Virat Kohli 25000 Runs : ಇವತ್ತೇ 25 ಸಾವಿರದ ಮೈಲುಗಲ್ಲು ನೆಡ್ತಾರಾ ಕಿಂಗ್ ಕೊಹ್ಲಿ? 25000ಕ್ಕೆ ಬೇಕು 111 ರನ್

ರಾಯ್ಪುರ: ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್, ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ದಾಖಲೆಯ (Most runs in international cricket) ಹೊಸ್ತಿಲಲ್ಲಿದ್ದಾರೆ.ವಿರಾಟ್ ಕೊಹ್ಲಿ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 25 ಸಾವಿರ ರನ್’ಗಳ ಗಡಿ ತಲುಪಲು ಬೇಕಿರುವುದಿನ್ನು ಕೇವಲ 111 ರನ್ ಮಾತ್ರ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಂದು ರಾಯ್ಪುರದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲೇ ಕಿಂಗ್ ಕೊಹ್ಲಿ ಈ ಸಾಧನೆ ಮಾಡುವ ಸಾಧ್ಯತೆಯಿದೆ. ಅಮೋಘ ಫಾರ್ಮ್’ನಲ್ಲಿರುವ ವಿರಾಟ್ ಕೊಹ್ಲಿ ಕಳೆದ 5 ಏಕದಿನ ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ. ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರನ್ ಮಷಿನ್ ಕೊಹ್ಲಿ 2 ಶತಕಗಳನ್ನು ಸಿಡಿಸಿದ್ದರು.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ (Most runs in international cricket) ಗಳಿಸಿರುವ ವಿಶ್ವದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಲ್ಲಿದೆ. ಸಚಿನ್ 664 ಪಂದ್ಯಗಳಿಂದ 34,352 ರನ್ ಕಲೆ ಹಾಕಿದ್ದಾರೆ. ವಿರಾಟ್ ಕೊಹ್ಲಿ 488 ಪಂದ್ಯಗಳಿಂದ 24,889 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿ ಅವರಿಗೆ ಇನ್ನು 9,463 ರನ್’ಗಳ ಅವಶ್ಯಕತೆಯಿದೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 486, ರನ್: 24,889, ಶತಕ: 74, ಅರ್ಧಶತಕ: 129

ಟೆಸ್ಟ್ ಕ್ರಿಕೆಟ್
ಪಂದ್ಯ: 102
ಇನ್ನಿಂಗ್ಸ್: 177
ರನ್: 8,119
100/50: 27/28

ಇದನ್ನೂ ಓದಿ : Gujarat all our for 54 runs : ಟಾರ್ಗೆಟ್ 73, ಗುಜರಾತ್ 54ಕ್ಕೆ ಆಲೌಟ್; ರಣಜಿ ಟ್ರೋಫಿಯಲ್ಲೊಂದು ಅಚ್ಚರಿಯ ಫಲಿತಾಂಶ

ಏಕದಿನ ಕ್ರಿಕೆಟ್
ಪಂದ್ಯ: 269
ಇನ್ನಿಂಗ್ಸ್: 260
ರನ್: 12,762
100/50: 46/64

ಇದನ್ನೂ ಓದಿ : Karnataka under 14 cricket team : ಕರ್ನಾಟಕ ಅಂಡರ್-14 ತಂಡಕ್ಕೆ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ನಾಯಕ

ಇದನ್ನೂ ಓದಿ : Chennai Super Kings : ಕಟ್ಟ ಕಡೆಯ ಐಪಿಎಲ್’ಗೆ ಧೋನಿ ಜಬರ್ದಸ್ತ್ ಅಭ್ಯಾಸ, ‘’ತಲಾ’’ ಹೊಸ ಸ್ಟೈಲ್’ಗೆ ಫ್ಯಾನ್ಸ್ ಫಿದಾ

ಟಿ20 ಕ್ರಿಕೆಟ್
ಪಂದ್ಯ: 115
ಇನ್ನಿಂಗ್ಸ್: 107
ರನ್: 4008
100/50: 01/37

ಇದನ್ನೂ ಓದಿ : Exclusive: ಬೆಂಗಳೂರಿನಲ್ಲಿ ಅಶ್ವಿನ್-ಜಡೇಜಾ ಬೌಲಿಂಗ್, ಆಸ್ಟ್ರೇಲಿಯಾ ವಿರುದ್ಧ ಭಲೇ ಜೋಡಿಯ ಮ್ಯಾಜಿಕ್ ಪಕ್ಕಾ

ಇದನ್ನೂ ಓದಿ : Mayank Agarwal Double century: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಮಯಾಂಕ್ ಅಗರ್ವಾಲ್

Most runs in international cricket : Did King Kohli reach 25 thousand runs today? 25000 need 111 runs

Comments are closed.