Happy Republic Day 2023 : ಗಣರಾಜ್ಯೋತ್ಸವ 2023 : ಸಾಂಸ್ಕ್ರತಿಕ ಪರಂಪರೆ ಸಾರುವ ರಾಷ್ಟ್ರೀಯ ಉತ್ಸವ

ಭಾರತ (India) ಪ್ರಜಾಪ್ರಭುತ್ವ ದೇಶ. ನಮ್ಮ ದೇಶ ಸ್ವಾತಂತ್ರ್ಯ ಪಡೆಯಲು ಬಹಳ ಕಷ್ಟದ ಹಾದಿಯನ್ನು ಸವೆಸಿದೆ. ಅನೇಕ ಸ್ವಾತಂತ್ರ್ಯ ವೀರರು ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಅಹಿಂಸೆಯ ಮಂತ್ರ ಜಪಿಸಿದ್ದಾರೆ. ಆ ನಂತರವೇ ಭಾರತ ಬ್ರಿಟೀಷ್‌ ಆಳ್ವಿಕೆಯಿಂದ ಸ್ವತಂತ್ರವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಆಗಸ್ಟ್‌ 15, 1947ರಲ್ಲಿ. ದೇಶ ಸ್ವಾತಂತ್ರ್ಯವನ್ನೇನೋ ಪಡೆಯಿತು. ಆದರೆ, ಬ್ರಿಟೀಷ್‌ ವಸಾಹತು ಪ್ರದೇಶದಿಂದ ಭಾರತವನ್ನು ಗಣರಾಜ್ಯವನ್ನಾಗಿ ಜನವರಿ 26, 1950 ರಂದು ಮಾಡಲಾಯಿತು. ಭಾರತ ಗಣರಾಜ್ಯವಾಗಿ ಮತ್ತು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನೆನಪಿಗಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ (Happy Republic Day 2023). ಇದು ದೇಶದ ಸಾಂಸ್ಕೃತಿಕ ಮತ್ತು ರಕ್ಷಣಾ ವ್ಯವಸ್ಥೆಯ ಪರಂಪರೆಯ ಆಚರಣೆ ಮತ್ತು ರಾಷ್ಟ್ರದ ಅಡಿಪಾಯವಾದ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ.

