Arecanut Today Price Increase :ಅಡಿಕೆ ಬೆಳೆಗಾರರಿಗೆ ಗುಡ್‌ ನ್ಯೂಸ್‌ : ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ

ಬೆಂಗಳೂರು : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಭರ್ಜರಿ (Arecanut Today Price Increase) ಏರಿಕೆ ಕಂಡಿದೆ. ಕಳೆದ ಒಂದು ವಾರದಿಂದ ಅಡಿಕೆ ಧಾರಣೆಯಲ್ಲಿ ಭಾರಿ ಏರಿಳಿತ ಕಂಡಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆ ಆಗಿರುವುದರಿಂದ ರೈತರ ಮೊಗದಲ್ಲಿ ಸಂತಸ ಉಂಟು ಮಾಡಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಬೇರೆ ಬೇರೆ ಆಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಅಡಿಕೆ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 52,969 ರೂ. ದರದಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಬೇರೆ ಎಲ್ಲಾ ಜಿಲ್ಲೆಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಅಡಿಕೆ ಮಾರಾಟವಾಗುವ ಜಿಲ್ಲೆಯಾಗಿದೆ. ಇನ್ನುಳಿದಂತೆ ಕೆಲ ಜಿಲ್ಲೆಗಳಲ್ಲಿ ಅಡಿಧಾರಣೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ಇನ್ನು ಕೆಲ ಜಿಲ್ಲೆಗಳಲ್ಲಿ ಸ್ಥಿರ ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆಧಾರಣೆ ವಿವರ :

  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಶಿ ಅಡಿಕೆ 41,119 ರೂ.
  • ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ರಾಶಿ ಅಡಿಕೆ 46,899 ರೂ.
  • ದಾವಣಗೆರೆ ಜಿಲ್ಲೆಯಲ್ಲಿ ರಾಶಿ ಅಡಿಕೆ 46,169 ರೂ.
  • ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರಾಶಿ ಅಡಿಕೆ 46,199 ರೂ.
  • ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಾಶಿ ಅಡಿಕೆ 46,009 ರೂ.
  • ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಶಿ ಅಡಿಕೆ 46,409 ರೂ.
  • ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ರಾಶಿ ಅಡಿಕೆ 52,969 ರೂ.
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆ ಅಡಿಕೆಗೆ 48,000 – 54,500 ರೂ.
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಕೋಕ ಅಡಿಕೆ 12,500 – 25,000 ರೂ.
  • ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಹೊಸ ಅಡಿಕೆಗೆ 25,876 -31,000 ರೂ.
  • ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೋಕ ಅಡಿಕೆಗೆ 11,000 – 26,000 ರೂ.
  • ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹೊಸ ಅಡಿಕೆಗೆ 32,000 – 38,000 ರೂ.
  • ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ರಾಶಿ ಅಡಿಕೆ 46,899 ರೂ.
  • ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಶಿ ಅಡಿಕೆ 47,349 ರೂ.
  • ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಶಿ ಅಡಿಕೆ 46,329 ರೂ.
  • ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಾಶಿ ಅಡಿಕೆ 45,900 ರೂ.
  • ಶಿವಮೊಗ್ಗ ಜಿಲ್ಲೆಯಲ್ಲಿ ರಾಶಿ ಅಡಿಕೆ 46,450 ರೂ.
  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆ 46,899 ರೂ.
  • ತುಮಕೂರು ಜಿಲ್ಲೆಯಲ್ಲಿ ರಾಶಿ ಅಡಿಕೆ 45,900 ರೂ.

ಇದನ್ನೂ ಓದಿ : ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಅನ್ನದಾತರು

ಇದನ್ನೂ ಓದಿ : ಅಡಿಕೆ ಧಾರಣೆ ಮಾರುಕಟ್ಟೆಯಲ್ಲಿ ಏರಿಕೆ : ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ?

ಇದನ್ನೂ ಓದಿ : Arecanut Price Decrease : ಅಡಿಕೆ ಬೆಲೆ ಕುಸಿತ, ಅತಂಕದಲ್ಲಿ ಬೆಳೆಗಾರರು

Arecanut Today Price Increase : Good News for Nut Growers : Massive increase in arecanut storage

Comments are closed.