ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಬೆಳೆಗಾರರು

ಕಾರ್ಕಳ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (Arecanut Price) ಕೊಂಚ ಏರಿಳಿತ ಕಂಡಿದೆ. ಅಡಿಕೆ ಬೆಲೆಯಲ್ಲಿ ಏರಿಳಿತದಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಾರದ ಆರಂಭದಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆ ಆಗಿದ್ದು, ಇಂದು (ಜನವರಿ 26) ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಆಗಿದೆ. ಕಳೆದ ಮೂರು ನಾಲ್ಕು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದ್ದರಿಂದ ಬೆಳೆಗಾರರಿಗೆ ಸಂತಸವನ್ನು ತಂದಿದೆ.

ಇದೀಗ ನಮ್ಮ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut)ಬೆಲೆಯಲ್ಲಿ ಏರಿಳಿತಗೊಂಡಿದ್ದು ರೈತರು ಆತಂಕಕ್ಕೆ ಒಳಗಾಗುವಂತೆ ಆಗಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಆದರೆ ರಾಜ್ಯದ ಕೆಲವೊಂದು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಉತ್ತಮವಾಗಿದ್ದು, ಕೆಲವೆಡೆ ಇಳಿಕೆ ಆಗಿರುವುದ್ದರಿಂದ ರೈತರು ಬೇಸರಕ್ಕೆ ಒಳಗಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆಯ ವಹಿವಾಟಿನಲ್ಲಿ ಚೇತರಿಕೆ ಕಾಣುಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಕಾದಿದ್ದಾರೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :

ಮಾರುಕಟ್ಟೆ ವಿಧ ಗರಿಷ್ಠ ಬೆಲೆ

  • ಬಂಟ್ವಾಳ ಕೋಕಾ ರೂ. 25,000
  • ಬಂಟ್ವಾಳ ಹೊಸ ವೆರೈಟಿ ರೂ. 40,000
  • ಬಂಟ್ವಾಳ ಹಳೆಯ ವೆರೈಟಿ ರೂ. 54,500
  • ಹೊನ್ನಳ್ಳಿ ರಾಶಿ ರೂ. 47,299
  • ಕಾರ್ಕಳ ಹೊಸ ವೆರೈಟಿ ರೂ. 40,000
  • ಕಾರ್ಕಳ ಹಳೆಯ ವೆರೈಟಿ ರೂ. 54,500
  • ಕೊಪ್ಪ ಬೆಟ್ಟೆ ರೂ. 53,099
  • ಕೊಪ್ಪ ಗೊರಬಲು ರೂ. 35,279
  • ಕೊಪ್ಪ ರಾಶಿ ರೂ. 45,909
  • ಕೊಪ್ಪ ಸರಕು ರೂ. 77,509
  • ಕೊಪ್ಪ ರಾಶಿ ರೂ. 45,909
  • ಕುಮಟಾ ಚಿಪ್ಪು ರೂ. 32,599
  • ಕುಮಟಾ ಕೋಕಾ ರೂ. 30,569
  • ಕುಮಟಾ ಫ್ಯಾಕ್ಟರಿ ರೂ. 19,929
  • ಕುಮಟಾ ಹಳೆ ಚಾಲಿ ರೂ. 37,079
  • ಕುಮಟಾ ಹೊಸ ಚಾಲಿ ರೂ. 40,299
  • ಕುಂದಾಪುರ ಹಳೆ ಚಾಲಿ ರೂ. 49,500
  • ಕುಂದಾಪುರ ಹೊಸ ಚಾಲಿ ರೂ. 37,500
  • ಪುತ್ತೂರು ಕೋಕಾ ರೂ. 26,000
  • ಪುತ್ತೂರು ಹೊಸ ವೆರೈಟಿ ರೂ. 40,000
  • ಶಿವಮೊಗ್ಗ ಬೆಟ್ಟೆ ರೂ. 52,200
  • ಶಿವಮೊಗ್ಗ ಗೊರಬಲು ರೂ. 36,399
  • ಶಿವಮೊಗ್ಗ ರಾಶಿ ರೂ. 47,309
  • ಶಿವಮೊಗ್ಗ ಸರಕು ರೂ. 78,200
  • ಸಿದ್ದಾಪುರ ಬಿಳೆ ಗೊಟು ರೂ. 33,899
  • ಸಿದ್ದಾಪುರ ಚಾಲಿ ರೂ. 41,109
  • ಸಿದ್ದಾಪುರ ಕೋಕಾ ರೂ. 33,289
  • ಸಿದ್ದಾಪುರ ಹೊಸ ಚಾಲಿ ರೂ. 36,369
  • ಸಿದ್ದಾಪುರ ಕೆಂಪು ಗೋಟು ರೂ. 37,289
  • ಸಿದ್ದಾಪುರ ರಾಶಿ ರೂ. 46,989
  • ಸಿದ್ದಾಪುರ ತಟ್ಟಿ ಬೆಟ್ಟೆ ರೂ. 42,269
  • ಶಿರಸಿ ಬೆಟ್ಟೆ ರೂ. 42,890
  • ಶಿರಸಿ ಬಿಳೆ ಗೊಟು ರೂ. 33,899
  • ಶಿರಸಿ ಚಾಲಿ ರೂ. 42,552
  • ಶಿರಸಿ ಕೆಂಪು ಗೋಟು ರೂ. 35,626
  • ಶಿರಸಿ ರಾಶಿ ರೂ. 46,299

ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತೆ ಇಳಿಕೆ : ಆತಂಕದಲ್ಲಿ ಬೆಳೆಗಾರರು

ಇದನ್ನೂ ಓದಿ : ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ಧಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Arecanut Today Price Increase :ಅಡಿಕೆ ಬೆಳೆಗಾರರಿಗೆ ಗುಡ್‌ ನ್ಯೂಸ್‌ : ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ

Arecanut Price: Fluctuation in Arecanut Price: Growers are worried

Comments are closed.