ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಅನ್ನದಾತರು

ಬೆಂಗಳೂರು : ರಾಜ್ಯದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಗುರಿಯಾಗುವಂತೆ ಆಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (Arecanut today price) ಬೆರಳೆಣಿಕೆಯಷ್ಟು ಏರಿಕೆ ಕಂಡಿದ್ದರೆ, ಕೆಲವು ಮಾರುಕಟ್ಟೆಗಳಲ್ಲಿ ಕುಸಿತವಾಗಿದ್ದು, ಇನ್ನುಳಿದಂತೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹೀಗಾಗಿ ರಾಜ್ಯದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಾಗಾಗುವ ಪರಿಸ್ಥಿತಿ ಉಂಟಾಗಿದೆ. ಅಡಿಕೆ ಫಸಲು ಚೆನ್ನಾಗಿ ಬರುವ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿರುತ್ತದೆ. ಆದರೆ ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಆದರೆ ಇಂದು (ಜನವರಿ 21) ರಂದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 52,835 ರೂ. ದರದಲ್ಲಿ ವಹಿವಾಟು ನಡೆಸುತ್ತಿದ್ದು, ಕಳೆದೆರಡು ದಿನಗಳಿಗಿಂತ ಹೆಚ್ಚಿನ ಬೆಲೆಯಲ್ಲಿ ಅಡಿಕೆ ಮಾರಾಟವಾಗುತ್ತಿದೆ. ಕಳೆದೆರಡು ದಿನದಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆಧಾರೆಣೆಯಲ್ಲಿ ಇಳಿಕೆ ಆಗಿದ್ದು, ಸದ್ಯ ಬೆಲೆಯಲ್ಲಿ ಚೇತರಿಕೆ ಆಗಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆಧಾರಣೆ ವಿವರ :

  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಶಿ ಅಡಿಕೆ 41,119 ರೂ.
  • ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ರಾಶಿ ಅಡಿಕೆ 46,599 ರೂ.
  • ದಾವಣಗೆರೆ ಜಿಲ್ಲೆಯಲ್ಲಿ ರಾಶಿ ಅಡಿಕೆ 45,571 ರೂ.
  • ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರಾಶಿ ಅಡಿಕೆ 46,199 ರೂ.
  • ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಾಶಿ ಅಡಿಕೆ 45,689 ರೂ.
  • ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಶಿ ಅಡಿಕೆ 45,699 ರೂ.
  • ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ರಾಶಿ ಅಡಿಕೆ 52,835 ರೂ.
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆ ಅಡಿಕೆಗೆ 48,000 – 54,500 ರೂ.
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಕೋಕ ಅಡಿಕೆಗೆ 12,500 – 25,000 ರೂ.
  • ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಹೊಸ ಅಡಿಕೆಗೆ 25,876 -31,000 ರೂ.
  • ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೋಕ ಅಡಿಕೆಗೆ 11,000 – 26,000 ರೂ.
  • ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹೊಸ ಅಡಿಕೆಗೆ 32,000 – 38,000 ರೂ.
  • ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ರಾಶಿ ಅಡಿಕೆ 46,109 ರೂ.
  • ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಶಿ ಅಡಿಕೆ 46,419 ರೂ.
  • ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಶಿ ಅಡಿಕೆ 46,329 ರೂ.
  • ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಾಶಿ ಅಡಿಕೆ 45,900 ರೂ.
  • ಶಿವಮೊಗ್ಗ ಜಿಲ್ಲೆಯಲ್ಲಿ ರಾಶಿ ಅಡಿಕೆ 46,450 ರೂ.
  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆ 46,899 ರೂ.
  • ತುಮಕೂರು ಜಿಲ್ಲೆಯಲ್ಲಿ ರಾಶಿ ಅಡಿಕೆ 45,900 ರೂ.

ಇದನ್ನೂ ಓದಿ : Jeevan Azad Policy : ಎಲ್‌ಐಸಿ ಈ ಹೊಸ ಪ್ರೀಮಿಯಂನಿಂದ ಕಡಿಮೆ ಹೂಡಿಕೆ ಹೆಚ್ಚು ಲಾಭ

ಇದನ್ನೂ ಓದಿ : ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ಧಿ : ಶೇ. 41ರಷ್ಟು ತುಟಿಭತ್ಯೆ ಹೆಚ್ಚಳ

ಇದನ್ನೂ ಓದಿ : ಸ್ವಿಗ್ಗಿಗೂ ತಟ್ಟಿದ ಉದ್ಯೋಗ ಕಡಿತದ ಭೀತಿ : 600 ಉದ್ಯೋಗಳು ವಜಾ ಸಾಧ್ಯತೆ

Arecanut today price: Fluctuation in the price of arecanut: Food donors are worried

Comments are closed.