Covid outbreak China : ಕೋವಿಡ್ ಮಹಾಸ್ಟೋಟಕ್ಕೆ ಚೀನಾ ತತ್ತರ : ಶೇ.80ರಷ್ಟು ಜನರಿಗೆ ಸೋಂಕು, ಚೀನಾ ವಿಜ್ಞಾನಿಗಳು ಬಿಚ್ಚಿಟ್ಟ ಸ್ಪೋಟ ಸತ್ಯ

ಬೀಜಿಂಗ್ : Covid outbreak China : ಕೋವಿಡ್ ಮಹಾಮಾರಿಯನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದ ಚೀನಾದಲ್ಲೀಗ ಮತ್ತೊಮ್ಮೆ ಕೋವಿಡ್ ಮಹಾಸ್ಪೋಟ ಸಂಭವಿಸಿದೆ. ಮುಂದಿನ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಕೋವಿಡ್ -19 ಸೋಂಕು ತೀವ್ರ ತೆರದಲ್ಲಿ ಕಾಡುವ ಮುನ್ಸೂಚನೆ ದೊರೆತಿದೆ. ಈಗಾಗಲೇ ಕೆಂಪುರಾಷ್ಟ್ರ ಚೀನಾದಲ್ಲಿನ 80 ಪ್ರತಿಶತದಷ್ಟು ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂಬ ಸತ್ಯವನ್ನು ಸರಕಾರಿ ವಿಜ್ಞಾನಿಯೋರ್ವರು ಬಿಚ್ಚಿಟ್ಟಿದ್ದಾರೆ.

ಚೀನಾ ಸರಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ಸರಿ ಸುಮಾರು ಒಂದು ತಿಂಗಳ ಅವಧಿಯಲ್ಲಿ(ಜನವರಿ 12ರ ವರೆಗೆ) ಸುಮಾರು 60,000ಕ್ಕೂ ಅಧಿಕ ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಚೀನಾದಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಸರಕಾರ ಈಗಾಗಲೇ ಕಿತ್ತು ಹಾಕಿದೆ. ಜೊತೆಗೆ ಹೊಸ ವರ್ಷದ ರಜೆಯ ವೇಳೆಯಲ್ಲಿ ಸಾಕಷ್ಟು ಮಂದಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಚೀನಾದಿಂದ ಇತರ ದೇಶಗಳಿಗೆ ಸಂಚಾರ ಮಾಡಿದ್ದಾರೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.

