ಯು.ಪಿ ಯೋಧಾ ಅರ್ಧಶತಕ, ಬೆಂಗಾಲ್ ವಾರಿಯರ್ಸ್ಗೆ ಶಾಕ್ ಕೊಟ್ಟ ತಮಿಳ್ ತಲೈವಾಸ್
ಐಸಿಸಿ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಸೋಲು ಕಂಡ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಪರ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಧ್ವನಿ ಎತ್ತಿದ್ದರು.
“ಹಿರಿಯ ಆಟಗಾರರನ್ನು ಬೆಂಚ್ ಕಾಯಿಸಲು ಬಿಟ್ಟು ಸಂಜು ಸ್ಯಾಮ್ಸನ್’ಗೆ ಸತತ 10 ಟಿ20 ಪಂದ್ಯಗಳಲ್ಲಿ ಅವಕಾಶ ನೀಡಿ. ಎರಡು ಪಂದ್ಯಗಳಲ್ಲಿ ಆಡಿಸಿ ಆತನನ್ನು ಡ್ರಾಪ್ ಮಾಡಬೇಡಿ. 10 ಪಂದ್ಯಗಳ ನಂತರ ಆತನ ಸಾಮರ್ಥ್ಯದ ಬಗ್ಗೆ ನಿರ್ಧರಿಸಿ. ಆ ಹುಡುಗನಿಗೂ ಅರ್ಹ ಅವಕಾಶ ನೀಡಿ” ಎಂದು ರವಿಶಾಸ್ತ್ರಿ ಹೇಳಿದ್ದರು.
ಇದನ್ನೂ ಓದಿ : Vijay Hazare Trophy : ಕೌಶಿಕ್ ಭರ್ಜರಿ ಬೌಲಿಂಗ್, ಕರ್ನಾಟಕಕ್ಕೆ 5ನೇ ಜಯ; ನಾಕೌಟ್ ಹಂತದಲ್ಲಿ ಸ್ಥಾನ ಫಿಕ್ಸ್
(Sanju Samson) The 3rd T20 (India Vs New Zealand T20) between the visiting India and the host New Zealand started at the McLean Park ground in Napier, the Kiwis won the toss and elected to bat.