Drishyam 2 Box Office : ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಬರೆಯುತ್ತಿದೆ ದೃಶ್ಯಂ 2

ದೃಶ್ಯಂ 2 ಬಾಕ್ಸ್ ಆಫೀಸ್‌ನಲ್ಲಿ (Drishyam 2 Box Office) ಮೊದಲ ಸೋಮವಾರ ಅಸಾಧಾರಣ ದಾಖಲೆಯನ್ನು ಮಾಡಿದೆ. ನಟ ಅಜಯ್ ದೇವಗನ್ ಅಭಿನಯದ ಸಿನಿಮಾವು ತನ್ನ ನಾಲ್ಕನೇ ದಿನದಲ್ಲಿ 11.50 ಕೋಟಿ ರೂಪಾಯಿಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ್ನು ಪಡೆದುಕೊಂಡಿದೆ. ಒಟ್ಟಾರೆ ನಾಲ್ಕು ದಿನಗಳ ಅಂಕಿಅಂಶಗಳನ್ನು ಸುಮಾರು 76 ಕೋಟಿ ರೂಪಾಯಿಗಳಿಗೆ ಅಂದಾಜಿಸಲಾಗಿದೆ. ಅಂತಿಮ ಕಲೆಕ್ಷನ್‌ ಬಗ್ಗೆ ಸಿನಿಮಾತಂಡವು ಬಹಿರಂಗಪಡಿಸದಿದ್ದರೂ, ಅಭಿಷೇಕ್ ಪಾಠಕ್ ನಿರ್ದೇಶನ ಸೋಮವಾರದ ನಂತರ “ದೃಶ್ಯಂ 2” ಸಿನಿಮಾ ಸೂಪರ್‌ ಹಿಟ್ ಆಗಿ ಹೊರಹೊಮ್ಮಿದೆ.

ನವೆಂಬರ್‌ 18ರಂದು “ದೃಶ್ಯಂ 2” ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆ ಆಯಿತು. ಅಜಯ್‌ ದೇವಗನ್‌ ಜೊತೆ ಶ್ರೀಯಾ ಶರಣ್‌, ಟಬು, ಅಕ್ಷಯ್‌ ಖನ್ನಾ, ಇಶಿತಾ ದತ್ತ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 15.38 ಕೋಟಿ ರೂಪಾಯಿ ಆಗಿದ್ದು, ಎರಡನೇ ದಿನ ವೀಕೆಂಡ್‌ ಆದ್ದರಿಂದ ಕಲೆಕ್ಷನ್‌ ಹೆಚ್ಚಿತು. ಶನಿವಾರ ನವೆಂಬರ್‌ 19ರಂದು ಬರೋಬ್ಬರಿ 21.59 ಕೋಟಿ ರೂ. ಆದಾಯ ಕಂಡು ಬಂದಿದೆ. ಭಾನುವಾರವಂತೂ (ನವೆಂಬರ್‌ 20)ರಂದು ಸಿನಿಮಾದ ಗಳಿಕೆ ಗಣನೀಯವಾಗಿ ಏರಿಕೆ ಕಂಡಿದ್ದು, 27.17 ಕೋಟಿ ರೂ. ಆಗಿರುತ್ತದೆ. ಇನ್ನೂ ಸೋಮವಾರ ಕೂಡ ಸಿನಿಮಂದಿರ ಹೌಸ್‌ಪುಲ್‌ ಪ್ರದರ್ಶನ ಕಂಡಿದ್ದು, ಅಂದಾಜು ರೂ 11.50 ಕೋಟಿ ಗಳಿಸುವ ಮೂಲಕ ಈವರೆಗಿನ ಒಟ್ಟು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಅಂದಾಜು ರೂ 75.64 ಕೋಟಿಗೆ ತಲುಪಿದೆ.

ಇದನ್ನೂ ಓದಿ : Vinay Rajkumar : ವಿನಯ್ ರಾಜ್ ಕುಮಾರ್ ಅಭಿನಯದ ‘ಪೆಪೆ’ ಸಿನಿಮಾ ಶೂಟಿಂಗ್ ಕಂಪ್ಲೀಟ್

ಇದನ್ನೂ ಓದಿ : Aindrila Sharma no more: 20 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಟಿ ಐಂದ್ರಿಲಾ ಶರ್ಮಾ ಕೊನೆಯುಸಿರು

ಇದನ್ನೂ ಓದಿ : Amulya Jagdish couple : ತಿರುಪತಿ ತಿಮ್ಮಪ್ಪನಿಗೆ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್‌ ದಂಪತಿ

ಆರಂಭಿಕ ದಿನಕ್ಕೆ ಹೋಲಿಸಿದರೆ ಮೊದಲ ವಾರದ ದಿನದಲ್ಲಿ ಸುಮಾರು 20-25 ಶೇಕಡಾ ಕುಸಿತ ಕಂಡಿದೆ. ಆದರೂ ದೃಶ್ಯಂ 2 ಸೋಮವಾರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಕುತೂಹಲಕಾರಿ ಆಗಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಶತಕ ಬಾರಿಸಿದೆ. ಗೋಲ್ಮಾಲ್ ಎಗೇನ್ (2017), ಸಿಂಘಮ್ ರಿಟರ್ನ್ಸ್ (2014), ಮತ್ತು ಟೋಟಲ್ ಧಮಾಲ್ (2019) ನಂತರ ಇದು ಅಜಯ್‌ಗೆ ವಿಶ್ವಾದ್ಯಂತ ನಾಲ್ಕನೇ ರೂ 100 ಕೋಟಿ ಗಳಿಕೆಯಾಗಿದೆ. ಈ ಸಿನಿಮಾವು ಗಂಗೂಬಾಯಿ ಕಥಿವಾಡಿ, ದಿ ಕಾಶ್ಮೀರ್ ಫೈಲ್ಸ್, ಭೂಲ್ ಭುಲೈಯಾ 2, ಮತ್ತು ಬ್ರಹ್ಮಾಸ್ತ್ರ ನಂತರ ಈ ವರ್ಷದ ಐದನೇ ಯಶಸ್ವಿ ಹಿಟ್ ಹಿಂದಿ ಸಿನಿಮಾವಾಗಿದೆ. ಸೌತ್‌ ಸಿನಿಮಾಗಳ ಅಬ್ಬರದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಸಿನಿಮಾಗಳು ಸೊರಗಿದ್ದವು. ಆದರೆ ಈಗ “ದೃಶ್ಯಂ 2” ಸಿನಿಮಾ ಸೂಪರ್‌ಹಿಟ್‌ ಆಗಿರುವುದರಿಂದ ಬಿ-ಟೌನ್‌ನಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.

Drishyam 2 Box Office : Drishyam 2 is setting a record in box office collection

Comments are closed.