Young Professionals Scheme : ವೃತ್ತಿಪರರಿಗಾಗಿ ಪ್ರಾರಂಭವಾಗಲಿದೆ ಹೊಸ ಯೋಜನೆ; ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ವಾಸ ಮತ್ತು ಕೆಲಸ

ಯುವ ವೃತ್ತಿಪರರಿಗೆ ಹೊಸ ಅವಕಾಶ ದೊರೆಯಲಿದೆ. ಭಾರತ ಮತ್ತು ಬ್ರಿಟನ್‌ ಯುವ ವೃತ್ತಿಪರರಿಗಾಗಿ ಯೋಜನೆಯೊಂದನ್ನು ಪ್ರಾರಂಭಿಸಲು ಸಿದ್ಧವಾಗಿದೆ. 18 ರಿಂದ 30 ವರ್ಷದ ಒಳಗಿನ ಭಾರತೀಯ ಪ್ರಜೆಗಳಿಗೆ ಬ್ರಿಟನ್‌ನಲ್ಲಿ ಎರಡು ವರ್ಷಗಳವರೆಗೆ ಅಧ್ಯಯನ ಮತ್ತು ಕೆಲಸ ಮಾಡುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಯೋಜನೆಯು (Young Professionals Scheme) ಅಭ್ಯರ್ಥಿಗಳಿಗೆ ವಾಸ ಮತ್ತು ಕೆಲಸ ಮಾಡಲು ಅನುವು ಮಾಡಿಕೊಡಲಿದೆ. ದೆಹಲಿಯಲ್ಲಿ ನಡೆದ 15ನೇ ಭಾರತ–ಯುಕೆ ವಿದೇಶಾಂಗ ಕಚೇರಿ ಸಮಾಲೋಚನೆ (India-UK Foreign Office Consultation(FOC)) ಯಲ್ಲಿ ಈ ವಿಷಯವನ್ನು ಚರ್ಚಿಸಿದೆ. ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs (MEA)) ಹೊರಡಿಸಿದ ಹೇಳಿಕೆ ಪ್ರಕಾರ ಈ ಯೋಜನೆಯನ್ನು ಫೆಬ್ರವರಿ 28ರಂದು ಪ್ರಾರಂಭಿಸಲಾಗುವುದು.

ಹೈಕಮೀಷನರ್‌ ವಿಕ್ರಮ್‌ ದೊರೈಸ್ವಾಮಿ ಅವರ ಪ್ರಕಾರ, ಈ ಯೋಜನೆಯು 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಮಾರ್ಚ್ 2023 ರಿಂದ ಜಾರಿಗೆ ಬರಲಿದೆ. ಭಾರತ ಮತ್ತು ಬ್ರಿಟನ್‌ನ ನಾಗರಿಕರು ಎರಡು ವರ್ಷಗಳವರೆಗೆ ಭೇಟಿ ನೀಡಲು, ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಈ ಎರಡೂ ದೇಶಕ್ಕೆ ಪ್ರಯಾಣಿಸಬಹುದು. ಎರಡೂ ದೇಶಗಳು 3,000 ಅಭ್ಯರ್ಥಿಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದರ ಸಲುವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಉದ್ಯೋಗಾವಕಾಶದ ಅಗತ್ಯವಿಲ್ಲ ಎಂದು ವಿಕ್ರಮ್ ದೊರೈಸ್ವಾಮಿ ಹೇಳಿದ್ದಾರೆ.

ಭಾರತ–ಯುಕೆ ನಡುವಿನ ಯುವ ವೃತಿಪರರ ಯೋಜನೆ (Young Professionals Scheme) ಪ್ರಮುಖ ಅಂಶಗಳು :

  • ಈ ಯೋಜನೆಯು ಭಾರತದ 18 ರಿಂದ 30 ವರ್ಷದ ಒಳಗಿನ 3,000 ಡಿಗ್ರಿ–ಹೋಲ್ಡರ್‌ಗಳು ಎರಡು ವರ್ಷಗಳ ಕಾಲ ಯುಕೆಯಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
  • ಯೋಜನೆಗೆ 18-30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
  • ಈ ಯೋಜನಾ ಕಾರ್ಯಕ್ರಮವು ಪರಸ್ಪರರದ್ದಾಗಿರುತ್ತದೆ. ಭಾರತೀಯರ ರೀತಿಯಲ್ಲೇ ಯುಕೆ ವೃತ್ತಿಪರರು ಸಹ ಭಾರತದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಮೂಲಕ ವೃತ್ತಿಪರ ವಿನಿಮಯದಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ.
  • ಈ ಯೋಜನೆಯು ಮಾರ್ಚ್ 2023 ರಲ್ಲಿ ಪ್ರಾರಂಭವಾಗಲಿದೆ.
  • ವೀಸಾಗೆ ಅರ್ಜಿ ಸಲ್ಲಿಸಲು ಜಾಬ್ ಆಫರ್‌ನ ಅಗತ್ಯವಿರುವುದಿಲ್ಲ.

ಇದನ್ನೂ ಓದಿ : SBI WhatsApp Banking : ನೀವು ಎಸ್‌ಬಿಐ ಗ್ರಾಹಕರೇ ? ಹಾಗಿದ್ದರೆ ನಿಮಗೆ ಸಿಗಲಿದೆ 9 ಉಚಿತ ಸೇವೆ

ಇದನ್ನೂ ಓದಿ : Kerala Mask mandatory: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ : ಕೇರಳದಲ್ಲಿ ಜಾರಿಯಾಯ್ತು ಕಠಿಣ ಮಾರ್ಗಸೂಚಿ

(Young Professionals Scheme live and work in UK for 2 years)

Comments are closed.