ಗಣರಾಜ್ಯೋತ್ಸವವನ್ನು ಆಚರಿಸಲು ಕಾರಣವೇನು?
ಬ್ರಿಟೀಷರ ಆಳ್ವಿಕೆಯಿಂದ ಭಾರತವನ್ನು ಸಂಪೂರ್ಣವಾಗಿ ಮುಕ್ತವಾಗಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪೂರ್ಣ ಸ್ವರಾಜ್ಯಕ್ಕಾಗಿ ಕರೆ ನೀಡಿತು. ಹಾಗೆ ಸ್ವಾತಂತ್ರ್ಯಕ್ಕಾಗಿ ನಿರ್ಣಯವನ್ನು ಅಂಗೀಕರಿಸಿತು. ಇದಕ್ಕಾಗಿ ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರು, ಸರ್ದಾರ ವಲ್ಲಭಾಯಿ ಪಟೇಲ್‌ ಅವರಂತಹ ನಾಯಕರ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರವ್ಯಾಪಿ ಚಳುವಳಿಯು ಪ್ರಾರಂಭವಾಯಿತು. ಹಲವಾರು ವರ್ಷಗಳ ಹೋರಾಟ ಮತ್ತು ತ್ಯಾಗದ ನಂತರ ಭಾರತ ಆಗಸ್ಟ್‌ 15, 1947 ರಂದು ಸ್ವಾತಂತ್ರ್ಯವನ್ನು ಪಡೆಯಿತು. ಆದರೆ, ಆಗ ದೇಶವು ಸರಿಯಾದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಭಾರತದ ಸಂವಿಧಾನವನ್ನು ರಚಿಸುವ ಸಲುವಾಗಿ ಸಭೆಯನ್ನು ರಚಿಸಲಾಯಿತು. ಅದು ಸ್ವತಂತ್ರ ರಾಷ್ಟ್ರಕ್ಕಾಗಿ ಹೊಸ ಸಂವಿಧಾನವನ್ನು ರೂಪಿಸುವ ಕಾರ್ಯವನ್ನು ಮಾಡಿತು. ಆಗಸ್ಟ್‌ 29, 1947ರಂದು, ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಅಧ್ಯಕ್ಷತೆಯಲ್ಲಿ ಶಾಶ್ವತ ಸಂವಿಧಾನವನ್ನು ರೂಪಿಸುವ ಸಲುವಾಗಿ ಕರಡು ಸಮಿತಿಯನ್ನು ನೇಮಿಸಲಾಯಿತು. ಅದೇ ವರ್ಷ ನವೆಂಬರ್‌ 4 ರಂದು ಭಾರತದ ಸಂವಿಧಾನದ ಮೊದಲ ಕರಡನ್ನು ಮಂಡಿಸಲಾಯಿತು. ಸಂವಿಧಾನ ರಚನೆಯು ಸುದೀರ್ಘ ಪ್ರಕ್ರಿಯೆಯಾದ್ದರಿಂದ ಅದು ಪೂರ್ಣಗೊಳ್ಳಲು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿತು. ಅನೇಕ ಚಿಂತನೆಗಳು ಮತ್ತು ಮಾರ್ಪಾಡುಗಳ ನಂತರ ಅಂತಿಮವಾಗಿ ಜನವರಿ 24 ರಂದು, ಅಸೆಂಬ್ಲಿಯ 308 ಸದಸ್ಯರು ಪ್ರತಿಗಳಿಗೆ ಸಹಿ ಹಾಕಿದರು. ಸಂವಿಧಾನ ಸಭೆಯು ಅಂತಿಮವಾಗಿ ಜನವರಿ 26, 1950 ರಂದು ಹೊಸ ಸಂವಿಧಾನವನ್ನು ಅಂಗೀಕರಿಸಿತು. ಈ ಮೂಲಕ ಭಾರತವನ್ನು ಗಣರಾಜ್ಯವನ್ನಾಗಿ ಮಾಡಿತು. ಗಣರಾಜ್ಯೋತ್ಸವವು ವಸಾಹತುಶಾಹಿ ಆಳ್ವಿಕೆಯಿಂದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡ ದಿನವಾಗಿದೆ. ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ಆಧರಿಸಿದ ಹೊಸ ಸಂವಿಧಾನ ಬಲಿಷ್ಠ ಮತ್ತು ಸ್ಥಿರ ರಾಷ್ಟ್ರವನ್ನು ಕಟ್ಟಲು ಅಡಿಪಾಯ ಹಾಕಿತು.

ಇದನ್ನೂ ಓದಿ: 2023 ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: 8 ಮಂದಿ ಕನ್ನಡಿಗರಿಗೆ ಪುರಸ್ಕಾರ

ವೈವಿಧ್ಯಮಯವಾಗಿ ಆಚರಿಸುವ ಗಣರಾಜ್ಯೋತ್ಸವ:
ಗಣರಾಜ್ಯೋತ್ಸವದಂದು, ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಸಾಂಸ್ಕೃತಿಕ ಮತ್ತು ರಕ್ಷಣಾ ವ್ಯವಸ್ಥೆಯ ಪರಂಪರೆಯ ಪ್ರದರ್ಶನವನ್ನು ಒಳಗೊಂಡಿರುವ ಭವ್ಯವಾದ ಮೆರವಣಿಗೆಯನ್ನು ನಡೆಸಲಾಗುತ್ತದೆ. ಪರೇಡ್‌ನ ಮುಖ್ಯ ಅತಿಥಿಯೂ ಆಗಿರುವ ಭಾರತದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಈ ಮೆರವಣಿಗೆಯಲ್ಲಿ ಭಾರತದ ವಿವಿಧ ರಾಜ್ಯಗಳು ಮತ್ತು ಸಾಂಸ್ಕೃತಿಕ ಗುಂಪುಗಳನ್ನು ಪ್ರತಿನಿಧಿಸುವ ಟ್ಯಾಬ್ಲೋಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ. ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಶಾಲೆಗಳು ಮತ್ತು ಕಾಲೇಜುಗಳು ದೇಶಭಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ರ್‍ಯಾಲಿ ಮೆರವಣಿಗೆಗಳನ್ನು ಏರ್ಪಡಿಸಲಾಗುತ್ತದೆ.

ಇದನ್ನೂ ಓದಿ: ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು

(Happy Republic Day 2023. Know the history and significance of the day)

Comments are closed.