ರಜೆಯ ವೇಳೆಯಲ್ಲಿ ನೂರಾರು ಮಿಲಿಯನ್ ಚೀನಿಯರು ದೇಶಾದ್ಯಂತ ಪ್ರಯಾಣಿಸುತ್ತಿದ್ದಾರೆ. ಅದ್ರಲ್ಲೂ ಗ್ರಾಮೀಣ ಭಾಗಕ್ಕೂ ಕೂಡ ಕೋವಿಡ್ ಸೋಂಕು ಹರಡುವಿಕೆಯ ಭೀತಿ ಶುರುವಾಗಿದೆ. ಚೀನಾ ದೇಶದಾದ್ಯಂತ ಈಗಾಗಲೇ ಜ್ವರ ಚಿಕಿತ್ಸಾಲಯಗಳು, ತುರ್ತು ಚಿಕಿತ್ಸಾ ಘಟಕಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಈಗಾಗಲೇ ಏರಿಕೆ ಕಂಡಿದೆ. ಕೋಟ್ಯಾಂತರ ಮಂದಿ ಈಗಾಗಲೇ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆ ಕೋಣೆಗೆ ಭರ್ತಿಯಾಗಿದೆ. ಚೀನಾದಲ್ಲಿ ಮುಂದಿನ ಅವಧಿಯಲ್ಲಿ ಎರಡನೇ ಕೋವಿಡ್ ತರಂಗ ವೇಗವಾಗಿ ಹರಡುವ ಸಾಧ್ಯತೆಯಿದೆ ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜುನ್ಯೂ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಆದರೆ ಚೀನಾದಲ್ಲಿನ ಕೆಲವು ತಜ್ಞರು ಚೀನಾದಲ್ಲಿ ಕೋವಿಡ್ ಸೋಂಕು ಶೀಘ್ರದಲ್ಲಿಯೇ ನಿಯಂತ್ರಣಕ್ಕೆ ಬರಲಿದೆ. ಮನೆಯಲ್ಲಿ ಸಾಯುತ್ತಿರುವವರನ್ನು ಹೊರತು ಪಡಿಸಿ ಉಳಿದಂತೆ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎನ್ನುತ್ತಿದ್ದಾರೆ. ಇನ್ನು ಅನೇಕ ವೈದ್ಯರು ಕೋವಿಡ್ ಸಾವಿಗೆ ಕಾರಣವಾಗಲಿದೆ ಅನ್ನೋದನ್ನು ಉಲ್ಲೇಖಿಸುವುದನ್ನು ವಿರೋಧಿಸುತ್ತಿದ್ದಾರೆ. ಕೋವಿಡ್ ಮೊದಲ ಅಲೆಯಲ್ಲಿ ವಿಶ್ವಕ್ಕೆ ಸುಳ್ಳು ಹೇಳಿರುವ ಚೀನಾ ವಿಶ್ವದ ಪ್ರತೀ ರಾಷ್ಟ್ರಕ್ಕೂ ಮಹಾಮಾರಿಯನ್ನು ಪಸರಿಸಿತ್ತು. ಇದೀಗ ಮತ್ತೊಮ್ಮೆ ಕೆಂಪುರಾಷ್ಟ್ರದಲ್ಲಿ ಕೋವಿಡ್ ಮಹಾಮಾರಿ ಆರ್ಭಟಿಸುತ್ತಿರುವುದು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಎಚ್ಚರಿಕೆಯ ಕರೆಗಂಟೆ ಎನಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಕೂಡ ಚೀನಾ ಕೋವಿಡ್ ವಿಚಾರದಲ್ಲಿ ಈ ಹಿಂದೆಯೇ ಸುಳ್ಳು ಮಾಹಿತಿಯನ್ನು ನೀಡಿತ್ತು ಅನ್ನೋದನ್ನು ಖುದ್ದು ಅಮೇರಿಕಾ ಆರೋಪಿಸಿತ್ತು. ಮೊದಲ ಅಲೆಯಲ್ಲಿ ಚೀನಾ ಮಾಧ್ಯಮಗಳು ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದರೆ, ಚೀನಾ ಸರಕಾರ ಮಾತ್ರ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿತ್ತು. ಆದರೆ ಮುಂದಿನ ಕೆಲವೇ ತಿಂಗಳುಗಳಲ್ಲಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ವ್ಯಾಪಿಸಿತ್ತು. ಇದೀಗ ಮತ್ತೊಮ್ಮೆ ಚೀನಾದಲ್ಲಿ ಕೋವಿಡ್ ಸೋಂಕು ಹರಡುತ್ತಿರುವುದು ನೆರೆಯ ರಾಷ್ಟ್ರಗಳಿಗೆ ಆತಂಕವನ್ನು ಉಂಟು ಮಾಡಿದೆ.

ಇದನ್ನೂ ಓದಿ : 80 ಲಕ್ಷ ಪೋನ್ ಸ್ಚಿಚ್ ಆಫ್, ಶೇ.80 ರಷ್ಟು ಜನರೇ ನಾಪತ್ತೆ : ವಿಶ್ವದೆದುರು ಸುಳ್ಳು ಹೇಳಿದ್ಯಾಕೆ ಚೀನಾ !

ಇದನ್ನೂ ಓದಿ : ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದ ನಾಸ್ಟ್ರಡಾಮಸ್ ! 475 ವರ್ಷಗಳ ಹಿಂದೆ ಕಾಲಜ್ಞಾನಿ ಹೇಳಿದ್ದೇನು ಗೊತ್ತಾ ?

Covid outbreak China has infected 80 percentage of population

Comments are closed.