Super Singer Mangli: ಗಾಯಕಿ ಮಂಗ್ಲಿ ತೆರಳುತ್ತಿದ್ದ ಕಾರಿಗೆ ಕಲ್ಲೆಸೆತ: ಪೊಲೀಸರಿಂದ ಲಾಠಿ ಚಾರ್ಜ್‌

ಬಳ್ಳಾರಿ: (Super Singer Mangli) ಖ್ಯಾತ ಗಾಯಕಿ ಮಂಗ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಯುವಕರ ಗುಂಪೊಂದು ಕಲ್ಲೆಸೆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ದ ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ತನ್ನ ಅದ್ಬುತ ಕಂಠದ ಹಾಡುಗಾರಿಕೆಯ ಮೂಲಕ ಸುದ್ದಿಯಲ್ಲಿರುವ ತೆಲುಗಿನ ಪ್ರಸಿದ್ದ ಗಾಯಕಿ ಮಂಗ್ಲಿ ನಿನ್ನೆಯ ದಿನ ಬಳ್ಳಾರಿ ಉತ್ಸವದಲ್ಲಿ ರಸಮಂಜರಿ ಕಾರ್ಯಕ್ರಮವೊಂದನ್ನು ನೀಡಲು ತೆರಳಿದ್ದರು. ವಿವಿಧ ಹಾಡುಗಳನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿ ನೆರೆದ ಜನರನ್ನು ರಂಜಿಸಿದ್ದರು. ಕಾರ್ಯಕ್ರಮ ಮುಗಿದ ನಂತರದಲ್ಲಿ ಗಾಯಕಿ ಮಂಗ್ಲಿಯನ್ನು ನೋಡಲು ಯುವಕರ ಗುಂಪೊಂದು ಮುಗಿಬಿದ್ದಿದ್ದು, ಕಲಾವಿದರು ತಯಾರಾಗಲು ನಿರ್ಮಿಸಲಾದ ವೇದಿಕೆ ಹಿಂಬಾಗದಲ್ಲಿದ್ದ ಡ್ರೆಸ್ಸಿಂಗ್‌ ಟೆಂಟ್‌ ಗೂ ಕಿಡಿಗೇಡಿಗಳು ನುಗಿದ್ದಾರೆ.

ಡ್ರೆಸ್ಸಿಂಗ್‌ ರೂಮ್‌ ಗೂ ನುಗ್ಗಿದ್ದಲ್ಲದೇ ಕಾರ್ಯಕ್ರಮ ಮುಗಿಸಿ ಮಂಗ್ಲಿ ಅವರು ಅಲ್ಲಿಂದ ತನ್ನ ಕಾರಿನಲ್ಲಿ ಹಿಂದಿರುಗುವ ಸಂದರ್ಭ ಮಂಗ್ಲಿಯವರಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕಿಡಿಗೇಡಿಗಳನ್ನು ಅಲ್ಲಿಂದ ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದು, ಕಿಡಿಗೇಡಿಗಳ ಗುಂಪಿನ ವಿರುದ್ದ ಪ್ರಕರಣ ದಾಖಲಾಗಿದೆ.

ಈಗಾಗಲೇ ತಮ್ಮ ಅದ್ಭುತ ಕಂಠದಿಂದ ಕನ್ನಡಿಗರ ಹೃದಯ ಗೆದ್ದ ಗಾಯಕಿ ಮಂಗ್ಲಿ, ಬ್ಯಾಕ್‌ ಟು ಬ್ಯಾಕ್‌ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದ ರಾಬರ್ಟ್‌ ಸಿನಿಮಾದ ಮೂಲಕ ಸ್ಯಾಂಡಲ್‌ ವುಡ್ ಗೆ ಎಂಟ್ರಿ ಕೊಟ್ಟ ಮಂಗ್ಲಿ ಬಳಿಕ ಜೋಗಿ ಪ್ರೇಮ್‌ ನಿರ್ದೇಶನ ಚಏಕ್‌ ಲವ್‌ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಹಾಡಿಗೆ ಧನಿಯಾದರು. ಇದೀಗ ಮಂಗ್ಲಿ ಹಾಡಿರುವ ಎಲ್ಲಾ ಹಾಡುಗಳು ಸೂಪರ್‌ ಹಿಟ್‌ ಆಗಿವೆ.

ಇದನ್ನೂ ಓದಿ :ಆರ್‌ಸಿಬಿ ಟ್ವಿಟರ್‌ನ ಹ್ಯಾಕ್ ಆಗಿದ್ದರೂ ಕಪ್‌ ನಮ್ದೆ ಎಂದ ಸಿಂಪಲ್‌ ಸುನಿ

ಇದನ್ನೂ ಓದಿ : ನಟ ದರ್ಶನ್‌ ಜೊತೆ ಹೀರೊಯಿನ್‌ ಆಗಲು ಈ ನಟಿಗೆ ಸಾಧ್ಯವೇ ಇಲ್ಲ : ಅಷ್ಟಕ್ಕೂ ಆ ನಟಿ ಯಾರು ಗೊತ್ತಾ ?

ಇದನ್ನೂ ಓದಿ : “ಕಾಂತಾರ 2” ಕಥೆಯಲ್ಲಿ ಟ್ವಿಸ್ಟ್ ! ಸಿನಿಮಾದ ಸಿಕ್ರೆಟ್‌ ಬಿಚ್ಚಿಟ್ಟ ವಿಜಯ್ ಕಿರಗಂದೂರು

Super Singer Mangli: Stones pelted at the car in which Singer Mangli was moving: Lathi charge by police

Comments are closed.