Firing at the house: ಮನೆಯ ಮೇಲೆ ಗುಂಡಿನ ದಾಳಿ: ತಾಯಿ ಮಗು ಸೇರಿ 6 ಮಂದಿಯ ಭೀಕರ ಹತ್ಯೆ

ಕ್ಯಾಲಿಫೋರ್ನಿಯಾ: (Firing at the house) ಮನೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ತಾಯಿ, ಮಗು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿರುವ ಘಟನೆ ಕ್ಯಾಲಿಫೊರ್ನಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರ ಬೆಳಿಗ್ಗಿನ ಜಾವ ಸರಿಸುಮಾರು 3:30 ರ ಹೊತ್ತಿಗೆ ಇಬ್ಬರು ವ್ಯಕ್ತಿಗಳು ಮನೆಯ ಮೇಲೆ ಗುಂಡಿನ ದಾಳಿ (Firing at the house) ನಡೆಸಿದ್ದು, ಇದು ಉದ್ದೇಶಿತ ದಾಳಿ ಎಂದು ಹೇಳಲಾಗಿದೆ. ಅಲ್ಲದೇ ಈ ದಾಳಿಯು ಡ್ರಗ್‌ ಹಿಂಸಾಚಾರಕ್ಕೆ ಸಂಬ‍ಂಧಿಸಿರಬಹುದು ಎನ್ನಲಾಗಿದೆ. ಮನೆಯ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದು, ಮನೆಯ ಕೆಲವು ಮಂದಿ ಪೊಲೀಸರಿಗೆ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದು, ತುರ್ತು ವೈದ್ಯಕೀಯ ಆರೈಕೆ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಅವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಇನ್ನೂ ಇಬ್ಬರು ಗುಂಡಿನ ದಾಳಿ ನಡೆಯುವ ಸಂದರ್ಭ ಕಟ್ಟಡದಲ್ಲಿ ಅಡಗಿ ಕುಳಿತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ತಾಯಿ ಹಾಗೂ ಮಗು ಕೂಡ ಸೇರಿದ್ದಾರೆ. ತನಿಖೆಯ ವೇಳೆ ತಾಯಿ ಹಾಗೂ ಮಗುವಿನ ತಲೆಗೆ ಗುಂಡೇಟು ಬಿದ್ದಿರುವುದು ಕಂಡುಬಂದಿದೆ. ಇನ್ನು ಘಟನೆಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.

“ಮನೆಯ ಮೇಲೆ ನಡೆದ ದಾಳಿ ಉದ್ದೇಶಿತ ದಾಳಿಯಾಗಿದ್ದು, ಡ್ರಗ್ಸ್ ಗೆ ಸಂಬಂಧಿಸಿದಂತಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದರು. ” ಈ ದಾಳಿಯಲ್ಲಿ ಗ್ಯಾಂಗ್‌ ಅಸೋಸಿಯೇಷನ್‌ ಗಳು ಮತ್ತು ಸಂಭಾವ್ಯ ಮಾದಕವಸ್ತು ತನಿಖೆಗಳು ಭಾಗಿಯಾಗಿವೆ.” ಎಂದಿದ್ದಾರೆ.

ಇದನ್ನೂ ಓದಿ : Murder like Drishyam movie: ದೃಶ್ಯಂ ಸಿನಿಮಾ ರೀತಿಯಲ್ಲಿ ಪತಿಯನ್ನೇ ಕೊಂದ ಪತ್ನಿ: ಪೊಲೀಸರು ಪ್ರಕರಣ ಬೇಧಿಸಿದ್ದು ರೋಚಕ

ಇದನ್ನೂ ಓದಿ : Gurugram road accident: ರಾಂಗ್‌ ಸೈಡಿನಲ್ಲಿ ಬಂದ ಪೊಲೀಸ್‌ ವಾಹನ ಕಾರಿಗೆ ಢಿಕ್ಕಿ: 6ತಿಂಗಳ ಮಗು ಸಾವು, 4 ಮಂದಿಗೆ ಗಾಯ

Firing at the house: Firing attack on the house: 6 people including mother and child were brutally killed

Comments are closed.