vastu shashtra: ಮನೆಯಲ್ಲಿ ಗಿಳಿ ಸಾಕುವುದು ಶುಭವೋ.. ಅಶುಭವೋ..: ವಾಸ್ತು ಶಾಸ್ತ್ರ ಹೇಳೋದಿಷ್ಟು

vastu shashtra: ಪ್ರಾಣಿ ಪಕ್ಷಿಗಳನ್ನು ಸಾಕುವುದು ಅಂದರೆ ಅನೇಕರಿಗೆ ಇಷ್ಟದ ಕೆಲಸ. ಪ್ರಾಣಿಗಳನ್ನು ಸಾಕಿದಂತೆ ಪಕ್ಷಿಗಳನ್ನು ಸಾಕುವವರ ಸಂಖ್ಯೆ ಕಡಿಮೆ. ಆದರೆ ಕೆಲವೊಂದು ಪಕ್ಷಿಗಳು ಎಷ್ಟು ಮುದ್ದಾಗಿ ಇರುತ್ತವೆ ಅಂದರೆ ಜನರು ಅವುಗಳನ್ನು ಮನೆಯಲ್ಲಿ ಸಾಕಲು ಆರಂಭಿಸುತ್ತಾರೆ. ಮನೆಯಲ್ಲಿ ನಾಯಿ ಹಾಗೂ ಬೆಕ್ಕನ್ನು ಹೇಗೆ ಸಾಕುತ್ತಾರೋ ಅದೇ ರೀತಿ ಪಕ್ಷಿಗಳ ವಿಚಾರಕ್ಕೆ ಬಂದಾಗ ಗಿಳಿ ಸಾಕುವವರ ಸಂಖ್ಯೆ ತುಂಬಾನೇ ಹೆಚ್ಚಿದೆ. ಹಾಗಾದರೆ ಈ ಗಿಳಿಯನ್ನು ಸಾಕೋದು ಮನೆಗೆ ಒಳ್ಳೆಯದಾ..? ಕೆಟ್ಟದ್ದಾ..? ಇಲ್ಲಿದೆ ಸಂಪೂರ್ಣ ಮಾಹಿತಿ .

ಪಕ್ಷಿಯನ್ನು ಸಾಕುವ ಇತಿಹಾಸ ತೇತ್ರಾಯುಗದಿಂದಲೂ ಇದೆ. ಗಿಳಿಗಳು ಎಷ್ಟು ಮುದ್ದಾಗಿ ಇರುತ್ತದೆ ಎಂದರೆ ಅವುಗಳು ಮನುಷ್ಯರಂತೆ ಮಾತನಾಡುತ್ತವೆ. ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ನಿಷೇಧಿತ ಪಕ್ಷಿಗಳ ಪಟ್ಟಿಗೆ ಗಿಳಿಗಳು ಬರುತ್ತವೆ. ಕಾನೂನಿನ ಪ್ರಕಾರ ಗಿಳಿಯನ್ನು ಸಾಕುವುದು ಅಪರಾಧವಾಗಿದೆ. ಆದರೆ ವಾಸ್ತುವಿನ ಪ್ರಕಾರ ಗಿಳಿ ಸಾಕುವುದಕ್ಕೆ ಯಾವ ಅರ್ಥವಿದೆ..? ನೋಡೋಣ ಬನ್ನಿ.


ಗಿಳಿಯನ್ನು ಸಾಕುವುದು ಶುಭವೇ..?
ವಾಸ್ತು ನಿಯಮದ ಪ್ರಕಾರ ಹೇಳೋದಾದ್ರೆ ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಸಕಾರಾತ್ಮಕ ಅಂಶವು ಮನೆಗೆ ಬರುತ್ತದೆ ಎಂದು ನಂಬಲಾಗಿದೆ. ಯಾವ ಮನೆಯಲ್ಲಿ ಗಿಳಿ ಸಾಕುತ್ತಾರೋ ಅಂತವರ ಮನೆಯಲ್ಲಿ ಮಕ್ಕಳು ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಅಲ್ಲದೇ ನೆನಪಿನ ಶಕ್ತಿ ಕೂಡ ಹೆಚ್ಚುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಪ್ರತಿನಿತ್ಯ ಗಿಳಿ ಧ್ಚನಿಯನ್ನು ಕೇಳುವುದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಮನದಲ್ಲಿ ಹತಾಶೆ ಇರೋದಿಲ್ಲ.


ಗಿಳಿ ಸಾಕುವುದರಿಂದ ರಾಹು , ಕೇತು ಮತ್ತು ಶನಿಯ ದುಷ್ಟ ಕಣ್ಣು ನಿಮ್ಮ ಮನೆಯ ಮೇಲೆ ಬೀಳೋದಿಲ್ಲ. ಅಲ್ಲದೇ ಇಂತಹ ಮನೆಯಲ್ಲಿ ಅಕಾಲಿಕ ಮರಣ ಸಂಭವಿಸುವುದಿಲ್ಲ. ಗಿಳಿ ಸಾಕಣೆ ಮಾಡುವುದರಿಂದ ಪತಿ – ಪತ್ನಿಯ ನಡುವಿನ ಸಂಬಂಧ ಸುಧಾರಿಸುತ್ತದೆ.


ವಾಸ್ತು ನಿಯಮದ ಪ್ರಕಾರ, ಯಾರಿಗೆ ಗಿಳಿಯ ಋಣ ಇರುವುದಿಲ್ಲವೋ ಅಂತವರು ಗಿಳಿಯನ್ನು ಮನೆಯಲ್ಲಿ ಸಾಕಿದರೆ ಅದರಿಂದ ಅವರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ. ಮನೆಯಲ್ಲಿ ನೀವು ಪಂಜರದಲ್ಲಿ ಗಿಳಿ ಸಾಕುತ್ತಿದ್ದೀರಿ ಅಂದರೆ ಅದನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಿದ್ದೀರಿ. ಒಂದು ವೇಳೆ ಗಿಣಿ ಕೋಪಗೊಂಡರೆ ಅದು ನಿಮ್ಮ ಮನೆಗೆ ಶಾಪ ಹಾಕಬಹುದು. ಇದರಿಂದ ನಿಮ್ಮ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಯಾವುದೇ ಜೀವಿಯನ್ನು ಒತ್ತೆಯಾಳಾಗಿ, ಬಂಧನದಲ್ಲಿ ಇಟ್ಟುಕೊಳ್ಳಬಾರದು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಕೊರತೆ, ಪತಿ-ಪತ್ನಿಗಳ ನಡುವೆ ಕಲಹ ಉಂಟಾಗಲಿದೆ.

ಇದನ್ನು ಓದಿ : LPG Cylinders Just rs 500 : ಕೇವಲ 500 ರೂ. ಇಳಿಕೆಯಾಗಲಿದೆ ಎಲ್‌ಪಿಜಿ ಸಿಲಿಂಡರ್‌ !

ಇದನ್ನೂ ಓದಿ : Karnataka Players IPL Auction 2023: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಕರ್ನಾಟಕ ಆಟಗಾರರ ಕಂಪ್ಲೀಟ್ ಲಿಸ್ಟ್

vastu shashtra tips parrot keeping is auspicious or inauspicious know

Comments are closed.